ಬಿಗ್ ಬಾಸ್ ಸೀಸನ್ 10 (Bigg Boss Sisan 10) ರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದ ರಕ್ಷಕ್ ಬುಲೆಟ್ (Rakshak Bullet) ಎಲ್ಲರಿಗೂ ಕೂಡ ಚಿರಪರಿಚಿತರು. ಹೌದು, ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ ಅವರು. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ ರಕ್ಷಕ್ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಶೋನಲ್ಲಿ ಸ್ಪರ್ಧಿಸುವ ಅವಕಾಶವೊಂದು ಬಂದಿತು.
ಸಿಕ್ಕ ಅವಕಾಶವನ್ನು ಮಿಸ್ ಮಾಡದೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು, ನಾಲ್ಕು ವಾರಗಳ ಕಾಲ ಚೆನ್ನಾಗಿ ಆಡಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಎರಡನೇ ವಾರ ರಕ್ಷಕ್ ಬುಲೆಟ್ ಮನೆಯ ಕ್ಯಾಪ್ಟನ್ ಆಗಿದ್ದರು. ”ಬುಲೆಟ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಎಂದು ಕಳಿಸಿದರೆ ಇನ್ನೂ ಸೈಕಲ್ ಹೊಡ್ಕೊಂಡ್ ಇದ್ದೀರಾ. ಸ್ಪೀಡು ಸಾಕಾಗುತ್ತಿಲ್ಲ ಬಾಸ್” ಎಂದು ಪತ್ರದ ಮೂಲಕ ಎ-ಚ್ಚರಿಸಿದ್ದರು.
ಎ-ಚ್ಚರಿಕೆಯನ್ನು ಗಂ-ಭೀರವಾಗಿ ತೆಗೆದುಕೊಂಡ ರಕ್ಷಕ್ ಬುಲೆಟ್ ಅವರು ಚೆನ್ನಾಗಿಯೇ ಆಡುತ್ತಿದ್ದರು. ಮೊದಲ ಬಾರಿಗೆ ನಾಮಿನೇಟ್ ಆಗಿ ಸೇಫ್ ಆಗದೇ ಎಲಿಮೀನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ರಕ್ಷಕ್ ಬುಲೆಟ್ ಅವರು ನಾನಾ ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ. ಅದಲ್ಲದೇ ಖಾಸಗಿ ಸುದ್ದಿ ವಾಹಿನಿ (Private News Chanel) ಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾತನಾಡಿದ್ದ ರಕ್ಷಕ್, “ನಾನು ಇನ್ನು ಬಿಗ್‌ಬಾಸ್ ಮನೆಯಲ್ಲಿ ಇರಬೇಕಿತ್ತು. ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನ್ಸುತ್ತೆ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ.
ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. ‘ಉತ್ತಮ’ ತಗೊಂಡೆ. ಆ ಬಗ್ಗೆ ಖುಷಿಯಿದೆದೆ. ಈ ವಾರ ಕಡಿಮೆ ಪರ್ಫಾರ್ಮೆನ್ಸ್ ಕೊಟ್ಟಿದ್ದು ಪ್ರತಾಪ್. ಮೋಸ್ಟ್ಲಿ ಮುಂದಿನ ವಾರ ನನ್ನ ಜಾಗದಲ್ಲಿ ಅವನು ಇರ್ತಾನೆ ಅಂದ್ಕೊಂಡಿದೀನಿ. ಎಂದಿದ್ದರು.ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಾಮಾಜಿಕ ಕೆಲಸ (Social Service) ಗಳನ್ನು ಮಾಡುತ್ತಿರುವ ರಕ್ಷಕ್ ಅವರು ಆಶ್ರಮ ಕಟ್ಟಲು ನೂರು ಮೂಟೆ ಸಿಮೆಂಟ್ ಗಳನ್ನು ನೀಡುವ ಮೂಲಕ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ರಕ್ಷಕ್ ಬುಲೆಟ್ ಅವರ ಈ ಕೆಲಸಕ್ಕೆ ಫ್ಯಾನ್ಸ್ ಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.