ಎಲ್ಲರ ಮುಂದೆಯೇ ಜಗಳ ಆಡುತ್ತಿರುವ ಬಾಲಿವುಡ್‌ನ ಮುದ್ದಾದ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ, ಏನಾಗಿದೆ ಇವರ ಮಧ್ಯೆ?..

ಬಾಲಿವುಡ್‌ನ ಮುದ್ದಾದ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನವು ಮುರಿದಿದ್ದು ಡೈವೋರ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ನಟಿ ಐಶ್ವರ್ಯ ರೈಯಾಗಲಿ, ಅಭಿಷೇಕ್ ಬಚ್ಚನ್ ಫ್ಯಾಮಿಲಿಯಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ಹಿಂದೆ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ಅವರು, ಈ ಜೋಡಿ ಎಷ್ಟು ಬಾರಿ ಜಗಳವಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದರು. “ಓಹ್, ಪ್ರತಿದಿನ” ಎಂದು ಹೇಳಿದ್ದರು. “ಆದರೆ ಅವು ಜಗಳಗಳಲ್ಲ, ಭಿನ್ನಾಭಿಪ್ರಾಯಗಳಿದ್ದಂತೆ. ಗಂಭೀರವಲ್ಲ… ಅದೊಂದು ರೀತಿಯ ಆರೋಗ್ಯಕರ ಚರ್ಚೆ ಎಂದೇ ಹೇಳಬಹುದು” ಎಂದಿದ್ದರು.

ಆದರೆ ಇದೀಗ ಬಾಲಿವುಡ್ ನ ಈ ಜೋಡಿ ಸಾರ್ವಜನಿಕವಾಗಿ ಜಗಳ ಆಡುತ್ತಿರುವ ಮೂಲಕ ಸುದ್ದಿಯಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಂದ ಮಾಹಿತಿಯ ಪ್ರಕಾರವಾಗಿ ಐಶ್ವರ್ಯ ರೈ ಬಚ್ಚನ್ (Aishwarya Rai) ಅವರು ತಮ್ಮ ಅತ್ತೆ-ಮಾವನ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿತ್ತು.

ಆದರೆ ಅಭಿಷೇಕ್ (Abhishek Bachchan) ಮತ್ತು ಐಶ್ವರ್ಯರವರು ತಮ್ಮ ಮಗುವಿನ ಸಲುವಾಗಿ ಪ್ರತ್ಯೇಕವಾಗಿ ಒಟ್ಟಿಗೆ ವಾಸುತ್ತಿದ್ದರು.ಇಬ್ಬರೂ ಕೂಡ ತುಂಬಾ ಸಮಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಈಗ ಎಲ್ಲಾ ವಿಷಯಗಳು ನಿರ್ಧಾರವಾಗುವ ಹಂತಕ್ಕೆ ಬಂದು ತಲುಪಿವೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿತ್ತು.

ಆದರೆ ಇದೀಗ ಅಭಿಷೇಕ್‌ ಮತ್ತು ಐ‍ಶ್ವರ್ಯಾ ಸಾರ್ವಜನಿಕವಾಗಿ ಜ-ಗಳವಾಡಿದ ಹಲವು ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವೊಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ದಂಪತಿ ಹೋದರೆ, ಪಾಪರಾಜಿಗಳು ಐಶ್ವರ್ಯಾ ಸಿಂಗಲ್ ಆಗಿರುವ ಫೋಟೋ ಬೇಕೆಂದು ಮನವಿ ಮಾಡುತ್ತಿದ್ದರು. ಈ ಕಾರಣದಿಂದಾಗಿ ನಟ ಅಭಿಷೇಕ್ ಬಚ್ಚನ್ ಬೇ-ಸರಗೊಂದು ಆಕೆಯ ಜೊತೆ ಜಗಳವಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಶಾ-ಕ್ ಆಗಿದ್ದಾರೆ.

Leave a Reply

Your email address will not be published. Required fields are marked *