ಮುದ್ದಿನ ಮಗಳ ಮುಖ ರಿವೀಲ್ ಮಾಡಿದ ಬಾಲಿವುಡ್ ಜೋಡಿ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮಗಳು ಎಷ್ಟು ಕ್ಯೂಟ್ ನೋಡಿ ಇಲ್ಲದೆ ಫೋಟೋ..

ಬಾಲಿವುಡ್ ನ ಮುದ್ದಾದ ಜೋಡಿಯಲ್ಲಿ ಒಂದು ಈ ರಣಬೀರ್ ಕಪೂರ್ (Ranabeer Kapoor) – ಆಲಿಯಾ ಭಟ್ (Aaliya Bhat) . ವೃತ್ತಿ ಜೀವನದ ವೈಯುಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದು ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಈ ದಂಪತಿ ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋ ರಿವೀಲ್ (Photo Reveal) ಮಾಡಿ, ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ.

ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಅವರು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ವರ್ಷ ನವೆಂಬರ್‌ 6, 2022ರಂದು ಇವರಿಗೆ ರಾಹಾ (Raha) ಎಂಬ ಮಗಳು ಜನಿಸಿದ್ದಳು. ಮುದ್ದಿನ ಮಗಳು ರಾಹಾಳ ಮುಖವನ್ನು ಇಲ್ಲಿಯವರೆಗೆ ರಿವೀಲ್ ಮಾಡಿರಲಿಲ್ಲ. ಆದರೆ ಇದೀಗ ಕ್ರಿಸ್‌ಮಸ್‌ ಹಬ್ಬ (Christmas festival)ದ ಸಮಯದಲ್ಲಿ ತಮ್ಮ ಮಗಳ ಮುಖವನ್ನು ತೋರಿಸಿದ್ದಾರೆ.

ಬಾಲಿವುಡ್‌ ನಟಿ ಆಲಿಯಾ ಭಟ್‌-ರಣಬೀರ್‌ ಕಪೂರ್‌ ಅವರು ಇಂದು ಇದೇ ಮೊದಲ ಬಾರಿಗೆ ತಮ್ಮ ಪುಟ್ಟ ಮಗು “ರಾಹಾʼಳ ಮೊಗವನ್ನು ರಿವೀಲ್ ಮಾಡಿದ್ದಾರೆ. ಹೌದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಾಳಿ ಮಗುವಿನೊಂದಿಗೆ ಇರುವ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದಾರೆ. ಕ್ರಿಸ್‌ಮಸ್‌ ಹಬ್ಬದ ದಿನ ಇವರಿಬ್ಬರು ತಮ್ಮ ಪುಟ್ಟ ಮಗುವನ್ನು ಫ್ಯಾನ್ಸ್ ಗಳಿಗೆ ತೋರಿಸಿದ್ದಾರೆ.

ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತವಾಗಿ ಮುಂಬೈನ ಜುಹು (Mumbai Juhu) ವಿನಲ್ಲಿ ಕಪೂರ್‌ ಅವರ ಕ್ರಿಸ್‌ಮಸ್‌ ಪಾರ್ಟಿ (Christmas party) ಯನ್ನು ಏರ್ಪಡಿಸಲಾಗಿತ್ತು. ಈ ಪಾರ್ಟಿಗೆ ಪುಟ್ಟ ಕಂದಮ್ಮನ ಜೊತೆಗೆ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಆಗಮಿಸಿದ್ದರು. ಮುದ್ದಿನ ಮಗಳು ರಾಹಾ ಕೆಂಪು ವೆಲ್ವೆಟ್‌ ಬೂಟು ಧರಿಸಿ, ಬಿಳಿ ಮತ್ತು ಗುಲಾಬಿ ಉಡುಗೆ ತೊಟ್ಟಿದ್ದಳು. ಆಕೆಯ ತಾಯಿ ಆಲಿಯಾ ಭಟ್‌ ಹೂವಿನ ಚಿತ್ತಾರದ ಕಪ್ಪು ಬಟ್ಟೆ ಧರಿಸಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು.

ರಣಬೀರ್‌ ಕಪೂರ್‌ ಕಪ್ಪು ಬಣ್ಣದ ಜೀನ್ಸ್‌ ಮತ್ತು ಕಪ್ಪು ಜಾಕೆಟ್‌ ಧರಿಸಿದ್ದರು. ಕ್ರಿಸ್ಮಸ್‌ ಪಾರ್ಟಿಗೆ ಬಂದಾಗ ಅಲ್ಲಿದ್ದ ಮಾಧ್ಯಮದವರಿಗೆ ರಾಹಾಳ ಮೊಗವನ್ನು ರಿವೀಲ್ ಮಾಡಿದ್ದಾರೆ. ಸೆಲೆಬ್ರಿಟಿ ಜೋಡಿಯ ಮುದ್ದಿನ ಮಗಳು ರಾಹಾಳನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ನಟಿಯ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದು, ಇವಳು ನೋಡಲು ರಿಶಿ ಕಪೂರ್‌ನ ಫಿಮೇಲ್‌ ವರ್ಷನ್‌ನಂತೆ ಇದ್ದಾಳೆ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಕರೀನಾ ಕಪೂರ್‌ನ ನೀಲಿ ಕಣ್ಣುಗಳನ್ನು ಹೊಂದಿದ್ದಾಳೆ ಎಂದಿದ್ದಾರೆ. ಇನ್ನು ಕೆಲವರು ತಾತನದ್ದೇ ಹೋಲಿಕೆ ಎಂದಿದ್ದಾರೆ.

Leave a Reply

Your email address will not be published. Required fields are marked *