ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರನ್ನು ಮದುವೆ ಆದರೆ ಅವರ ಜೀವನದಲ್ಲಿ ದೊಡ್ಡ ದುರಂತ ನಡೆಯಲಿದೆ ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ, ಕೇಳಿದ್ರೆ ಶಾಕ್ ಆಗುವುದು ಪಕ್ಕಾ!!

ಬಹುಬೇಡಿಕೆಯ ನಟಿ ರಶ್ಮಿಕಾ (Rashmika Mandanna) ಮಂದಣ್ಣ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾ ಅವಕಾಶಗಳು, ಟ್ರೋಲ್ ಗಳು ಇದು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನವರ ಜೀವನದ ಹಾದಿ.

ಖ್ಯಾತ ನಟಿಯಾಗಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣನವರ ಹೆಸರು ಖ್ಯಾತ ನಟ ವಿಜಯ್​ ದೇವರಕೊಂಡ (Vijay devarakonda) ರವರ ಜೊತೆಯಲ್ಲಿ ತಳುಕು ಹಾಕಿಕೊಂಡಿರುವುದು ಗೊತ್ತೇ ಇದೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಈ ಇಬ್ಬರು ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣನವರ ದಾಂಪತ್ಯ ಜೀವನದ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಫೇಮಸ್ ಆಗಿರುವ ವೇಣು ಸ್ವಾಮಿ (Venu Swami) ಭವಿಷ್ಯ ನುಡಿದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಬದುಕಿನ ಆರಂಭದಲ್ಲಿದ್ದಾಗ ಅಂದರೆ ಕಿರಿಕ್ ಪಾರ್ಟಿ ಸಿನಿಮಾದ ವೇಳೆಯಲ್ಲಿ ಇದೇ ವೇಣು ಸ್ವಾಮಿ ಅವರಿಂದಲೇ ವಿಶೇಷ ಪೂಜೆ ಮಾಡಿಸಿದ್ದರು. ಅಷ್ಟೇ ಅಲ್ಲದೇ ರಕ್ಷಿತ್ ಶೆಟ್ಟಿ (Rakshith Shetty) ಜೊತೆಗಿನ ಮದುವೆ ಮುರಿದುಕೊಂಡಿದ್ದು ಈ ಜ್ಯೋತಿಷಿಯವರ ಸಲಹೆಯಿಂದಲೇ ಎನ್ನಲಾಗುತ್ತಿದೆ. ಹೀಗಿರುವಾಗ ವೇಣು ಸ್ವಾಮಿಯವರು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡರವರ ವೈವಾಹಿಕ ಜೀವನ ಹೇಗಿರುತ್ತದೆ ಎನ್ನುವುದನ್ನು ಹೇಳಿದ್ದಾರೆ.

ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ​ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ”ರಶ್ಮಿಕಾ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ. ಅವರಿಬ್ಬರು ವಿವಾಹ ಆಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ. ಇದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿ-ಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ ” ಎಂದಿದ್ದಾರೆ.

“ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸಮಾಜಕ್ಕೆ ನಾಯಕಿ ಆಗಿರಬಹುದು ಆದರೆ ನನಗೆ ಕೇವಲ ಕ್ಲೈಂಟ್ ಅಷ್ಟೆ. ಅವರ ಜನಪ್ರಿಯತೆ ನೋಡಿ ನಾನು ಭವಿಷ್ಯ ಹೇಳುವುದಿಲ್ಲ, ಅವರ ಗ್ರಹಗತಿ ನೋಡಿ ಭವಿಷ್ಯ ಹೇಳುತ್ತೇನೆ. ನಾನು ಹೇಳಿದ ನಿಜ ಅವರಿಗೆ ಹಿಡಿಸಲಿಲ್ಲ, ಇರಲಿ ಪರವಾಗಿಲ್ಲ, ಆದರೆ ಅವರಿಬ್ಬರು ಮದುವೆಯಾಗಿ ದೂರಾಗುವುದು ಖಚಿತ” ಎನ್ನುವುದನ್ನು ಹೇಳಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವೇಣು ಸ್ವಾಮಿಯವರ ಮಾತು ಮೀರಿ ನಟ ವಿಜಯ್ ದೇವರಕೊಂಡ ಮದುವೆಯಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕು ಅಷ್ಟೇ.

Leave a Reply

Your email address will not be published. Required fields are marked *