60 ನೇ ವಯಸ್ಸಿನಲ್ಲಿಯೂ 8 ಪಾಕ್ ಹೊಂದಿರುವ ಶಾರುಖ್‌ ಖಾನ್‌ ಅವರ ಫಿಟ್ ನೆಸ್ ನಿಜಕ್ಕೂ ಅಸಲಿ ನಾ? ಇಲ್ಲಿದೆ ನೋಡಿ!!

ಬಾಲಿವುಡ್‌ ಬಾದ್ ಷಾ ಶಾರುಖ್‌ ಖಾನ್‌ (Shah Rukh Khan) ಅವರು ಎಲ್ಲರಿಗೂ ಕೂಡ ಚಿರಪರಿಚಿತ. ಕಳೆದ ಮೂರು ದಶಕಗಳಲ್ಲಿ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಾರುಖ್‌ ಖಾನ್‌ ಭಾರಿ ಸಂಭಾವನೆ ಪಡೆಯುವ ನಟ ಯಾವ ಯುವ ನಟರಿಗೂ ಕಡಿಮೆಯಿಲ್ಲ ಎನ್ನುವ ಹಾಗೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಹೌದು, ನಟ ಶಾರುಖ್ ಖಾನ್ ಅವರ ಫಿಟ್ ನೆಸ್ (Fitness) ಮಂತ್ರದ ಬಗ್ಗೆ ಎಲ್ಲರಿಗೂ ಕೂಡ ಕುತೂಹಲವಿರುತ್ತದೆ. ಹಾಗಾದ್ರೆ ಆ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಉತ್ತರವಿದೆ. ಶಾರುಖ್ ಖಾನ್ ಅವರು ತಮ್ಮ ಫಿಟ್ ನೆಸ್ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಪ್ರತಿದಿನ ಶಾರುಖ್ ಖಾನ್ ಅರ್ಧ ಗಂಟೆಗಳ ಕಾಲ ಕಾರ್ಡಿಯೋ ವ್ಯಾಯಾಮ (Excise) ಗಳನ್ನು ಅಂದರೆ ಸೈಕ್ಲಿಂಗ್ ಹಾಗೂ ಟ್ರೆಡ್ಮಿಲ್ ಬಳಕೆ ಮಾಡುವ ಮೂಲಕ ದೇಹವನ್ನು ದಂಡಿಸುತ್ತಾರೆ.

ಅದಲ್ಲದೇ ವೈಟ್ ಲಿಫ್ಟಿಂಗ್ ಮಾಡುವ ಮುನ್ನ ತಮ್ಮ ದೇಹವನ್ನು ಫಿಟ್ ಆಗಿರುವಂತೆ ನೋಡಿಕೊಳ್ಳುತ್ತಾರಂತೆ. ಅದರೊಂದಿಗೆ ಫಂಕ್ಷನಲ್ ಟ್ರೈನಿಂಗ್ ಕೂಡ ಮಾಡುತ್ತಾರೆ. ಇನ್ನು ಯೋಗಾಭ್ಯಾಸದ ಕಡೆಗೂ ಹೆಚ್ಚು ಗಮನ ಕೊಡುತ್ತ ತನ್ನ ದಿನವನ್ನು ವರ್ಕ್ ಔಟ್, ಯೋಗ ಎಂದು ಬ್ಯುಸಿಯಾಗಿಟ್ಟುಕೊಳ್ಳುತ್ತಾರೆ ಎನ್ನುವ ಮಾಹಿತಿಯು ಹೊರಬಿದ್ದಿದೆ. ಆಹಾರ ವಿಚಾರದಲ್ಲಿ ಅತಿಯಾಗಿ ಕಾಳಜಿ ವಹಿಸುವ ಶಾರುಖ್ ಖಾನ್ ಅವರು ಹೆಚ್ಚು ಪೌಷ್ಟಿಕಾಂಶಗಳು ಆಹಾರ (Healthy Food) ವನ್ನು ಹೆಚ್ಚು ಸೇವಿಸುತ್ತಾರಂತೆ.

ತಮ್ಮ ಆಹಾರದಲ್ಲಿ ಕೊಬ್ಬು ಗಳು, ಪ್ರೋಟೀನ್ ಮತ್ತು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಅಂಶಗಳಿಗೆ ಹೆಚ್ಚು ಗಮನ ಕೊಡುವ ಅಂತಹ ಆಹಾರಗಳಿಗೆ ಮೊದಲು ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. ಜೀರ್ಣಕ್ರಿಯೆಯನ್ನು ಸದಾ ಕಾಲ ಚುರುಕಾಗಿರಲು ಆಗಾಗ ಆರೋಗ್ಯಕರವಾಗಿರುವ ಆಹಾರವನ್ನು ಸೇವಿಸುತ್ತಾರೆ. ಹೀಗಾಗಿ ಹಸಿವು ಆದಾಗಲೆಲ್ಲಾ ಆರೋಗ್ಯಕರ ಸ್ನ್ಯಾಕ್ಸ್ ಅನ್ನು ಸೇವಿಸುತ್ತಾರೆ.

ಅದರೊಂದಿಗೆ ಚರ್ಮ ಕಾಂತಿ (Skin Brightness) ಗೆ ಹೆಚ್ಚು ಮಹತ್ವ ನೀಡುವ ಕಾರಣದಿಂದಾಗಿ ಆರೋಗ್ಯಕ್ಕೆ ಪ್ರಯೋಜನವಾಗುವಂತೆ ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡುತ್ತಾರೆ. ಜಂಕ್ ಫುಡ್ (Junk food) ಹಾಗೂ ಎಣ್ಣೆಯುಕ್ತ ಪದಾರ್ಥಗಳಿಗೆ ಹೆಚ್ಚು ಆದ್ಯತೆ ನೀಡದೇ ದೇಹವನ್ನು ಸಮತೋಲನವಾಗಿರಿಸುವ ಆಹಾರದ ಕಡೆಗೆ ಹೆಚ್ಚು ಗಮನ ಕೊಡುವುದೇ ಬಾಲಿವುಡ್ ನಟನ ಫಿಟ್ನೆಸ್ ಸಿಕ್ರೆಟ್ ಎನ್ನಬಹುದಾಗಿದೆ.

Leave a Reply

Your email address will not be published. Required fields are marked *