ಹೆಂಡತಿ ಬೇರೆ ಗಂಡಸಿನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ವಿಷಯ ತಿಳಿದು ಆ ಸಂಬಂಧವನ್ನು ಕಟ್ ಮಾಡದೆ ಗಂಡ ಮಾಡಿದ್ದೇನು ಗೊತ್ತೆ.. ಇಂಥ ಗಂಡಂದಿರು ಇದ್ದಾರೆ ನೋಡಿ!!!

ಜಾತಿ, ಧರ್ಮ, ವಯಸ್ಸು ಎಲ್ಲವನ್ನು ಹೇಳಿಕೇಳಿ ಮಾಡಿಕೊಂಡು ಆಗುವುದಲ್ಲ ಪ್ರೀತಿ; ಪ್ರೀತಿ ಕುರುಡು. ವಯಸ್ಸಿನ ಅಂತರವಿಲ್ಲದೆ ಹುಟ್ಟಿ ಹೆಮ್ಮರವಾಗುತ್ತದೆ.ಒಬ್ಬರ ಮೇಲೆ ಒಬ್ಬರಿಗೆ ಆಕರ್ಷಣೆಯಾಗಿ, ಪರಿಚಯವಾಗಿ ಸ್ನೇಹವು ಪ್ರೀತಿಯಾಗಿ ಪರಿವರ್ತನೆಗೊಳ್ಳುವುದು ಹೊಸತೇನಲ್ಲ. ಆದರೆ ಪತಿಯ ಸ್ನೇಹಿತನ ಮೇಲೆ ಪ್ರೀತಿಯಾಗಿ ಪತಿಯೇ ನಿಂತು ಮದುವೆ ಮಾಡಿಸುವುದು ಹೊಸ ಕಥೆ.

ಮೇಲಿನ ಹೇಳಿಕೆಗೆ ಉದಾಹರಣೆ ಎಂಬಂತೆ ಪಾಟ್ನಾದಲ್ಲಿ ಯುವಕನೊಬ್ಬ ತನ್ನ ಪತ್ನಿಯನ್ನು ಸಂತೋಷದಿಂದಲೇ ಆಕೆಯು, ಪ್ರಿಯಕರನೊಂದಿಗೆ ಬಾಳಲು ಅನುವು ಮಾಡಿಕೊಟ್ಟಿದ್ದಾನೆ. ಜೀವನದಲ್ಲಿ ಸಂತೋಷದಿಂದಿರಲು ತನ್ನ ಪತ್ನಿಯನ್ನು ಆಕೆಯ ಗೆಳೆಯನೊಂದಿಗೆ ಮದುವೆ ಮಾಡಿಕೊಟ್ಟಿದ್ದಾನೆ. ಬಿಹಾರದ ಛಾಪ್ರಾ ಪಟ್ಟಣದ ದೇವಸ್ಥಾನವೊಂದರಲ್ಲಿ ನಡೆದ ವಿಲಕ್ಷಣ ವಿವಾಹವು ಪಟ್ಟಣದ ಚರ್ಚೆಯಾಗಿದೆ.

ವರದಿಗಳ ಪ್ರಕಾರ, ಯುವಕನು ಕೆಲವು ಸಮಯದ ಹಿಂದೆ ನಿಕ್ಕಿ ಎಂಬ ಮಹಿಳೆಯೊಂದಿಗೆ ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದನಂತೆ. ಈ ದಂಪತಿಗಳು ಪ್ರೇಮ ಸಂಕೇತವಾಗಿ ಮಗಳನ್ನು ಪಡೆದಿದ್ದಾರೆ. ಮದುವೆಯಾದ ಸ್ವಲ್ಪ ಸಮಯದ ನಂತರ, ಯುವಕನು ತನ್ನ ಹೆಂಡತಿಯನ್ನು ಹಿಂಸಿಸಲು ಪ್ರಾರಂಭಿಸಿದ್ದರಿಂದ ಪ್ರೀತಿಯು ದ್ವೇಷದಿಂದ ಬದಲಾಯಿತಂತೆ. ನಂತರ ಅವಳು ತನ್ನ ಗಂಡನ ಸ್ನೇಹಿತರೊಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದಳಂತೆ.

ತನ್ನ ಸ್ನೇಹಿತನೊಂದಿಗೆ, ಅಂದರೆ ತನ್ನ ಹೆಂಡತಿಯು ಆಕೆಯ ಪ್ರಿಯಕರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳದಂತೆ ಯುವಕ ಎಚ್ಚರಿಸಿದ್ದ. ಆದರೆ ಆತನ ಮಾತನ್ನು ಕೇಳದೆ ಪತ್ನಿಯು ಪ್ರಿಯಕರನೊಂದಿಗೆ ಪ್ರೇಮ ಸಲ್ಲಾಪಗಳನ್ನು ಮಾಡಿಕೊಂಡೆ ಬಂದಿದ್ದಳಂತೆ. ಯುವಕನೊಂದಿಗಿನ ವಿವಾಹ ಸಂಬಂಧವನ್ನು ಮುರಿದುಕೊಂಡು, ಪ್ರಿಯಕರೊಂದಿಗೆ ಓಡಿ ಹೋಗಲು ನಿಕ್ಕಿ ನಿರ್ಧರಿಸಿದ್ದಳಂತೆ.

ಕೊನೆಯಲ್ಲಿ ಯುವಕನು ಖುಷಿಯಿಂದಲೇ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಸ್ಥಳೀಯ ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹ ಮಾಡಿಕೊಟ್ಟು, ಮಗಳನ್ನು ತಾನೆ ನೋಡಿಕೊಳ್ಳುವುದಾಗಿ ಹೇಳಿದ್ದಾನೆ.

“ನಾನು ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದೆ ಆದರೆ ನನ್ನ ಹೆಂಡತಿಗೆ ಇನ್ನೊಬ್ಬನೊಂದಿಗೆ ಪ್ರೇಮವಾಗಿದೆ. ನಾನು ಅವಳ ಮದುವೆಯನ್ನು ಮಾಡಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ಈಗ ಮಗಳನ್ನು ನೋಡಿಕೊಳ್ಳುತ್ತೇನೆ” ಎಂದು ಯುವಕನು ತನ್ನ ಹೆಂಡತಿಯ ಮದುವೆಯನ್ನು ಮಾಡಿದ ನಂತರ ಮಾಧ್ಯಮಗಳಿಗೆ ಹೇಳಿದ್ದಾನಂತೆ.

Leave a Reply

Your email address will not be published. Required fields are marked *