ಹಳ್ಳಿಗೆ ಬಾ ಎಂದರೆ ಇಲ್ಲ ಎನ್ನುತ್ತಿದ್ದ ಪತ್ನಿ, ಕೊನೆಗೆ ಪತಿಯೂ ಮಾಡಿದ ಕೆಲಸ ಎಂತಹದ್ದು ಗೊತ್ತಾ? ತಿಳಿದರೆ ಅಯ್ಯೋ ಹೇಳ್ತೀರಾ!!

ಇತ್ತೀಚೆಗಿನ ದಿನಗಳಲ್ಲಿ ಜೀವ ಕಳೆದುಕೊಳ್ಳಲು ಸಣ್ಣ ಸಣ್ಣ ಕಾರಣಗಳು ಸಾಕು. ಹೀಗಾಗಿ ಸಣ್ಣ ಕಾರಣಗಳಿಂದ ನೊಂ-ದು ಜೀವ ಕಳೆದುಕೊಳ್ಳುವ ಮುನ್ನ ತಾಳ್ಮೆಯಿಂದ ಯೋಚಿಸಿದರೆ ಬೇಡದ ಅ-ನಾಹುತಗಳಿಂದ ಪಾರಾಗಬಹುದು. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪ್ರೀತಿಸಿ ಮದುವೆ ಮಾಡಿಕೊಂಡ ಪತ್ನಿಯೂ ತಾನು ಹೇಳಿದ್ದನ್ನು ಕೇಳುತ್ತಿಲ್ಲ ಎಂದು ಪತಿಯು ನೊಂ-ದು ಜೀವ ಕಳೆದುಕೊಂಡ ಘಟನೆಯೊಂದು ನಡೆದಿದೆ.

ಈ ಘಟನೆಯೂ ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ (Honnahalli)ಯಲ್ಲಿ ನಡೆದಿದ್ದು, ಸುಖವಾಗಿ ಸಂಸಾರ ಮಾಡಿಕೊಂಡು ಇದ್ದ ಕುಟುಂಬವದು. ಆದರೆ ಪತ್ನಿಯೂ ಬೆಂಗಳೂರನ್ನು ಬಿಟ್ಟು ಹಳ್ಳಿಯಲ್ಲಿರುವ ಮನೆಗೆ ಮಾತ್ರ ಬರುವುದಿಲ್ಲ..ನೀನೇ ಬಂದು ತನ್ನ ಜೊತೆಯಲ್ಲಿರು ಎಂದಿದ್ದಾಳೆ. ಆದರೆ ಇದಕ್ಕೆ ಗಂಡನು ಒಪ್ಪಲಿಲ್ಲ. ಬದಲಾಗಿ ಪತ್ನಿಯನ್ನು ಊರಿಗೆ ಬರುವಂತೆ ಕರೆದಿದ್ದಾನೆ.

ಆದರೆ ಆಕೆಯ ಮಾತ್ರ ಇಲ್ಲ ಎನ್ನುವುದನ್ನು ಬಿಟ್ಟು ಮತ್ತೇನು ಹೇಳುತ್ತಿರಲಿಲ್ಲ. ಕೊನೆಗೆ ಪತ್ನಿಯೂ ಹೀಗೆನ್ನುತ್ತಿದ್ದಾಳಲ್ಲ ಎಂದು ನೊಂದು ಕೊನೆಗೆ ತನ್ನ ಜೀವಕ್ಕೆ ಅಂತ್ಯವಾಡಿಕೊಂಡಿದ್ದಾನೆ. ಈ ವ್ಯಕ್ತಿಯ ಹೆಸರು ವಸಂತಕುಮಾರ್ (Vasanth Kumar). ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಸಂತ ಕುಮಾರ್ ಕೆಲಸ ಮಾಡುತ್ತಿದ್ದ ವೇಳೆ ಬೆಂಗಳೂರಿನ ಯುವತಿಯನ್ನು ಪ್ರೀತಿಯ ಬಲೆಗೆ ಬಿದ್ದಿದ್ದಾನೆ. ಕೊನೆಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದರು.

ವಸಂತ ಕುಮಾರ್ ಅವರ ಊರು ಚಾಮರಾಜನಗರ ಜಿಲ್ಲೆ (Chamarajanagar District) ಯ ಹೊನ್ನಹಳ್ಳಿ (Honnahalli). ಅಲ್ಲಿ ಮನೆ ಹಾಗೂ ಜಮೀನು ಇರುವ ಕಾರಣ ಬೆಂಗಳೂರಿನಲ್ಲಿ ಇದ್ದದ್ದು ಸಾಕು ಎಂದು ತಮ್ಮ ಹಳ್ಳಿಗೆ ಹೋಗಿದ್ದು,ತನ್ನ ಮಡದಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಹೆಂಡತಿಗೆ ಮಾತ್ರ ಆ ಹಳ್ಳಿಯಲ್ಲಿ ಇರಲು ಆಗದೇ ವಾಪಸ್ಸು ಬಂದಿದ್ದಾಳೆ.

ಬೆಂಗಳೂರಿನಲ್ಲಿದ್ದ ಪತ್ನಿಯನ್ನು ವಸಂತ್ ಕುಮಾರ್ ಪದೇ ಪದೇ ಕರೆದಿದ್ದರೂ ಪತಿಯ ಮಾತಿಗೆ ಬೆಲೆ ಕೊಡದ ಕಾರಣ -ಡೆತ್‌ನೋಟ್ ಬರೆದಿಟ್ಟು ಪತಿ ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ (Chamarajanagara Gramanthara Police Station) ಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಸದ್ಯಕ್ಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *