ವಿಷ ಎಂದು ಜ್ಯೂಸ್ ಸೇವಿಸಿದರಾ ಚೈತ್ರಾ? ಉದ್ಯಮಿ ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಹೈಡ್ರಾಮಾ ಆಡಿದ್ದ ಚೈತ್ರಾ ಕುಂದಾಪುರ ಟೀಮ್, ವಿಡಿಯೋ ವೈರಲ್

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ ಕೋಟಿ ಕೋಟಿ ಹಣ ಪಡೆದು ವಂ-ಚಿಸಿರುವ ಪ್ರಕರಣದಲ್ಲಿ ಹೀಗಾಗಲೇ ಸಿಸಿಬಿ ವ-ಶದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಅವರು ಇದ್ದಾರೆ. ಸಿಸಿಬಿ ವಿಚಾರಣೆಗೆ ಒಳಪಟ್ಟಿರುವ ಚೈತ್ರಾ ಕುಂದಾಪುರರವರಿಗೆ ಸಂಬಂಧ ಪಟ್ಟಂತೆ ದಿನಕ್ಕೊಂದು ವಿಚಾರವು ಬಯಲಿಗೆ ಬರುತ್ತಿದೆ. ನಿನ್ನೆಯಷ್ಟೇ ವಿಚಾರಣೆ ವೇಳೆ ಚೈತ್ರಾ ಅವರ ಆರೋಗ್ಯದಲ್ಲಿ ಏ-ರುಪೇರು ಕಂಡು ಬಂದಿತ್ತು.

ಆ ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೈತ್ರಾ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನುವ ವಿಚಾರವು ಬೆಳಕಿಗೆ ಬಂದಿದೆ.ಈ ಬಗ್ಗೆ ಬಿಎಂಸಿಆರ್ಐ ಡೀನ್ ಮತ್ತು ನಿರ್ದೇಶಕ ಡಾ ರಮೇಶ್ ಕೃಷ್ಣ ಕೆ (Dr Ramesh Krishna K) ರವರು ಮಾಹಿತಿ ನೀಡಿದ್ದು, ಶುಕ್ರವಾರ ಬೆಳಗ್ಗೆ 9.15ಕ್ಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್’ಗೆ ಕರೆತರಲಾಯಿತು.

ರೋಗಿಗೆ ಈ ಮೊದಲೇ ಮೂರ್ಛೆ ರೋಗವಿತ್ತು. ಆದರೆ, ಔಷಧಿಗಳನ್ನು ಸೇವನೆ ಮಾಡುತ್ತಿರಲಿಲ್ಲ. ಇದೀಗ ಆಕೆಯ ಆರೋಗ್ಯ ಸ್ಥಿರವಾಗಿದೆ. ವಿಷ ಸೇವನೆ ಸಾಧ್ಯತೆಗಳು ಕಡಿಮೆಯಿದೆ. ಆರೋಗ್ಯ ಮೇಲ್ವಿಚಾರಣೆಗಾಗಿ ಐಸಿಯುವಿನಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದ್ದಾರೆ. ಹೀಗಿರುವಾಗಲೇ ಗೋವಿಂದ ಬಾಬು ಪೂಜಾರಿ (Govinda Babu Poojary)ಯವರಿಗೆ ವಂಚಿಸಿರುವ ಆರೋಪವನ್ನು ಎದುರಿಸುತ್ತಿರುವ ಚೈತ್ರಾ ಕುಂದಾಪುರರವರ ಮತ್ತೊಂದು ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಕಳೆದ ಎಪ್ರಿಲ್ 24 ರಂದು ಚೈತಾ ಎಂಡ್ ಗ್ಯಾಂ-ಗ್ ಉದ್ಯಮಿ ಮಂಗಮ್ಮನಪಾಳ್ಯ (Mangammana palya) ದಲ್ಲಿರುವ ಗೋವಿಂದ ಪೂಜಾರಿ ಕಚೇರಿಗೆ ಭೇಟಿ ನೀಡಿದ್ದಾರೆ. ವೇಳೆ ಹಣ ವಾಪಸ್‌ ಕೊಡುವ ಬಗ್ಗೆ ಮಾತುಕತೆಯೂ ನಡೆದಿದೆ. ಆ ಮಾತು ಕಥೆಯ ಸಿಸಿಟಿವಿ ವಿಡಿಯೋ (CCTV Video) ವೊಂದು ಲಭ್ಯವಾಗಿದ್ದು, ಈ ವಿಡಿಯೋದಲ್ಲಿ ಹೈ-ಡ್ರಾಮಾವೇ ನಡೆದಿದೆ ಎನ್ನುವುದನ್ನು ಪಕ್ಕಾ ಆಗಿದೆ.

ಹಣದ ವಿಚಾರವಾಗಿ ಮಾತುಕತೆಗೆ ಬಂದಿದ್ದ ಚೈತ್ರಾ ಕುಂದಾಪುರರವರ ತಂಡವು ಏನೇನು ಮಾಡಬೇಕು ಎಂದು ಪ್ರೀ ಪ್ಲಾನ್ ಮಾಡಿಕೊಂಡು ಬಂದಂತೆ ಇತ್ತು. ಮಾತುಕತೆಯ ವೇಳೆಯಲ್ಲಿ ಬ್ಯಾಗ್ ನಿಂದ ವಿ-ಷದ ಬಾಟಲ್ ತೆಗೆದು ಈ ವೇಳೆ ಗಗನ್ ಕಡೂರು (Gagan Kaduru) ನಾಟಕ ಆಡಿದ್ದಾನೆ. ವಿಷ ಕುಡಿದು ಗಗನ್ ಕಡೂರು ಕುಸಿದು ಬಿದ್ದಿದ್ದು, ಅಲ್ಲೆ ಇದ್ದಾ ಚೈತ್ರಾ ಕೂಡ ಅಯ್ಯೋ ದೇವ್ರೇ ಎಂದು ನಾಟಕ ಮಾಡಿದ್ದಾಳೆ.

ನೆಲಕ್ಕೆ ಬಿದ್ದು ಒದ್ದಾಡುವ ಗಗನ್‌ನನ್ನು ಚೈತ್ರಾ ಕುಂದಾಪುರ (Chaitra Kundapura), ಶ್ರೀಕಾಂತ್‌ (Shreekanth) , ಪ್ರಸಾದ್‌ ಬೈಂದೂರು (Prasad Bainduru) ಹಾಗೂ ಗೋವಿಂದ ಬಾಬು ಪೂಜಾರಿ (Govinda Babu Poojari) ಅವರ ಸಿಬ್ಬಂದಿ ಎತ್ತಿಕೊಂಡು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗಿದ್ದು, ಚೈತ್ರಾ ಕುಂದಾಪುರರವರ ಅಸಲಿ ಮುಖಗಳು ಹೊರ ಬೀಳುತ್ತಿದೆ

ಅದಲ್ಲದೇ, ಯಾವಾಗ ಮಾತುಕತೆಗಳು ವಿಫಲವಾಗಿ ತಮ್ಮ ಹಣ ಮರಳಿ ಬರುವುದಿಲ್ಲ ಎನ್ನುವುದು ತಿಳಿಯಿತೋ ಗೋವಿಂದ ಬಾಬು ಪೂಜಾರಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾವ ರೀತಿಯ ಟ್ವಿಸ್ಟ್ ಗಳು ಎದುರಾಗಲಿದೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *