ನನ್ನ ಹತ್ತಿರ 700 ರೂಪಾಯಿ ಇದೆ ಥಾರ್ ಬೇಕು ಎಂದ ಪುಟ್ಟ ಬಾಲಕ, ಬಾಲಕನ ಈ ಮಾತಿಗೆ ಆನಂದ್ ಮಹೀಂದ್ರಾ ಏನು ಮಡಿದರು ಗೊತ್ತಾ ? ನಿಜಕ್ಕೂ ಗ್ರೇಟ್!!

ಸೋಶಿಯಲ್ ಮೀಡಿಯಾ (Social Media) ಎಂದ ಮೇಲೆ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಆದರೆ ಇದೀಗ ಬಾಲಕನ ವಿಡಿಯೋವೊಂದು ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರ ಗಮನ ಸೆಳೆದಿದೆ. ನೋಯ್ಡಾ (Noida) ಮೂಲದ ಚೀಕು ಯಾದವ್ (Chiku Yadav) ಎನ್ನುವ ಪುಟ್ಟ ಬಾಲಕನು ವಿಡಿಯೋದಲ್ಲಿ ಥಾರ್ ಕಾರನ್ನು ಕೇವಲ 700 ರೂಪಾಯಿಗೆ ಖರೀದಿಸಬಹುದು ಎಂದಿದ್ದಾನೆ.

1 ನಿಮಿಷ ಮತ್ತು 29 ಸೆಕೆಂಡುಗಳ ಈ ವೀಡಿಯೊದಲ್ಲಿ, ತನ್ನ ತಂದೆಯ ಬಳಿ ಮಹೀಂದ್ರ ಥಾರ್ ಖರೀದಿಸುವ ಇಚ್ಛೆಯನ್ನು ಹೊರ ಹಾಕಿದ್ದಾನೆ. ಈ ವೇಳೆಯಲ್ಲಿ ಮಹೀಂದ್ರಾ ಕಾರುಗಳಾದ ಥಾರ್ ಮತ್ತು ಎಕ್ಸ್‌ಯುವಿ 700 ಒಂದೇ ಆಗಿದ್ದು, ಎರಡನ್ನೂ 700 ರೂಪಾಯಿಗೆ ಖರೀದಿಸಬಹುದು ಎಂದಿದ್ದಾನೆ. ಈ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದ ಜೊತೆಗೆ “ನನ್ನ ಸ್ನೇಹಿತ ಸೂನಿ ತಾರಾಪೊರೆವಾಲಾ ನನಗೆ ಇದನ್ನು ಕಳುಹಿಸಿದ್ದು “ನಾನು ಚೀಕುವನ್ನು ಪ್ರೀತಿಸುತ್ತೇನೆ” ಎಂದಿದ್ದಾರೆ. ಹಾಗಾಗಿ ನಾನು ಅವರ ಕೆಲವು ಪೋಸ್ಟ್‌ಗಳನ್ನು Instagram (@cheekuthenoidakid) ನಲ್ಲಿ ವೀಕ್ಷಿಸಿದ್ದೇನೆ. ಈಗ ನಾನು ಕೂಡ ಅವನನ್ನು ಪ್ರೀತಿಸುತ್ತೇನೆ. ನನ್ನ ಏಕೈಕ ಸಮಸ್ಯೆ ಏನೆಂದರೆ, ನಾವು ಆತನ ಹಕ್ಕನ್ನು ಮೌಲ್ಯೀಕರಿಸಿದರೆ ಮತ್ತು ಥಾರ್ ಅನ್ನು 700 ರೂಪಾಯಿಗೆ ಮಾರಾಟ ಮಾಡಿದರೆ, ನಾವು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ,” ಎಂದಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಮುಗ್ಧತೆಗೆ ಫಿದಾ ಆಗಿದ್ದಾರೆ. ಹೌದು, ವಿವಿಧ ರೀತಿಯ ಇಮೋಜಿಯನ್ನುಮೋಜಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವರಂತು ಉದ್ಯಮಿಯ ಬಳಿ ಬಾಲಕನ ಆಸೆಯನ್ನು ಈಡೇರಿಸಲು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ಬಾಲಕನ ಮುದ್ದಾದ ವಿಡಿಯೋವೊಂದು ವೈರಲ್ ಆಗುತ್ತಿವೆ.

Leave a Reply

Your email address will not be published. Required fields are marked *