ವರ್ತೂರು ಸಂತೋಷ್ ಹೆಂಡತಿ ಯಾರು? ವರ್ತೂರ್ ಸಂತೋಷ್ ಮದುವೆಯಾಗಿದ್ದು ಯಾವಾಗ? ಬಿಗ್ ಬಾಸ್ ಮನೆಯಿಂದ ಹೊರಬಂದು ಎರಡನೇ ಮದುವೆಯಾಗಲಿದ್ದಾರಾ??

ಹಳ್ಳಿಕಾರ್ ಒಡೆಯಂತೆ ಎಂದೇ ಪ್ರಸಿದ್ಧಿ ಪಡೆದಿರುವ ವರ್ತೂರು ಸಂತೋಷ್ ಅವರು ಇದೀಗ ಬಿಗ್ ಬಾಸ್ ಮನೆಗೆ ಬಂದು ಕರ್ನಾಟಕದಾತ್ಯಂತ ಚಿರಪರಿಚಿತರಾಗಿದ್ದಾರೆ. ವರ್ತೂರ್ ಸಂತೋಷ ಅವರು ಸಾಮಾನ್ಯ ರೈತ ಅಷ್ಟೇ ಅಲ್ಲ ಈತ ಕೋಟ್ಯಾಧಿಪತಿ. ಬೆಂಗಳೂರಿನಲ್ಲಿ ಸುಮಾರು 35 ಎಕರೆ ಜಾಗ ಇವರ ಹೆಸರಿನಲ್ಲಿದೆ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಗಳನ್ನು ಕೂಡ ಕಟ್ಟಿಸಿದ್ದಾರೆ ಮುಳಬಾಗಿಲಿನಲ್ಲಿ 15 ಎಕರೆ ಜಮೀನಿದೆ..

ಅಷ್ಟೇ ಅಲ್ಲದೆ ಮೂರು ಕೋಟಿ ರೂಪಾಯಿಯ ಫಾರ್ಮ್ ಹೌಸ್ ಕೂಡ ಇವರ ಬಳಿ ಇದೆ.. ಹಣದಿಂದ ಮಾತ್ರವಲ್ಲದೆ ಇವರು ಪ್ರಾಣಿಗಳ ಮೇಲೆ ತೋರುವ ಪ್ರೀತಿಯಿಂದ ಜನರಿಗೆ ಇವರ ಮೇಲೆ ಅಭಿಮಾನ ಹುಟ್ಟಿದೆ.. ಬಿಗ್ ಬಾಸ್ ಮನೆಯಿಂದ ಇವರು ಮಧ್ಯರಾತ್ರಿ ಅರೆಸ್ಟ್ ಆಗಿ ಪೊಲೀಸ್ ಸ್ಟೇಷನ್ ಗೆ ಹೋಗಿ ನಂತರ ಬೇಲ್ ಪಡೆದು ಇದೀಗ ಮತ್ತೆ ಬಿಗ್ ಬಾಸ್ ಗೆ ಬಂದಿದ್ದಾರೆ.. ಬಿಗ್ ಬಾಸ್ ಮನೆಗೆ ಬಂದು ಇದೀಗ ಮತ್ತೆ ಹೊರಗಡೆ ಹೋಗುತ್ತೇನೆ ಎಂದು ಪಟ್ಟು ಹೊಡೆದು ಕುಳಿತಿದ್ದಾರೆ..

ಬಲ್ಲಮೂಲಗಳ ಪ್ರಕಾರ ವರ್ತೂರು ಸಂತೋಷ್ ಅವರಿಗೆ ಮದುವೆ ಫಿಕ್ಸ್ ಆಗಿದೆ ಇದೇ ಕಾರಣಕ್ಕೆ ಅವರು ಮನೆಯಿಂದ ಹೊರಗಡೆ ಹೋಗುತ್ತೇನೆ ಎಂದು ಸುದೀಪ್ ಅವರ ಬಳಿ ಕೇಳಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.. ಆದರೆ ಇನ್ನೊಂದು ಆಶ್ಚರ್ಯಕರ ಸುದ್ದಿ ಕೇಳಿ ಬರುತ್ತಿದೆ ಅದು ಏನೆಂದರೆ ವರ್ತೂರು ಸಂತೋಷ್ ಅವರಿಗೆ ಈಗಾಗಲೇ ಮದುವೆ ಆಗಿದೆಯಂತೆ.. ಸಂತೋಷ್ ಅವರ ರಿಸೆಪ್ಶನ್ ಮತ್ತು ಮದುವೆ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ..

ಈ ವಿಷಯದ ಬಗ್ಗೆ varthur ಸಂತೋಷ ಅವರನ್ನು ಕೇಳಿದಾಗ ಅವರು ನನಗೆ ಮದುವೆ ಆಗಿಲ್ಲ ಈ ವಿಷಯದ ಬಗ್ಗೆ ಮಾತು ಆಡುವುದಿಲ್ಲ ಎಂದು ಹೇಳಿದ್ದರು.. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಸಂತೋಷ ಅವರು ನಾನು ಮನೆಯಿಂದ ಹೊರಗಡೆ ಹೋದಮೇಲೆ ಒಂದು ಹುಡುಗಿಯನ್ನು ನೋಡಿದ್ದೇನೆ ಮದುವೆಯಾಗುತ್ತೇನೆ ಎಂದು ಕೂಡ ಹೇಳಿಕೆ ಕೊಟ್ಟಿದ್ದಾರೆ.. Varthur ಸಂತೋಷ್ ಅವರ ಈ ಹೇಳಿಕೆ ಇದೀಗ ವೀಕ್ಷಕರಲ್ಲಿ ಗೊಂದಲಮಯ ಸೃಷ್ಟಿ ಮಾಡಿದೆ.. Varthur Santhos ಅವರು ಮದುವೆ ಆಗಿರುವ ಮೊದಲನೇ ಹುಡುಗಿಯ ಹೆಸರು ಎಸ್ ಜಯಶ್ರೀ ಎಂದು ಕೇಳಿ ಬರುತ್ತಿದೆ.

ಇದು ವರ್ತೂರು ಸಂತೋಷ್ ರ ವೈಯಕ್ತಿಕ ವಿಚಾರ ಆಗಿರುವುದರಿಂದ ಇದರ ಸತ್ಯಾನು ಸತ್ಯತೆ ಅವರ ಬಾಯಿಂದಲೇ ಹೊರಬರಬೇಕಿದೆ. ಈ ಮದುವೆ ಅರ್ಧಕ್ಕೆ ನಿಂತು ಹೋಗಿದ್ಯಾ!.. ಬಿಗ್ ಬಾಸ್ ಮನೆಯಿಂದ ಹೊರ ಬಂದು ಇನ್ನೊಂದು ಹುಡುಗಿಯನ್ನು ಮದುವೆಯಾಗುತ್ತಾರಾ!… ಅಥವಾ ಇದೇ ಹುಡುಗಿಯನ್ನು ಮದುವೆಯಾಗುತ್ತಾರೆ?.. ಎಂಬುದನ್ನು ಕಾದು ನೋಡಬೇಕಾಗಿದೆ.. ಒಟ್ಟಿನಲ್ಲಿ ವರ್ತೂರು ಸಂತೋಷ ಅವರು ಇದೀಗ ಇನ್ನೊಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿದ್ದಾರೆ..

Leave a Reply

Your email address will not be published. Required fields are marked *