ವಿವಿಧ ಆಕರ್ಷಕ ಫೀಚರ್ಸ್ ಗಳೊಂದಿಗೆ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯ, ಇಲ್ಲಿದೆ ಮಾಹಿತಿ

ನಾವಿಂದು ಸ್ಮಾರ್ಟ್ ಫೋನ್ (Smart Phone) ಯುಗದಲ್ಲಿದ್ದೇವೆ. ಹೀಗಾಗಿ ಹುಟ್ಟಿದ ಮಕ್ಕಳಿಂದ ಹಿಡಿದು ವಯೋ ವೃದ್ಧರ ಕೈಯಲ್ಲಿಯು ಸ್ಮಾರ್ಟ್ ಫೋನ್ ಗಳೇ. ಅದಲ್ಲದೇ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸ ಸ್ಮಾರ್ಟ್ ಫೋನ್ ಗಳ ಹಾವಳಿ. ಇತ್ತೀಚೆಗಿನ ದಿನಗಳಲ್ಲಿ ವಿವಿಧ ವಿನ್ಯಾಸ (Design) ಹಾಗೂ ಫೀಚರ್ಸ್ (Features) ಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಫೋನ್ ಪ್ರಿಯರ ಗಮನ ಸೆಳೆಯುತ್ತದೆ.

ಈಗಾಗಲೇ ಅನೇಕ ಸ್ಮಾರ್ಟ್ ಫೋನ್ ಕಂಪೆನಿಗಳು ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಅತ್ಯುತ್ತಮ ಫೀಚರ್ಸ್ ಗಳೊಂದಿಗೆ 20 ಸಾವಿರ ರೂಪಾಯಿಯೊಳಗಿನ ಸ್ಮಾರ್ಟ್ ಫೋನ್ ಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G (OnePlus Nord CE 3 Lite 5G): ಈ ಸ್ಮಾರ್ಟ್ ಫೋನ್‌ 19,999ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಈ ಸ್ಮಾರ್ಟ್ ಫೋನ್ 6.72 ಇಂಚಿನ 392 PPI, ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಅದರೊಂದಿಗೆ 120 Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದ್ದು, ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಸ್ಟೋರೇಜ್ ಬಗ್ಗೆ ಹೇಳುವುದಾದರೆ 8 GB RAM ಆಯ್ಕೆಯಲ್ಲಿ ಲಭ್ಯವಿದ್ದು, 108 MP + 2 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.

ರಿಯಲ್‌ಮಿ 11x 5G (Realme 11x 5G): ರಿಯಲ್‌ಮಿ 11x 5G ಸ್ಮಾರ್ಟ್ ಫೋನ್ 16,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, 6.72 ಇಂಚಿನ 392 PPI, ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ ಅನ್ನು ಹೊಂದಿದ್ದು, 120 Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಕಾಣಬಹುದು. ಅದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ ಬಲ ಹೊಂದಿದೆ. 6 GB RAM ನೊಂದಿಗೆ 64 MP + 2 MP ಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾವು ಗ್ರಾಹಕರಿಗೆ ಲಭ್ಯವಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 (Samsung Galaxy M34) : ಈ ಸ್ಯಾಮ್‌ಸಂಗ್‌ ಫೋನ್ 18,795 ರೂಗಳಲ್ಲಿ ಗ್ರಾಹಕರೂ ಖರೀದಿ ಮಾಡಬಹುದಾಗಿದೆ. ಈ ಫೋನ್ ನಲ್ಲಿ 6.5 ಇಂಚಿನ ಡಿಸ್‌ಪ್ಲೇ ಲಭ್ಯವಿದ್ದು, ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಅದಲ್ಲದೇ ಈ ಸ್ಯಾಮ್‌ಸಂಗ್‌ ಎಕ್ಸಿನೋಸ್‌ 1280 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6GB RAM ಆಯ್ಕೆ ಯೊಂದಿಗೆ 50MP + 8MP + 2MP ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 13MP ಸೆಲ್ಫಿ ಕ್ಯಾಮೆರಾ ಹೊಂದಿದ್ದು ಗ್ರಾಹಕ ರಿಗೆ ಇಷ್ಟವಾಗಲಿದೆ.

ಶಿಯೋಮಿ ರೆಡ್ಮಿ ನೋಟ್‌ (Xiaomi Redmi Note): ಫೋನ್ ಕಡಿಮೆ ಬೆಲೆಯಲ್ಲಿ ಅಂದರೆ 16,999 ರೂ.ಗಳಿಗೆ ಖರೀದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 6.67 ಇಂಚಿನ 395 PPI, ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಅದರೊಂದಿಗೆ 120 Hz ರಿಫ್ರೆಶ್ ರೇಟ್‌ ಅನ್ನು ಕಾಣಬಹುದಾಗಿದ್ದು, ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ 48 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದು.

ರಿಯಲ್‌ಮಿ (11 Realme 11): ಈ ಸ್ಮಾರ್ಟ್ ಫೋನ್ 18,999 ರೂ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ 6.72 ಇಂಚಿನ 392 PPI, ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ ಅನ್ನು ಹೊಂದಿದೆ. ಈ ಫೋನ್‌ ಸಹ 120 Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕ್ಯಾಮೆರಾದ ಬಗ್ಗೆ 108 MP + 2 MP ಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾವನ್ನುವನ್ನು ಹೊಂದಿದ್ದು ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ಇಷ್ಟವಾಗುತ್ತದೆ.

Leave a Reply

Your email address will not be published. Required fields are marked *