ಸೋಶಿಯಲ್ ಮೀಡಿಯಾ (Social Media) ದಲ್ಲಿ ನಟಿಯರ ಡೀಪ್ ಫೇಕ್ (Deep Fake) ವಿಡಿಯೋಗಳು ವೈರಲ್ ಆಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಯುವತಿಯ ಮುಖಕ್ಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನವರ ಮುಖವನ್ನು ಎಡಿಟ್ ಮಾಡಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಆದರೆ ಇದೀಗ ಬಾಲಿವುಡ್ ನಟಿ ಕಾಜೋಲ್ (Kajol) ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.ಈ ವಿಡಿಯೋದಲ್ಲಿ ನಟಿ ಕಾಜೋಲ್ (Kajol) ನ ಮುಖವನ್ನು ಬಳಸಿಕೊಂಡು ಮಹಿಳೆಯೊಬ್ಬರು ಕ್ಯಾಮೆರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ನೋಡಿದರೆ ಇದರಲ್ಲಿರುವವರು ನಟಿ ಕಾಜೋಲ್ ಎಂದು ಭಾವಿಸಿದರೆ ನಿಮ್ಮ ಊ-ಹೆಯೂ ತಪ್ಪು.
ಇದು ನಟಿ ಕಾಜೋಲ್ ಅಲ್ಲ. ಕಾಜೋಲ್ ಅವರ ಮುಖವನ್ನು ವಿಡಿಯೋದಲ್ಲಿ ಮಾರ್ಫಿಂಗ್ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದ ಹಿಂದಿನ ಅಸಲಿತೆ ಯನ್ನು ಪರಿಶೀಲನೆ ಮಾಡಿದಾಗ ಇದರಲ್ಲಿರುವ ಮಹಿಳೆಯನ್ನು ಬ್ರಿಟಿಷ್ ಸೋಶಿಯಲ್ ಮೀಡಿಯಾ ಪ್ರಬಾವಿ ರೋಸಿ ಬ್ರೀನ್ (Rosi Breen) ಎನ್ನಲಾಗಿದೆ.
ಈ ರೋಸಿ ಬ್ರೀನ್ ಎನ್ನುವ ಮಹಿಳೆಯೂ 2023ರ ಜೂನ್ 5 ರಂದು ಗೆಟ್ ರೆಡಿ ವಿತ್ ಮಿ (Get ready with me) ಟಿಕ್ ಟಾಕ್ ಟ್ರೆಂಡ್ ಗಾಗಿ ನಲ್ಲಿ ತಮ್ಮ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಇದೀಗ ಆ ವಿಡಿಯೋಗೆ ನಟಿ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಿ ಅವರು ಬಟ್ಟೆ ಬದಲಾಯಿಸುವ ರೀತಿಯಲ್ಲಿ ತೋರಿಸಲಾಗಿದೆ. ಹೀಗಾಗಿ ರೋಸಿ ಬ್ರಿನ್ ಅವರ ವಿಡಿಯೊಗೆ ಕಾಜೋಲ್ ಅವರ ಮುಖವನ್ನು ಡೀಪ್‌ಫೇಕ್ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.