ಹಿರಿಯ ನಟಿ ಲೀಲಾವತಿಯವರ ಬೆಡ್ ರೂಮ್ ನಲ್ಲಿದ್ದ ಅಣ್ಣಾವ್ರ ಫೋಟೋದ ಬಗ್ಗೆ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ, ಇಲ್ಲಿದೆ ಅಸಲಿ ವಿಚಾರ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ಅವರು ಡಿಸೆಂಬರ್ 8 ರಂದು ವ-ಯೋಸಹಜ ಕಾ-ಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಅವರು ದೈಹಿಕವಾಗಿ ಇಲ್ಲ ಎನ್ನುವ ನೋ-ವು ಮಗ ವಿನೋದ್ ರಾಜ್ (Vinod Raj) ಹಾಗೂ ಅವರ ಕುಟುಂಬದವರನ್ನು ಬಾಧಿಸುತ್ತಿದೆ. ಸರಿಸುಮಾರು 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಲೀಲಾವತಿಯವರು ಸಮಾಜ ಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡವರು.

ಇದೀಗ ವೃತ್ತಿ ಜೀವನದ ಸಾಧನೆ ಹಾಗೂ ಸಮಾಜ ಸೇವೆಗಳ ಕುರಿತಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ನಟಿ ಲೀಲಾವತಿಯವರ ಬಗ್ಗೆ ಬ್ರಹ್ಮಾಂಡ ಗುರೂಜಿ (Brahmanda Guruji) ಯವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಸುದ್ದಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಲೀಲಾವತಿಯವರ ನಡೆ ನುಡಿ ಹಾಗೂ ಮನೆಯ ಬಗ್ಗೆ ಮಾತನಾಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಲೀಲಾವತಿಯವರು ಕಟ್ಟಿಸಿದ ಹೊಸ ಮನೆಗೆ ಒಮ್ಮೆ ಬ್ರಹ್ಮಾಂಡ ಗುರೂಜಿ ಹೋಗಿದ್ದರಂತೆ ಆ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಬ್ರಹ್ಮಾಂಡ ಗುರೂಜಿ “ಮನುಷ್ಯನಿಗೇನು ಅಂದ್ರೆ, ಮನುಷತ್ವ ಮುಖ್ಯ. ಲೀಲಾವತಿಯವರಿಗೆ ಆತ್ಮೀಯತೆ ಜಾಸ್ತಿ ಇಂಪಾರ್ಟೆಂಟ್. ಡಾಮಿನೇಷನ್ ಜಾಸ್ತಿ ಇತ್ತು. ಪ್ರೀತಿ ವಾತ್ಸಲ್ಯ ಜಾಸ್ತಿ ಇರಬೇಕು ಅಂತಿತ್ತು. ಅದಕ್ಕೆ ಮಗನನ್ನೇ ಹೆಚ್ಚಾಗಿ ಜೊತೆಯಲ್ಲೇ ಇಟ್ಟುಕೊಂಡುಬಿಟ್ಟರು. ಅವನನ್ನು ಸ್ವಲ್ಪ ಫ್ರೀ ಬಿಟ್ಟಿದ್ದರೆ, ಅವನು ಧೈರ್ಯವಾಗಿರುತ್ತಿದ್ದನೋ ಏನೋ? ಏನಾಗಿದೆ ವಿನೋದ್‌ಗೆ ಧೈರ್ಯವಿಲ್ಲ.” ಎಂದಿದ್ದಾರೆ.

ಅಷ್ಟೇ ಅಲ್ಲದೆ ಬೆಡ್‌ರೂಂನಲ್ಲಿದ್ದ ಫೋಟೋದ ಬಗ್ಗೆ ಈ ವೇಳೆಯೆ ಬಾಯಿ ಬಿಟ್ಟಿದ್ದಾರೆ. “ಹೊಸ ಮನೆಗೆ ಹೋದ್ಮೇಲೂ ಅವಾರ್ಡ್‌ಗಳನ್ನು ತೋರಿಸಿದ್ರು. ಬೆಡ್‌ ರೂಮ್‌ನಲ್ಲಿ ರಾಜ್‌ಕುಮಾರ್‌ಗೆ ಊಟ ಮಾಡಿಸುತ್ತಿರುವ ಫೋಟೊವನ್ನು ತೋರಿಸಿದ್ರು. ಎಷ್ಟು ಚೆನ್ನಾಗಿದೆ. ಅದನ್ನು ನೀವೇನಾದರೂ ನೋಡಿದ್ರೆ, ಅಯ್ಯೋ ರಾಜ್‌ಕುಮಾರ್ ಅನ್ನು ಎಷ್ಟು ಪ್ರೀತಿ ಮಾಡುತ್ತಿದ್ರು ಅಂತ ಹೇಳತಕ್ಕಂತಹದ್ದು. ಪುಟಾಣಿ ಮಗುವನ್ನು ಇಟ್ಟುಕೊಂಡು, ರಾಜ್‌ಕುಮಾರ್ ಫ್ಯಾಮಿಲಿಯನ್ನು ಲವ್ ಮಾಡಿಕೊಂಡು ಎಲ್ಲರನ್ನೂ ಬಹಳ ವಿಶೇಷವಾಗಿ ನೋಡುತ್ತಾರೆ.

ಇವತ್ತು ವಿನೋದ್‌ಗೆ ಹೆಂಡ್ತಿ ಮಗ ಇದ್ದರೂ ಸಹ, ಏನು ಮಾಡೋದು..? ಅವರ ಜೊತೆ ಹೇಗೆ ಹೋಗೋದು..? ಇವರನ್ನು ಬಿಟ್ಟು ಹೇಗೆ ಹೋಗೋದು ಅನ್ನೋದು ಕೂಡ ತಲೆ ಓಡುತ್ತಿಲ್ಲ. ಬಿಕಾಂ ಎಲ್ಲಾ ಓದಿ ಬುದ್ದಿ ಚೆನ್ನಾಗಿದೆ. ತಾಯಿ ಇಲ್ಲದೆ ಏನು ಮಾಡಬೇಕು ಅಂತ ದಿಕ್ಕು ತೋಚುತ್ತಿಲ್ಲ. ಲೀಲಾವತಿಯವರು ಅದೆಷ್ಟೋ ಲೈಟ್ ಮ್ಯಾನ್‌ಗಳಿಗೆ ಜೀವನ ಕೊಟ್ಟಿದ್ದಾರೆ.

ತಮಿಳುನಾಡಿನಲ್ಲಿ 30 ಜನ ಊಟಕ್ಕೆ ಗತಿ ಇಲ್ಲದ ಟೆಕ್ನಿಷಿಯನ್ಸ್‌ ಇದ್ದಾರೆ.ಆರ್ಟಿಸ್ಟ್‌ ಇದ್ದಾರೆ. ಅವರೆಲ್ಲ ಎವಿಎಂ ಸ್ಟುಡಿಯೋ ಹಿಂದೆ ಗುಡಿಸಲು ಕಟ್ಟಿಕೊಂಡು ಇದ್ದಾರೆ. ಅವರೆಲ್ಲರಿಗೂ ಲಿಸ್ಟ್ ಹಾಕೊಂಡು ಅವರಿಗಾಗಿ ಹಣ ಇಟ್ಟಿದ್ದಾರೆ. ಅವರಿಗೂ 5 ಸಾವಿರ ಹೋಗಲಿ, 3 ಸಾವಿರ ಹೋಗಲಿ ಅನ್ನೋ ಕೆಲಸ ಮಾಡಿದ್ದಾರೆ. ಕನ್ನಡ ಕಲಾವಿದರಿಗೂ ಪೆನ್ಷನ್ ಬರಲಿ ಅಂತ ಮಾಡಿದ್ದಾರೆ.” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *