ಮಾಸ್ಕೋದಲ್ಲಿ ವೃತ್ತಾಕಾರದ ಕಟ್ಟಡಗಳು, ಈ ಕಟ್ಟಡಗಳ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಮನುಷ್ಯ ಎಷ್ಟು ಬುದ್ದಿವಂತನಾಗಿದ್ದಾನೆ ಎಂದರೆ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವುದನ್ನು ಕ್ಷಣಾರ್ಧದಲ್ಲಿಯೇ ತಿಳಿದುಕೊಳ್ಳುವ ತಾಕತ್ತನ್ನು ಹೊಂದಿದ್ದಾನೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಾ, ಹೊಸ ಹೊಸ ಆವಿಷ್ಕಾರ ಮಾಡಿದ್ದು, ತಂತ್ರಜ್ಞಾನಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಎಲ್ಲಾ ಕೆಲಸಗಳಿಗೂ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮಾನವನು ಅಭಿವೃದ್ಧಿ ಹೊಂದುತ್ತಿದ್ದಂತೆ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿದೆ. ಆದರೆ ಕಟ್ಟಡಗಳ ರಚನೆ ವಿನ್ಯಾಸ ನೋಡಿದರೆ ಮಾನವನ ಬುದ್ಧಿವಂತಿಕೆಯನ್ನು ಮೆಚ್ಚಲೇ ಬೇಕು. ಇದೀಗ ಮನುಷ್ಯನ ಬುದ್ಧಿವಂತಿಕೆಯನ್ನು ಕಂಡು ಅಚ್ಚರಿ ಪಡುವ ಕಟ್ಟಡಗಳು ಈ ಪ್ರಪಂಚದಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಾಸ್ಕೋ (Moscow) ದಲ್ಲಿ ವೃತ್ತಾಕಾರದ ವಸತಿಗಳು.

ಸಾಮಾನ್ಯವಾಗಿ ಆಯಾತಾಕಾರದ ಕಟ್ಟಡಗಳನ್ನು ನಿರ್ಮಿಸುವಾಗಲೇ ಸರಿಯಾದ ಪ್ಲಾನ್ ಮಾಡಿಕೊಳ್ಳಬೇಕಾಗುತ್ತದೆ. ವೃತ್ತಾಕಾರದ ವಸತಿ (Round Houses) ಗಳ ನಿರ್ಮಾಣ ಮಾಡುವಾಗ ಸೂಕ್ಷ್ಮವಾಗಿರಬೇಕಾಗುತ್ತದೆ. ರೌಂಡ್ ಹೌಸ್‌ಗಳು 1970 ರಲ್ಲಿ ಪಶ್ಚಿಮ ಮಾಸ್ಕೋದಲ್ಲಿ ವಾಸ್ತುಶಿಲ್ಪಿ ಯೆವ್ಗೆನಿ ಸ್ಟಾಮೊ (Yevgeny Stamo) ಮತ್ತು ಎಂಜಿನಿಯರ್ ಅಲೆಕ್ಸಾಂಡರ್ ಮಾರ್ಕೆಲೋವ್ (Engineer Aleksandr Markelov) ಅವರ ಪ್ಲಾನ್ ನಂತೆ ನಿರ್ಮಾಣವಾದ ಕಟ್ಟಡವಾಗಿದೆ.

Bublik apartment in russia

1970 ರ ವೇಳೆಯಲ್ಲಿ ಕಿರಿಯ ವಾಸ್ತುಶಿಲ್ಪಿಗಳಾದ ಸ್ಟಾಮೊ (Stamo) ಮತ್ತು ಮಾರ್ಕೆಲೋವ್ (Markelov) ಅವರು ವಿಶಿಷ್ಟವಾದ ಸೋವಿಯತ್ ಯೋಜಿತ ವಾಸ್ತುಶಿಲ್ಪದಿಂದ ವೈವಿಧ್ಯಗೊಳಿಸಲು ತಮ್ಮದೇ ಆದ ವಸತಿ ಯೋಜನೆಯನ್ನು ವಿನ್ಯಾಸಗೊಳಿಸಲು ಬಯಸಿದ್ದರು. ಮುಖ್ಯ ಕಮ್ಯುನಿಸ್ಟ್ ವಾಸ್ತುಶಿಲ್ಪದ ಪ್ರಾಧಿಕಾರ ಮತ್ತು ಮಾಸ್ಕೋ ಮಾಸ್‌ಪ್ರಾಜೆಕ್ಟ್ -1 ಸಂಸ್ಥೆಯು ಈ ಕಟ್ಟಡಗಳನ್ನು ನಿರ್ಮಿಸಲು ಅವಕಾಶವನ್ನು ಕಲ್ಪಿಸಿತ್ತು.ಈ ಎರಡು ಒಂಬತ್ತು ಮಹಡಿಗಳ ವಸತಿ ಕಟ್ಟಡಗಳಾಗಿವೆ.

ಈ ವಸತಿ ಕಟ್ಟಡಗಳನ್ನು ನೋಡುವಾಗ ಪ್ಯಾನಲ್ ಬ್ಲಾಕ್ ಮನೆಗಳಿಗಿಂತ ವಿಭಿನ್ನವಾದ ವಿನ್ಯಾಸದಲ್ಲಿ ನಿರ್ಮಿಸಲಾಗಿರುವುದು ವಿಶೇಷ ಎನ್ನಬಹುದು. ಮೊದಲ ವೃತ್ತಾಕಾರದ ಕಟ್ಟದಲ್ಲಿ 155 ಮೀಟರ್ (ಸುಮಾರು 500 ಅಡಿ) ಎತ್ತರದಲ್ಲಿದೆ. ಇದರಲ್ಲಿ 26 ಪ್ರವೇಶದ್ವಾರಗಳು, 913 ಅಪಾರ್ಟ್ಮೆಂಟ್ಗಳು ಮತ್ತು ಅಂಗಳವನ್ನು ಪ್ರವೇಶಿಸಲು ಆರು ದೊಡ್ಡ ಕಮಾನುಗಳನ್ನು ಹೊಂದಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಔಷಧಾಲಯಗಳು, ಅಂಗಡಿಗಳು , ಹೇರ್ ಸಲೂನ್‌ಗಳು, ಲಾಂಡ್ರಿ ಮತ್ತು ಟೈಲರ್ ಅಂಗಡಿ, ಮಕ್ಕಳ ಕ್ಲಬ್ ಮತ್ತು ಲೈಬ್ರರಿಗಳನ್ನು ಕಾಣಬಹುದು.

Bublik apartment in russia

ಅದಲ್ಲದೇ, 1979 ರಲ್ಲಿ, ಡೊವ್ಜೆಂಕೊ ಸ್ಟ್ರೀಟ್ (Dovzhenko Street) ನಲ್ಲಿ ಲ್ಲಿ ಎರಡನೇ ಕಟ್ಟಡವನ್ನು 26 ಪ್ರವೇಶದ್ವಾರಗಳೊಂದಿಗೆ ನಿರ್ಮಿಸಲಾಯಿತು. ಈ ಕಟ್ಟಡದಲ್ಲಿ 936 ಅಪಾರ್ಟ್ಮೆಂಟ್ ಗಳ ಜೊತೆಗೆ ಮಾಸ್ಫಿಲ್ಮ್ ಸ್ಟುಡಿಯೋ ಬಳಿ ನಿರ್ಮಿಸಲಾಗಿದೆ. ಈ ಮನೆಗಳು ಹೆಚ್ಚಾಗಿ ಸೋವಿಯತ್ ಚಲನಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಈ ಅಪಾರ್ಟ್ಮೆಂಟ್ ಗಳನ್ನು ಸಿನೆಮಾ ಮತ್ತು ರಂಗಭೂಮಿಯ ನಟರಿಗೆ ನೀಡಲಾಯಿತು.

ಅದರ ಜೊತೆಗೆ, ಉದ್ಯಾನವನ ಹಾಗೂ ಮಕ್ಕಳಿಗಾಗಿ ಆಟದ ಮೈದಾನಗಳನ್ನು ಹೊಂದಿದೆ. ಪ್ರಾಂಗಣವು ಕೆಟ್ಟ ಅಕೌಸ್ಟಿಕ್ಸ್ ಅನ್ನು ಹೊಂದಿದ್ದು, ಒಂದು ಸಣ್ಣ ಶಬ್ದವು ಬಹಳಷ್ಟು ಪ್ರತಿಧ್ವನಿಸುತ್ತದೆ. ಪ್ರಾಂಗಣದಲ್ಲಿ ಏನಾದರೂ ಶಬ್ದವಾದರೆ ಆ ಶಬ್ದವು ದ್ವಿಗುಣವಾಗಿ ಕೇಳುತ್ತದೆ. ಹೀಗೆ ನಾನಾ ವಿಶೇತೆಗಳನ್ನು ಹೊಂದಿರುವ ಈ ಕಟ್ಟಡದ ಒಳಹೊಕ್ಕಾಗ ಅದ್ಭುತ ಅನುವಾಗುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *