ಐನಾತಿ ಪತ್ನಿ 35 ಬಾರಿ ಓಡಿ ಹೋದಳು ಎಂದು ರಸ್ತೆಗೆ ಇಳಿದು ಪತಿ ಮಾಡಿದ್ದೇನು ಗೊತ್ತಾ? ಇವನೇ ನಿಜವಾದ ಕಲಿಯುಗ ಕರ್ಣ ಕಣ್ರೀ ನೋಡಿ!!

bihar news kaimur krishna murari gupta said his wife ran away 30 times : ಮದುವೆ ಎನ್ನುವ ಬಂಧಕ್ಕೆ ಒಳಗಾಗುವ ಪ್ರತಿಯೊಬ್ಬ ಹೆಣ್ಣು ಹಾಗೂ ಗಂಡಿಗೂ ಜವಾಬ್ದಾರಿಗಳು ಹೆಚ್ಚು. ಆದರೆ ಸತಿ ಪತಿಯರ ನಡುವೆ ಅದೇನೇ ಮನಸ್ತಾಪಗಳಿದ್ದರೂ ಕೂಡ ಎಲ್ಲವನ್ನು ಸರಿಗೂದಿಸಿಕೊಂಡು ಹೋಗಬೇಕು. ಆಗಿದ್ದಾಗ ಮಾತ್ರ ಸಂಸಾರ ಎನ್ನುವ ಬಂಡಿ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಕೆಲವೊಮ್ಮೆ ಗಂಡ ಹೆಂಡತಿಯರ ಜಗಳದಿಂದ ಹೆಂಡತಿ ಬಿಟ್ಟು ಹೋಗುವ ಗಂಡಂದಿರನ್ನು ನಾವು ಕಂಡಿರುತ್ತೇವೆ.

ಈ ಸಮಯದಲ್ಲಿ ತನ್ನ ಮಕ್ಕಳನ್ನು ಸಾಕುತ್ತ, ಅದೇಗೋ ಜೀವನ ಸಾಗಿಸುತ್ತಾಳೆ. ಆದರೆ ಇಲ್ಲಿ ಹಾಗೆ ಆಗಿಲ್ಲ. ಬದಲಾಗಿ ಹೆಂಡತಿಯು ಗಂಡನನ್ನು ಬಿಟ್ಟು ಹೋಗಿದ್ದು,ಇಬ್ಬರೂ ಮಕ್ಕಳನ್ನು ಸಾಕಲು ಆಗದೇ ಅಳಲು ತೋಡಿಕೊಂಡಿದ್ದಾನೆ. ಈತನ ಹೆಸರು ಕೃಷ್ಣ ಮುರಾರಿ ಗುಪ್ತಾ. ಹೌದು, ಕೃಷ್ಣ ಮುರಾರಿ ಗುಪ್ತಾ ಮತ್ತು ಅವರ ಪತ್ನಿ ಕೈಮೂರ್ ಜಿಲ್ಲೆಯ ನಿವಾಸಿಗಳು. 2017ರಲ್ಲಿ ಇಬ್ಬರೂ ಪ್ರೇಮ ವಿವಾಹವಾಗಿದ್ದರು.

ಬೇರೊಬ್ಬನ ಜೊತೆಗೆ ಡಿಂಗ್ ಡಾಂಗ್ ಆಟ ಆಡಲು ಗಂಡ ಅಡ್ಡ ಬರುತ್ತಾನೆ ಎಂದು ತನ್ನ ಮನ್ಮಥನ ಜೊತೆ ಸೇರಿ ಗಂಡನಿಗೆ ಏನು ಮಾಡಿದ್ದಾಳೆ ನೋಡಿ!!

ಕೃಷ್ಣ ಮುರಾರಿ ಗುಪ್ತಾ ಜಿಲ್ಲೆಯ ರಾಮಗಢ ಪೊಲೀಸ್ ಠಾಣೆಯ ನಿವಾಸಿ. ಅವರ ಪತ್ನಿ ನುವಾ ಪೊಲೀಸ್ ಠಾಣೆಯ ನಿವಾಸಿ. ಮದುವೆಯಾದ ಒಂದು ವರ್ಷದ ನಂತರ ಹೆಂಡತಿ ಮನೆಯಿಂದ ಓಡಿಹೋಗಿದ್ದಳು. ಸದ್ಯಕ್ಕೆ ಕೃಷ್ಣ ಮುರಾರಿ ಎಂಬ ಪತಿ ಈಗ ರಾಮಗಢ ಪೊಲೀಸ್ ಠಾಣೆಯನ್ನು ಸುತ್ತುತ್ತಿದ್ದಾನೆ. ವ್ಯಕ್ತಿಯೊಬ್ಬನು ತನ್ನ ಇಬ್ಬರು ಮಕ್ಕಳ ಸಹಿತ ಭಿಕ್ಷೆ ಬೇಡುತ್ತ, ಹೆಂಡತಿ ಕಾಣೆಯಾಗಿರುವ ಪೋಸ್ಟರ್ ಹಿಡಿದು ಕೈಮೂರ್ ಪಟ್ಟಣದಲ್ಲಿ ಅಲೆಯುತ್ತಿದ್ದಾನೆ.

ಈತನು ಹೆಂಡತಿಗಾಗಿ ಇಷ್ಟು ಹುಡುಕಾಟ ನಡೆಸುತ್ತಿರುವುದನ್ನು ಕಂಡಾಗ ನಿಜಕ್ಕೂ ಅಯ್ಯೋ ಪಾಪ ಎನಿಸದೇ ಇರದು.ಪತ್ನಿಗಾಗಿ ಹುಡುಕಾಟ ನಡೆಸುತ್ತಿರುವ ಕೃಷ್ಣ ಮುರಾರಿ, ನನ್ನನ್ನು ಬಿಟ್ಟು ಎಷ್ಟೋ ಸಲ ಮನೆ ಬಿಟ್ಟು ಹೋಗಿದ್ದಾಳೆ. ಅನೇಕ ಬಾರಿ ಪೊಲೀಸ್ ಇಲಾಖೆಯ ಸಹಾಯ ಒದಗಿಸಿದರೆ, ಹೆಂಡತಿಯನ್ನು ಮರಳಿ ಕರೆ ತರಬಹುದು. ಏಳು ತಿಂಗಳಲ್ಲಿ ನನ್ನ ಹೆಂಡತಿ ಹಲವಾರು ಬಾರಿ ಮನೆ ಬಿಟ್ಟು ಹೋಗಿದ್ದಾಳೆ,..

ಮಕ್ಕಳಿಬ್ಬರೂ ನನ್ನೊಂದಿಗಿದ್ದಾರೆ, ಈ ಮಕ್ಕಳನ್ನು ನೋಡಿಕೊಳ್ಳಲು ನನ್ನ ಮನೆಯಲ್ಲಿ ಯಾರೂ ಇಲ್ಲ, ನಾನು ಭಿಕ್ಷೆ ಬೇಡಲು ಬಯಸುವುದಿಲ್ಲ. ಆದರೆ, ಮಕ್ಕಳ ಸಲುವಾಗಿ ಇಂದು ಭಿಕ್ಷೆ ಮಾಡಬೇಕಾಗಿದೆ. ನಾನೇನು ಮಾಡಬೇಕು? ನನಗೆ ಯಾರು ಕೆಲಸ ಕೊಡುತ್ತೀರಿ? ಎಂದು ಅಳಲು ತೋಡಿ ಕೊಂಡಿದ್ದಾನೆ.

bihar news kaimur krishna murari gupta said his wife ran away 30
bihar news kaimur krishna murari gupta said his wife ran away 30 …

ಅಷ್ಟೇ ಅಲ್ಲದೇ, ಮದುವೆಯಾದಾಗಿನಿಂದ ನನ್ನ ಹೆಂಡತಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇವತ್ತು ನನ್ನ ಸ್ಥಿತಿ ಭಿಕ್ಷುಕನಿಗಿಂತ ಕೆಟ್ಟದ್ದಾಗಿದೆ. ಮಕ್ಕಳಿಬ್ಬರೂ ಹುಟ್ಟಿದಾಗಿನಿಂದ ನಾನೊಬ್ಬನೇ ಸಾಕುತ್ತಿದ್ದೇನೆ. ಮಕ್ಕಳಿಗೆ ಜನ್ಮ ನೀಡಿದ ನಂತರ ಪತ್ನಿ ತಲೆಮರೆಸಿಕೊಂಡಿದ್ದಾಳೆ. 5 ವರ್ಷಗಳಲ್ಲಿ ಸುಮಾರು 30 ರಿಂದ 35 ಬಾರಿ ಮನೆ ಬಿಟ್ಟು ಹೋಗಿದ್ದಾಳೆ. ದೊಡ್ಡ ಮಗುವಿಗೆ 4 ವರ್ಷ ಮತ್ತು ಮಗಳಿಗೆ ಬರೀ 4 ತಿಂಗಳು.

ಇಷ್ಟು ಸಣ್ಣ ಮಕ್ಕಳು ಇರುವಾಗ ನಾನು ಹೇಗೆ ಕೆಲಸ ಮಾಡಲಿ ? ನನಗೆ ಕೆಲಸ ಕೊಡುವವರು ಯಾರು? ನನ್ನ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ನನ್ನವರಂತೂ ಯಾರೂ ಇಲ್ಲ. ಮಕ್ಕಳನ್ನೂ ನನ್ನೊಂದಿಗೆ ಕರೆದುಕೊಂಡು ಭಿಕ್ಷೆ ಬೇಡುತ್ತಿರುವೆ. ತಾಯಿಯಿಲ್ಲದೇ ಮಕ್ಕಳಿಬ್ಬರೂ ದುಃಖಿತರಾಗುತ್ತಿರುತ್ತಾರೆ. ಅವರನ್ನು ಸಮಾಧಾನ ಮಾಡುವುದರಲ್ಲಿಯೇ ನಾನು ದಿನಾಲೂ ಹೈರಾಣಾಗುತ್ತಿದ್ದೇನೆ. ನನ್ನ ಹೆಂಡತಿ ಬೇಗ ಹಿಂತಿರುಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸಿದ್ದೇನೆ ಎಂದಿದ್ದಾನೆ.

Leave a Reply

Your email address will not be published. Required fields are marked *