ಮದುವೆಗೂ ಮುಂಚೆ ದೀಪಿಕಾ ಪಡುಕೋಣೆ ಎಷ್ಟು ಜನ ಹುಡುಗರ ಜೋತೆ ಸಂಬಂಧ ಇಟ್ಟು ಕೊಂಡಿದ್ದರು ಗೊತ್ತಾ!! ಇಲ್ಲಿದೆ ನೋಡಿ ಮಾಹಿತಿ!!

ಬಾಲಿವುಡ್ ನಲ್ಲಿ ಡೇಟಿಂಗ್ (Dating) ನಲ್ಲಿರುವ ಹಲವು ಜೋಡಿಗಳು ಕಾಣಸಿಗುತ್ತಾರೆ. ಅದಲ್ಲದೇ, ಕೆಲವರಂತೂ ಹಲವು ವರ್ಷಗಳ ಕಾಲ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ ಇನ್ನು ಕೆಲವರು ವೈಯಕ್ತಿಕ ಕಾರಣಗಳಿಂದಲೂ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ನಟಿಯರು ಬಾಲಿವುಡ್ ನ ನಟರ ಜೊತೆಗೆ ಡೇಟಿಂಗ್ ನಲ್ಲಿ ಕೂಡ ಇದ್ದರು. ಈ ವಿಚಾರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ಹೊರತಾಗಿಲ್ಲ.

ಸದ್ಯಕ್ಕೆ ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ರಣವೀರ್ ​ ಸಿಂಗ್​ (Ranaveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಯು ಒಬ್ಬರು. ಈ ಮುದ್ದಾದ ಜೋಡಿಯು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಆದರೆ ನಟಿ ದೀಪಿಕಾ ಪಡುಕೋಣೆಯವರು ರಣವೀರ್ ಸಿಂಗ್ ಅವರನ್ನು ಮದುವೆಯಾಗುವ ಮುಂಚೆಯೇ ಹಲವು ನಟರ ಜೊತೆಗೆ ಡೇಟಿಂಗ್ ನಲ್ಲಿದ್ದರು. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಬಹುದು.

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯವರು ಮೊದಲ ಬಾರಿಗೆ ಬೆಂಗಳೂರಿ (Banglore) ನಿಂದ ಮುಂಬೈ (Mumbai) ಗೆ ಬಂದಾಗ, ಅವರು ಮಾಡೆಲ್ ಮತ್ತು ಉದ್ಯಮಿ ನಿಹಾರ್ ಪಾಂಡ್ಯ (Nihar Pandya) ಅವರ ಪರಿಚಯವಾಯಿತು. ಈ ಪರಿಚಯವು ಪ್ರೀತಿಗೆ ತಿರುಗಿ ಕೊನೆಗೆ ಇಬ್ಬರೂ ಡೇಟಿಂಗ್ ನಲ್ಲಿದ್ದರು. ಒಂದು ಹಂತದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು ಎನ್ನಲಾಗುತ್ತಿತ್ತು. ಆದರೆ ಕೊನೆಗೆ ನಿಹಾರ್ ಪಾಂಡ್ಯರವರು ಗಾಯಕಿ ನೀತಿ ಮೋಹನ್ (Neethi Mohan)ಅವರನ್ನು ವಿವಾಹವಾಗುವ ಮೂಲಕ ದೀಪಿಕಾರವರ ಜೊತೆಗಿನ ಸಂಬಂಧಕ್ಕೆ ಪೂರ್ಣವಿರಾಮ ಹಾಕಿದ್ದರು.

ನಟಿ ದೀಪಿಕಾ ಪಡುಕೋಣೆ ಧೋನಿ ಜೊತೆ ಡೇಟಿಂಗ್ ಮಾಡಿದ್ದರು. 2007ರಲ್ಲಿ ಅವರ ಸಂಬಂಧದ ವ-ದಂತಿಗಳು ಕೇಳಿ ಬಂದಿತ್ತು. ಧೋನಿ (Dhoni) ಅವರು ದೀಪಿಕಾ ಮೇಲೆ ಅಪಾರವಾದ ಕ್ರಶ್ ಹೊಂದಿರುವುದನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಅವರು ದೀಪಿಕಾ ಅಭಿನಯದ ‘ಓಂ ಶಾಂತಿ ಓಂ’ (Om Shanthi Om) ಚಿತ್ರದ ವಿಶೇಷ ಪ್ರದರ್ಶನಕ್ಕೆ ವಿನಂತಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯವನ್ನು ವೀಕ್ಷಿಸಲು ಅವರನ್ನು ಪರ್ಸನಲ್ಲಾಗಿ ಆಹ್ವಾನಿಸಿದ್ದರು.

ಇತ್ತ ನಟಿ ದೀಪಿಕಾ ಧೋನಿಯ ಆಹ್ವಾನವನ್ನು ಸ್ವೀಕರಿಸಿ ಹೋಗಿದ್ದರು. ನಾಟು ದೀಪಿಕಾ ಅಭಿನಯದ ‘ಓಂ ಶಾಂತಿ ಓಂ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆದ ಬಳಿಕ ಇವರಿಬ್ಬರ ಸಂಬಂಧವು ಅಲ್ಲಿಗೆ ಕೊನೆಯಾಗಿತ್ತು. ಕ್ರಿಕೆಟಿಗ ಯುವರಾಜ್ ಸಿಂಗ್ (Yuvaraj Singh) ಜೊತೆಗೆ ದೀಪಿಕಾ ಪಡುಕೋಣೆ ಡೇಟಿಂಗ್ ನಲ್ಲಿದ್ದರು. ಟಿ 20 ವಿಶ್ವಕಪ್ (T 20 World Cup) ನಂತರ ಇಬ್ಬರೂ ಭೇಟಿಯಾಗಿ, ತುಂಬಾ ಹತ್ತಿರವಾದರು. ಆದರೆ ಇವರಿಬ್ಬರ ಸಂಬಂಧವು ಹೆಚ್ಚು ದಿನ ಉಳಿಯಲಿಲ್ಲ.

ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಯುವರಾಜ್ ಸಿಂಗ್, “ನಾನು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದೆ. ಮುಂಬೈನ ಕಾಮನ್ ಫ್ರೆಂಡ್ ಮೂಲಕ ದೀಪಿಕಾಳನ್ನು ಭೇಟಿಯಾದೆ. ಒಬ್ಬರನ್ನೊಬ್ಬರು ಇಷ್ಟಪಟ್ಟೆವು. ಅರ್ಥ ಮಾಡಿಕೊಳ್ಳಲು ಯತ್ನಿಸಿದೆವು. ಆದರೆ, ಅದಕ್ಕೆ ಹೆಚ್ಚು ಸಮಯ ಮೀಸಲಿಡಲಿಲ್ಲ. ಷಯಗಳು ಬದಲಾದಂತೆ ಅವಳು ಮುಂದುವರಿದಳು. ನಾನು ನನ್ನ ದಾರಿಯಲ್ಲಿ ನಡೆದೆ” ಎಂದಿದ್ದರು.

ವಿಜಯ್ ಮಲ್ಯ (Vijay Malya) ಅವರ ಪುತ್ರ ಸಿದ್ದಾರ್ಥ್ ಮಲ್ಯ (Siddharth Malya) ಹೆಸರು ಈ ಮೊದಲು ನಟಿ ದೀಪಿಕಾ ಪಡುಕೋಣೆ ಜೊತೆಗೆ ಕೇಳಿ ಬಂದಿತ್ತು. ದೀಪಿಕಾ ಮತ್ತು ಸಿದ್ದಾರ್ಥ್ ಸುತ್ತಾಟ ನಡೆಸಿದ್ದರು. ಸಿದ್ಧಾರ್ಥ್ ಮಲ್ಯ ಹಾಗೂ ದೀಪಿಕಾ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರು. ಆದರೆ ಇವರಿಬ್ಬರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಕೊನೆಗೆ ರಣವೀರ್ ಸಿಂಗ್ ಅವರ ಜೊತೆಗೆ ಡೇಟಿಂಗ್ ಮಾಡಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

Leave a Reply

Your email address will not be published. Required fields are marked *