ಅವಳ ಜೊತೆ ಡೇಟಿಂಗ್ ಮಾಡೋಕೆ ಕೂಡ ನನಗೆ ಇಷ್ಟ ಇಲ್ಲ.. ಅವಳನ್ನು ಕಂಡರೆ ನನಗೆ ಆಗುತ್ತಿಲ್ಲ ಪತ್ನಿಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಚಹಲ್!!

ತನ್ನ ಲವ್ ಸ್ಟೋರಿ ಬಗ್ಗೆ ಮಾತನಾಡಿದ ಆಟಗಾರ ಯಜುವೇಂದ್ರ ಚಹಾಲ್..

ಯೂಟ್ಯೂಬ್ ಚಾನಲ್‌ ( Youtube Chanel) ವೊಂದರ ಸಂದರ್ಶನದಲ್ಲಿ  ತಮಗೆ ಧನಶ್ರೀ (Dhanashree) ಪರಿಚಯವಾದದ್ದು ಹೇಗೆ ಹಾಗೂ ತಮ್ಮ ಲವ್ ಸ್ಟೋರಿ ಬಗ್ಗೆ ರಿವೀಲ್ ಮಾಡಿದ್ದಾರೆ. ಹೌದು ಸಂದರ್ಶನವೊಂದರಲ್ಲಿ ಮಾತನಾಡಿ ಚಹಾಲ್ (Chahal), ‘ಲಾಕ್‌ಡೌನ್‌ ಸಮಯದಲ್ಲಿ ಸುಮಾರು ಮೂರು ನಾಲ್ಕು ತಿಂಗಳುಗಳ ಕಾಲ ನಾನು ನಮ್ಮ ಊರಾದ ಗುರುಗಾಮ್‌ನಲ್ಲಿದ್ದೆ.

ಅದೇ ಮೊದಲ ಬಾರಿಗೆ ನಾನು ಅಷ್ಟು ಸಮಯ ಕುಟುಂಬದವರೊಂದಿಗೆ ಕಾಲ ಕಳೆದಿದ್ದೆ. ಈ ವೇಳೆ ನನಗೆ ನೃತ್ಯ ಕಲಿಯುವ ಆಸೆಯಾಗಿತ್ತು. ಧನಶ್ರೀ ಎಂಬುವವರು ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ನಾನು ಆನ್‌ಲೈನ್‌ ತರಗತಿ ಸೇರಿಕೊಂಡೆ’ ಎಂದಿದ್ದಾರೆ.

*ಧನಶ್ರೀ ಗುಣವನ್ನು ಹೊಗಳಿದ ಪತಿ ಚಹಾಲ್*
ಅದಲ್ಲದೆ ಮಾತು ಮುಂದುವರೆಸಿದ ಯಜುವೇಂದ್ರ ಚಹಾಲ್ (Yajuvendra Chahal) “ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿಯನ್ನು ಕಾಣುವ ಧನಶ್ರೀ ಅವರ ಗುಣ ನನಗೆ ತುಂಬಾ ಹಿಡಿಸಿತ್ತು. ಧನಶ್ರೀ ಅವರನ್ನು ಮದುವೆಯಾಗುವ ಬಗ್ಗೆ ನಾನು ನನ್ನ ಕುಟುಂಬದವರಿಗೆ ಹೇಳಿದ್ದೆ. ಕೊನೆಗೆ ಧನಶ್ರೀ ಅವರಲ್ಲೂ ಕೇಳಿದ್ದೆ. ನನಗೆ ಈಗ 30 ವರ್ಷ. ನನಗೆ ಡೇಟಿಂಗ್‌ಯೆಲ್ಲಾ ಹಿಡಿಸುವುದಿಲ್ಲ.

ನಾನು ನಿಮ್ಮನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂದು ನೇರವಾಗಿ ಹೇಳಿದ್ದೆ. ಅದಕ್ಕೆ ಅವರು ಒಪ್ಪಿರಲಿಲ್ಲ. ನಿಮ್ಮನ್ನು ನೇರವಾಗಿ ಭೇಟಿ ಮಾಡಿಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಕೊನೆಗೆ ಇಬ್ಬರು ಮುಂಬೈನಲ್ಲಿ ಭೇಟಿಯಾದೆವು. ಈಗ ವಿವಾಹವಾಗಿದ್ದೇವೆ’ ಎಂದು  ಬಹಳ ಸಂತೋಷದಿಂದ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *