ದುಬಾರಿ ಬೆಲೆಯ ಮಹೀಂದ್ರಾ ಥಾರ್ ಖರೀದಿಸಿದ ಬುಲೆಟ್ ಪ್ರಕಾಶ್ ಮಗ ರಕ್ಷಕ್, ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಸಿನಿಮಾರಂಗವು ನಟ ನಟಿಯರ ಮಕ್ಕಳಿಗೂ ಕೂಡ ಅವಕಾಶವನ್ನು ನೀಡಿದೆ. ಈ ವಿಚಾರದಲ್ಲಿ ಬುಲೆಟ್ ಪ್ರಕಾಶ್ (Bulet Prakash) ಅವರ ಮಗ ರಕ್ಷಕ್ (Rakshak) ಹೊರತಾಗಿಲ್ಲ. ಕನ್ನಡದ ಗುರು ಶಿಷ್ಯರು (Guru Shishyaru) ಸಿನಿಮಾದ ಮೂಲಕ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಶರಣ್ (Sharan) ನಿರ್ಮಾಣದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿದ್ದರು. ಈ ಸಿನಿಮಾವು ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದಿತ್ತು. ಮಕ್ಕಳ ಆಯ್ಕೆಯ ಬಗ್ಗೆ ಮಾತನಾಡಿದ್ದ ತರುಣ್ ಸುಧೀರ್ (Tarun Sudheer)ಮೊದಲಿಗೆ ಈ ಯೋಜನೆ ನಮ್ಮಲ್ಲಿರಲಿಲ್ಲ ಎಂದಿದ್ದರು.

ಅದಲ್ಲದೇ, ಈ ಹುಡುಗರ ಪಾತ್ರಕ್ಕೆ ಆಡಿಷನ್ ಕರೆಯನ್ನು ಘೋಷಣೆ ಮಾಡಲಾಗಿತ್ತು ಹಾಗೂ ಸುಮಾರು 600 ಅರ್ಜಿಗಳು ಸಹ ಬಂದಿದ್ದವು ಮತ್ತು ಈ ಪೈಕಿ 180 ಹುಡುಗರನ್ನು ಶಾರ್ಟ್ ಲಿಸ್ಟ್ ಕೂಡ ಮಾಡಲಾಗಿತ್ತು ಎಂದಿದ್ದರು. ಗುರುಶಿಷ್ಯರು ಸಿನಿಮಾದಲ್ಲಿ ತಾರೆಯರ ಮಕ್ಕಳು ಕೂಡ ಬಣ್ಣ ಹಚ್ಚಿದ್ದು, ಇದೀಗ ಬುಲೆಟ್ ಪ್ರಕಾಶ್ ಅವರ ಮಗ ನಟನೆಯಿಂದಲೇ ಮಿಂಚಿದ್ದಾರೆ.

ಬುಲೆಟ್ ಪ್ರಕಾಶ್ ಅವರಿಗೆ ತನ್ನ ಮಗ ರಕ್ಷಕ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಕನಸಿತ್ತು. ಹೀರೋ ಆಗಿ ಮಗನನ್ನು ತೆರೆ ಮೇಲೆ ನೋಡಬೇಕು ಆಸೆಯನ್ನು ಇಟ್ಟುಕೊಂಡಿದ್ದರು. ಕೊನೆಗೂ ಬುಲೆಟ್ ಪ್ರಕಾಶ್ ಅವರ ಕನಸು ನನಸಾಗಿದೆ. ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಗುರು ಶಿಷ್ಯರು ಸಿನಿಮಾದಲ್ಲಿ ನಟನೆಯ ಮೂಲಕವೇ ಗಮನ ಸೆಳೆದಿದ್ದು, ಎಲ್ಲರಿಗೂ ಕೂಡ ಹತ್ತಿರವಾಗಿದ್ದಾರೆ. ಇತ್ತೀಚೆಗಷ್ಟೇ ಅಕ್ಕನ ಮದುವೆ ಮಾಡಿ ಮುಗಿಸಿದ್ದ ರಕ್ಷಕ್ ಅವರು ದುಬಾರಿ ಬೆಲೆಯ ಕಾರನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅವರು ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ ಬಳಿಕ ಹೊಸ ಕಾರನ್ನು ಖರೀದಿಸಿದ್ದು, ಗುಡ್ ನ್ಯೂಸ್ ನೀಡಿದ್ದಾರೆ.

ಸಣ್ಣ ವಯಸ್ಸಿಗೆ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ನಟ ರಕ್ಷಕ್ ಅವರು ಮಹೀಂದ್ರಾ ಥಾರ್ (Mahindra Thar) ಕಾರು ಖರೀದಿ ಮಾಡಿದ್ದು, ಈ ಕಾರು ಕೆಂಪು ಬಣ್ಣದಲ್ಲಿದೆ. ಇದರ ಮುಂದೆ ನಟ ರಕ್ಷಕ್ ನಿಂತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದಲ್ಲದೇ ದುಬಾರಿ ಕಾರಿನ ಬೆಲೆಯೂ 15-17 ಲಕ್ಷ ರೂಪಾಯಿಗಳಾಗಿದೆ. ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಕಾರಿನ ಮುಂದೆ ನಿಂತಿರುವ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಫ್ಯಾನ್ಸ್ ಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಹದಿನೆಂಟು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಗುರು ಶಿಷ್ಯರು (Guru Shishyaru) ಸಿನಿಮಾದಿಂದ ಚಂದನವನಕ್ಕೆ ಎಂಟ್ರಿ ಕೊಟ್ಟ ರಕ್ಷಕ್ ಅವರು ಸಿನಿಮಾ ಅವಕಾಶದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸಂದರ್ಶನದಲ್ಲಿ ರಕ್ಷಕ್, “ನನಗೆ ಫಸ್ಟ್ ತರುಣ್ ಸರ್ ಆಫೀಸಿನಿಂದ ಕಾಲ್ ಬಂತು. ಸಿನಿಮಾದಲ್ಲಿ ಆಕ್ಟ್ ಮಾಡಲು ಇಂಟರೆಸ್ಟ್ ಇದೆಯಾ ಎಂದು ಕೇಳಿದ್ರು. ಖಂಡಿತ ಇದೆ ಎಂದು ಹೇಳಿದ್ದೆ.

ತರುಣ್ ಸರ್ ಆಫೀಸ್ ಗೆ ಕರೀತಾರೆ ಬನ್ನಿ ಎಂದಿದ್ರು. ತರುಣ್ ಅವರ ಬಳಿ ಹೋದಾಗ ಮನೆಯವರ ಯೋಗ ಕ್ಷೇಮ ವಿಚಾರಿಸಿದ್ರು. ಒಂದು ಸಿನಿಮಾ ಮಾಡ್ತಾ ಇದ್ದೇವೆ, ಒಂದೊಳ್ಳೆ ಪಾತ್ರ ಇದೆ ಮಾಡು ಅಂದ್ರು. ಪಾತ್ರದ ಬಗ್ಗೆ ಒನ್ ಲೈನ್ ಸ್ಟೋರಿ ಹೇಳಿದ್ರು. ಸ್ಪೋರ್ಟ್ ಸಿನಿಮಾ, ಬಾಶಾ ಎನ್ನುವ ಪಾತ್ರ ಎಂದಿದ್ದರು. ಖಂಡಿತ ಮಾಡ್ತೇವೆ ಎಂದೇಳಿದ್ದೆ. ಅಲ್ಲಿಂದ ಶುರುವಾದ ಜರ್ನಿ ಇಲ್ಲಿಗೆ ಬಂದು ತಲುಪಿದೆ” ಎಂದಿದ್ದರು. ನಟ ರಕ್ಷಕ್ ಪಾಲಿಗೆ ಇನ್ನಷ್ಟು ಅವಕಾಶಗಳು ಬರಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *