Bitrot benefits in kannada : ಹಲವಾರು ಜನರಿಗೆ ಕೆಲವು ತರಕಾರಿಗಳು ಮಾತ್ರ ಇಷ್ಟವಾಗುತ್ತದೆ. ಉಳಿದವುಗಳನ್ನು ತಿನ್ನುವಲ್ಲಿ ನಿರಾಕರಿಸುತ್ತಾರೆ. ದೇಹಕ್ಕೆ ಅವಶ್ಯಕತೆ ಇರುವ ಎಲ್ಲಾ ಪೋಷಕಾಂಶಗಳು ಒಂದೇ ತರಕಾರಿಯಲ್ಲಿ ಇಲ್ಲದಿರುವ ಕಾರಣ ವಿಧವಿಧವಾದ ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಕಷ್ಟಪಟ್ಟಾದರೂ ಆರೋಗ್ಯದ ಹಿತ ದೃಷ್ಟಿಯಿಂದ ತರಕಾರಿಗಳನ್ನು ಔಷಧ ಎಂದು ಭಾವಿಸಿ ತಿನ್ನಬೇಕು.
ಕೆಂಪು ಮಿಶ್ರಿತ ಕಡು ಗುಲಾಬಿ ಬಣ್ಣದ ತರಕಾರಿ, ಬೀಟ್ ರೂಟ್ ರಸಗಳನ್ನು ಸೇವಿಸುವುದರಿಂದ ರಕ್ತಹೀನತೆಯಿಂದ ಅಥವಾ ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುತ್ತಿರುವವರು ಗುಣಮುಕ್ತರಾಗಬಹುದು. ಕೆಂಪು ಬಣ್ಣವಿದೆ ಅವೇ ರಕ್ತಗಳಾಗುತ್ತವೆ ಎಂಬುದಲ್ಲ; ಈ ತರಕಾರಿಯಲ್ಲಿ ರಕ್ತಕಣಗಳನ್ನು ಉತ್ಪತ್ತಿ ಮಾಡುವ ಗುಣವಿದೆ.
ಬೀಟ್ರೂಟ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ರಂಜಕ, ಕಬ್ಬಿಣಾಂಶಗಳಿರುವುದರಿಂದ ಇತರ ಆಹಾರ ಪದಾರ್ಥಗಳ ಜೊತೆ ಬೀಟ್ರೂಟ್ ಅನ್ನು ಸೇರಿಸಿ ನಿಯಮಿತ ಪ್ರಮಾಣದಲ್ಲಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಉಪಯೋಗಗಳಿವೆ. ತಲೆನೋವು, ಸುಸ್ತು, ಸಣ್ಣಪುಟ್ಟ ಕಿರಿಕಿರಿಗಳಿಂದ ಬಳಲುತ್ತಿರುವವರು ಬೀಟ್ರೂಟ್ ವಾರಕ್ಕೊಮ್ಮೆ ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.
ಬೀಟ್ರೂಟ್ ಕ್ಯಾನ್ಸರ್ ನಂತಹ ದೊಡ್ಡ ರೋಗಗಳನ್ನು ತಡೆಗಟ್ಟುವುದರಲ್ಲಿ ಅಲ್ಪ ಪ್ರಮಾಣದ ಪಾತ್ರ ವಹಿಸುತ್ತದೆ. ಡಿಹೈಡ್ರೇಶನ್ ಸಮಸ್ಯೆಯಿಂದ ಬಳಲುತ್ತಿರುವವರು ಬೀಟ್ರೂಟನ್ನು ತರಕಾರಿ ರೂಪದಲ್ಲಾಗಲಿ ಅಥವಾ ಜ್ಯೂಸ್ ರೂಪದಲ್ಲಾಗಲಿ ತೆಗೆದುಕೊಳ್ಳುತ್ತಿರಬೇಕು. ಬೀಟ್ರೂಟ್ ನ ಸೇವನೆಯಿಂದ ಜೀವಕೋಶಗಳಿಗೆ ಆಕ್ಸಿಜನ್ ನ ಪೂರೈಕೆಯು ಸುಲಭವಾಗಿ ಆಗುತ್ತದೆ. ಬೀಟ್ರೂಟ್ನಲ್ಲಿ ನಾರಿನ ಅಂಶಗಳಿರುವುದರಿಂದ ಜೀರ್ಣಕ್ರಿಯೆಯು ಸಾರಾಗವಾಗಿ ಆಗಿ ಮಲಬದ್ಧತೆಯ ಸಮಸ್ಯೆಯನ್ನು ದೂರಮಾಡುತ್ತದೆ.
ಚರ್ಮದ ಹಲವಾರು ಸಮಸ್ಯೆಗಳನ್ನು ನಿವಾರಣೆಗೊಳಿಸಲು ಮತ್ತು ಕಾಂತಿಯನ್ನು ಹೆಚ್ಚಿಸಲು ಬೀಟ್ರೂಟ್ ರಸವನ್ನು ಬಳಸುತ್ತಾರೆ. ಒಡೆದ ತುಟಿಗಳ ಆರೈಕೆಗೆ ಮತ್ತು ಕಪ್ಪಾದ ತುಟಿಯನ್ನು ಕೆಂಪಾಗಿಸಲು ಬೀಟ್ರೂಟ್ ಅನ್ನು ಪೇಸ್ಟ್ ಮಾಡಿ ಉಪಯೋಗಿಸುತ್ತಾರೆ. ಬೀಟ್ರೂಟ್ ತರಕಾರಿಯಿಂದಾಗುವ ಉಪಯೋಗಗಳನ್ನು, ಈ ಬರಹವನ್ನು ಶೇರ್ ಮಾಡುವುದರ ಮೂಲಕ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..