ಮಗನ ಡಿವೋರ್ಸ್ ಬೆನ್ನಲ್ಲೇ ಜನಪ್ರಿಯ ಶೋವೊಂದರಲ್ಲಿ ಕಣ್ಣೀರು ಹಾಕಿದ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ!!

ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ ಅದುವೇ ನಟಿ ಐಶ್ವರ್ಯ ರೈ (Aishwarya Rai) ಮತ್ತು ಅಭಿಷೇಕ್​ ಬಚ್ಚನ್​ (Abhishek Bacchan) ಅವರ ವೈವಾಹಿಕ ಜೀವನವು ಮುರಿದು ಬಿದ್ದಿದೆ ಎನ್ನುವುದು. ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.

ಇದುವೇ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಡೈ-ವೋರ್ಸ್ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದ್ದು, ಈ ನಡುವೆ ಅಮಿತಾಭ್ ಬಚ್ಚನ್ (Amithabh Bacchan) ಅವರು ಶೋವೊಂದರಲ್ಲಿ ಕಣ್ಣೀರು ಹಾಕಿದ್ದಾರೆ. ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಶೋ (Kaun Banega Crorepati Show) ವನ್ನು ಅಮಿತಾಭ್ ಬಚ್ಚನ್ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಕಳೆದ 23 ವರ್ಷಗಳಲ್ಲಿ, ಒಂದು ಸೀಸನ್ ಅನ್ನು ಹೊರತು ಪಡಿಸಿ ಉಳಿದ ಎಲ್ಲಾ ಸೀಸನ್ ಗಳನ್ನು ಅಮಿತಾಭ್ ಬಚ್ಚನ್ ಅವರು ಯಶಸ್ವಿಯಾಗಿ ನಡೆಸಿಕೊಡುತ್ತ ಬಂದಿದ್ದಾರೆ.ಕೌನ್ ಬನೇಗಾ ಕರೋಡ್ಪತಿ ಸೀಸನ್ 15 ಕಳೆದ ಆಗಸ್ಟ್ 14, 2023 ರಂದು ಪ್ರಾರಂಭವಾಗಿತ್ತು. ಆದರೆ ಡಿಸೆಂಬರ್ 29, 2023 ರಂದು ಮುಕ್ತಾಯದ ಹಂತ ತಲುಪಿದ್ದು, ಈ ಪ್ರೋಮೊ (Promo) ದಲ್ಲಿ ಅಮಿತಾಭ್ ಬಚ್ಚನ್ ಅವರು ಕಣ್ಣೀರು ಹಾಕಿರುವ ದೃಶ್ಯವೊಂದು ಎಲ್ಲರ ಗಮನ ಸೆಳೆದಿದೆ.

ಈ ಎಪಿಸೋಡ್​ಗೆ ವಿದಾಯ ಹೇಳುವಾಗ ಮತ್ತೆ ಕಣ್ಣೀರು ಹಾಕಿದ್ದು ಈ ವೇಳೆಯಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.ಈ ಎಪಿಸೋಡ್ ನಲ್ಲಿ “ದೇವಿ ಔರ್ ಸಜ್ಜನೋ, ಈಗ ವೇದಿಕೆಯಿಂದ ಹೋಗುವ ಸಮಯ ಬಂದಿದೆ. ಬಿಡುವುದು ಕಷ್ಟ. ನಾಳೆಯಿಂದ ನಾನು ಇಲ್ಲಿಗೆ ಹಿಂತಿರುಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಕೊನೆಯ ಬಾರಿಗೆ ನಾನು ಈ ಕಾರ್ಯಕ್ರಮದಿಂದ ನಿಮ್ಮೆಲ್ಲರಿಗೂ ವಿದಾಯ ಹೇಳುತ್ತಿದ್ದೇನೆ. ಶುಭರಾತ್ರಿ ಎಂದಿದ್ದು ಭಾವುಕರಾಗಿದ್ದಾರೆ.

ಈ ಪ್ರೋಮೊವೊಂದು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಗಳಿಗೆ ಸಹಜವಾಗಿಯೇ ಬಿಗ್ ಬಿ ಸೀಸನ್‌ನ ಕೊನೆಯ ಸಂಚಿಕೆ ಬಗ್ಗೆ ಮಾತನಾಡಿದ್ದಾರೆಯೇ ಅಥವಾ ಕಾರ್ಯಕ್ರಮದಿಂದ ನಿವೃತ್ತಿ ಹೊಂದಿದ್ದಾರಾ ಎನ್ನುವ ಪ್ರಶ್ನೆಯೊಂದು ಮೂಡಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟತೆಯು ಸಿಕ್ಕಿಲ್ಲ.

Leave a Reply

Your email address will not be published. Required fields are marked *