Bride after seeing boyfriend in marriage : ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಅಧ್ಯಾಯ. ಹೌದು ಈ ಮದುವೆ ಎನ್ನುವುದು ಎಲ್ಲರ ಜೀವನದಲ್ಲೂ ಮರೆಯಲಾಗದ ಅದ್ಭುತ ಕ್ಷಣ. ಎರಡು ಫ್ಯಾಮಿಲಿ ಹಾಗೂ ಎರಡು ಜೀವಗಳು ಒಂದಾಗುವ ಘಳಿಗೆಯದು. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಇದೀಗ ಲವ್ ಮ್ಯಾರೇಜ್ ಗಳು ಸಂಖ್ಯೆಯೂ ಹೆಚ್ಚಾಗಿದೆ.
ತಾನು ಇಷ್ಟ ಪಟ್ಟ ಹುಡುಗ ಹುಡುಗಿಯು ಒಬ್ಬರು ಇನ್ನೊಬ್ಬರನ್ನು ಮದುವೆಯಾಗಿ, ಜೀವನ ಸಾಗಿಸುವವರು ಇದ್ದಾರೆ. ಇನ್ನು ಕೆಲವರು ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಹೆಣ್ಣು ಗಂಡು ಒಳಪಡುವ ಈ ಬಂಧಕ್ಕೆ ಜೀವನದುದ್ದಕ್ಕೂ ಜೊತೆಯಾಗಿ ನಡೆಯಬೇಕು. ಎಲ್ಲೋ ಹುಟ್ಟಿದ ಹುಡುಗ, ಇನ್ನೆಲ್ಲೋ ಹುಟ್ಟಿದ ಹುಡುಗಿ ಜೊತೆಯಾಗಿ ಬದುಕುವುದು ಅಷ್ಟು ಸುಲಭವಾಗಿರುವುದಿಲ್ಲ. ಇಲ್ಲಿ ಗುಣ, ಸ್ವಭಾವ ಭಿನ್ನವಾಗಿರುತ್ತದೆ. ಹೀಗಾಗಿ ಹೊಂದಿಕೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಘನತೆ ಪ್ರಶ್ನೆಯಾಗಿದೆ. ಹಾಗಾಗಿ ಮದುವೆಗಳನ್ನು ಈಗೀಗ ಮದುವೆಯಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಲೇ ಇದೆ. ಹಿಂದೆ ಆಡಂಬರದ ಮದುವೆಗಳು ಶ್ರೀಮಂತರಿಗೆ ಮಾತ್ರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದವರು ಕೂಡ, ಆಡಂಬರದಿಂದ ಮದುವೆ ಮಾಡಿ, ತಮ್ಮ ಘನತೆ ಗೌರವವನ್ನು ಹೆಚ್ಚಿಸಿಕೊಳ್ಳುತ್ತಾರೆ.ಪ್ರತಿಯೊಬ್ಬರು ತಮ್ಮ ಮದುವೆ ಕುರಿತು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುವುದು ಸಹಜ.
ಆ ಕನಸಿನಂತೆ ಮದುವೆಯಾಗಲು ಇಷ್ಟ ಪಡುವುದು. ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭದಲ್ಲಿ ಹಾಡು ಕುಣಿತ ಎನ್ನುವುದು ವಿದೇಶಿ ಸಂಸ್ಕೃತಿಯನ್ನು ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ. ಅದು ಅಲ್ಲದೇ ಮದುವೆ ಸಮಾರಂಭದಲ್ಲಿ ಹಾಡು ಕುಣಿತದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧು ತನ್ನ ಪ್ರಿಯಕರನ ಜೊತೆಗೆ ಡಾನ್ಸ್ ಮಾಡಿದ್ದಾಳೆ.
ಈ ವಿಡಿಯೋದಲ್ಲಿ ವರ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಅದಲ್ಲದೆ, ಕುಟುಂಬ ಸದಸ್ಯರು ಹಾಗೂ ಪತಿಯ ಎದುರೆ ವಧು ಯಾವ ರೀತಿ ತನ್ನ ಪ್ರಿಯಕರನಿಗೆ ಆಂಟಿಕೊಂಡೇ ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿದರೆ ಅಚ್ಚರಿಯಾಗುವುದು ಗ್ಯಾರಂಟಿ.
ಮದುವೆ ಮಂಟಪದಲ್ಲಿ ವರನ ಎದುರೇ ಪ್ರಿಯಕರನ ಜೊತೆಗೆ ಸ್ಟೆಪ್ ಹಾಕಿದ ವಧು, ವಿಡಿಯೋ ವೈರಲ್
https://twitter.com/JaikyYadav16/status/1603381345975119872?t=0d2qweY4-gxxoh9e_nGTcA&s=08
ಈ ವಿಡಿಯೋದಲ್ಲಿ ವಧುವಿನ ಜೊತೆ ಡ್ಯಾನ್ಸ್ ಮಾಡುತ್ತಿರುವ ಯುವಕ ಆಕೆಯ ಪ್ರಿಯಕರ ಎಂಬುದು ಅಲ್ಲಿಂದ ಬಹುತೇಕರಿಗೆ ತಿಳಿದಿಲ್ಲ. ವಧು ಯುವಕನ ಜೊತೆಗೆ ಡಾನ್ಸ್ ಮಾಡುತ್ತಿದ್ದಂತೆ ಎಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದಾರೆ. `ತುಜ್ಕೊ ಹಿ ದುಲ್ಹಾ ಬನೌಂಗಿ` ಹಾಡು ಡಿಜೆಯಲ್ಲಿ ಪ್ಲೇ ಆಗಲು ಆರಂಭವಾಗುತ್ತಿದ್ದಂತೆ, ವಧು ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾಳೆ.
ಮದುವೆಯಾದ ನೂರೇ ದಿನದಲ್ಲಿ ಪತ್ನಿ ಮಹಾಲಕ್ಷ್ಮಿಯ ಅಸಲಿ ಮುಖವನ್ನು ಬಯಲು ಮಾಡಿದ ನಿರ್ಮಾಪಕ ರವೀಂದ್ರ ಚಂದ್ರಶೇಖರ್..!!
ಅದರ ಜೊತೆಗೆ ತನ್ನ ಪ್ರಿಯಕರನನ್ನು ತಬ್ಬಿಕೊಂಡು ನೃತ್ಯ ಮಾಡಲು ಶುರುಮಾಡುತ್ತಾಳೆ. ಈ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋಗೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಳಕೆ ದಾರನೊಬ್ಬ, ಅವರು ತುಂಬಾ ಮಜಾ ಮಾಡುತ್ತಿದ್ದಾರೆ ಎಂದಿದ್ದಾನೆ. ಒಟ್ಟಿನಲ್ಲಿ ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.