ಅಮಿತಾಭ್ ಬಚ್ಚನ್ ಮನೆಯಲ್ಲಿ ಆಸ್ತಿ ವಿಷಯಕ್ಕೆ ಬಿರುಕು! ಮಕ್ಕಳಿಗೆ ಸರಿ ಸಮವಾಗಿ ಆಸ್ತಿಯನ್ನು ಹಂಚಿದ ಅಮಿತಾಭ್ ಹೇಗೆ ಗೊತ್ತಾ?..

ಸಿನಿಮಾರಂಗದವರು ಎಂದ ಮೇಲೆ ಐಷಾರಾಮಿ ಜೀವನವನ್ನು ನಡೆಸುವವರೇ ಹೆಚ್ಚು..ಅದರಲ್ಲಿಯೂ ಈ ಸ್ಟಾರ್ ನಟರು ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಮೂಲಕ ಬಂದ ಹಣದಲ್ಲಿ ಬಂಗಲೆ ಆಸ್ತಿ ಎಂದು ಸಂಪಾದನೆ ಮಾಡುತ್ತಾರೆ. ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಈ ವಿಚಾರದಲ್ಲಿ ಹೊರತಾಗಿಲ್ಲ ಎನ್ನಬಹುದು.

ನಟ ಅಮಿತಾಭ್ ಬಚ್ಚನ್ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಗ್ ಬಿ ಅವರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಆಸ್ತಿಯನ್ನು ನೀಡಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿವೆ. ಹಾಗಾದ್ರೆ ಬಾಲಿವುಡ್ ಬಿಗ್ ಬಿ ಅವರ ಒಟ್ಟು ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟ ಕಾರ್ಯಕ್ರಮವೊಂದರಲ್ಲಿ ಅಮಿತಾಬ್ ಬಚ್ಚನ್ ಅವರು, ತಮ್ಮ 2800 ಕೋಟಿ ಮೌಲ್ಯದ ಆಸ್ತಿಯನ್ನು ತಮ್ಮ ಇಬ್ಬರು ಮಕ್ಕಳಾದ ಮಗ ಅಭಿಷೇಕ್ (Abhishek) ಹಾಗೂ ಮಗಳು ಶ್ವೇತಾ (Shwetha) ರವರಿಗೆ ಸಮಾನವಾಗಿ ಹಂಚಲಾಗುವುದು ಎನ್ನುವುದನ್ನು ಬಹಿರಂಗಪಡಿಸಿದ್ದರು.

ಆದರೆ ಇದೀಗ ವೆಬ್ ಪೋರ್ಟಲ್ ‘ದಿ ರಿಚೆಸ್ಟ್’ ನಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ನಟನ ನಿವ್ವಳ ಮೌಲ್ಯವು 400 ಮಿಲಿಯನ್ ಡಾಲರ್ ಅಥವಾ 2800 ಕೋಟಿ ರೂ ಇದೇ ಎನ್ನಲಾಗಿದೆ. ಅಷ್ಟೇ ಅಲ್ಲದೇ, ವಿಠ್ಠಲ್ ನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ (Vittal Nagar Co-Operative Housing Society) ಯಲ್ಲಿರುವ ಬಂಗಲೆಯೂ 674 ಚದರ ಮೀಟವಿದ್ದು, ಇನ್ನು ಉಳಿದಂತೆ 890.47 ಚದರ ಮೀಟರ್ ಅಳತೆಯ ಎರಡು ಪ್ಲಾಟ್ ಗಳನ್ನು ಹೊಂದಿದ್ದಾರೆ.

ಈ ಬಂಗಲೆಯೂ ನಟನ ಮುಂಬೈ (Mumbai) ನಲ್ಲಿ ಮೊದಲ ಆಸ್ತಿ ಎನ್ನಲಾಗಿದ್ದು, ಅದಲ್ಲದೇ, ಜುಹು ಪ್ರದೇಶದಲ್ಲಿ ಮೂರು ಬಂಗಲೆಗಳನ್ನು ಹೊಂದಿದ್ದು ಐಷಾರಾಮಿ ಬದುಕನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.ಅಮಿತಾಭ್ ಬಚ್ಚನ್ ಅವರು ತಮ್ಮ ಮುದ್ದಿನ ಮಗಳು ಶ್ವೇತಾ ಅವರಿಗೆ ತಮ್ಮ ಜುಹು ಬಂಗಲೆ “ಪ್ರತೀಕ್ಷಾ” (Pratiksha) ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಮಗಳಿಗೆ ಉಡುಗೊರೆಯಾಗಿ ನೀಡಿರುವ ಬಂಗಲೆಯ ಬೆಲೆಯೂ 50 ಕೋಟಿ ರೂ ಎನ್ನಲಾಗಿದೆ. ನವೆಂಬರ್ 8 ರಂದು ಉಡುಗೊರೆ ಪತ್ರಕ್ಕೆ ಸಹಿ ಮಾಡಲಾಗಿದ್ದು, 50.65 ಲಕ್ಷ ರೂ.ಗಳನ್ನು ಮುದ್ರಾಂಕ ಶುಲ್ಕವಾಗಿ ಪಾವತಿ ಮಾಡಲಾಗಿದೆ ಎನ್ನಲಾಗಿದೆ. ನಟ ಅಮಿತಾಭ್ ಬಚ್ಚನ್ ಅವರು ವೃತ್ತಿ ಜೀವನದಂತೆ ವೈಯುಕ್ತಿಕ ಜೀವನಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಈಗಾಗಲೇ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15 ನಿರೂಪಣೆಯ ಜೊತೆಗೆ ನಟನೆಯಲ್ಲಿ ತೊಡಗಿಕೊಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *