BiggBoss Season9 winner : ಈ ಬಾರಿಯ ಬಿಗ್ ಬಾಸ್ ವಿಶೇಷವಾಗಿತ್ತು. 9+9 formula ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಹಳೆಯ ಸೀಸನ್ ನಿಂದ ಅನುಭವ ಪಡೆದವರು, ಓಟಿಟಿಯಿಂದ ಆಯ್ಕೆಯಾದವರು ಸೇರಿ 9 ಮಂದಿ ಅವರೊಂದಿಗೆ ಹೊಸ ಆಟಗಾರರು 9 ಮಂದಿ. ಎಂದಿನಂತೆ ಕಿಚ್ಚಾ ಸುದೀಪ್ ಅವರೇ ನಡೆಸಿಕೊಂಡು ಬಂದಿರುವ ಸೀಸನ್ 9 ಇದೀಗ ಕೊನೆಯಾಗಿದೆ. ಪ್ರೇಕ್ಷಕರು, ಜಯಭೇರಿ ಬಾರಿಸುವವರಾರೆಂದು ಕಾದು ಕುಳಿತಿದ್ದರು.
ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದಲ್ಲಿ ನಾಗಿಣಿ ಖ್ಯಾತಿಯ ದೀಪಿಕಾ ದಾಸ್,ನಟಿ ದಿವ್ಯ ಉರುಡುಗ, ನಟ ರಾಕೇಶ್ ಅಡಿಗ, ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ, ನಟ ರೂಪೇಶ್ ಶೆಟ್ಟಿ ಈ ಐದು ಆಟಗಾರರು ಉಳಿದು ಕೊಂಡಿದ್ದರು. ಫಿನಾಲೆಗಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಂಡ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ವಿಜೇತರು ಯಾರು ಎಂಬುದನ್ನು ಮೊದಲೇ fix ಮಾಡಿ ಆಟ ಆಡಿಸಿದ್ದಾರೆ ಎಂಬ ಚರ್ಚೆಯನ್ನು ಎಬ್ಬಿಸಿದ್ದರು.
ದಿವ್ಯಾ ಉರುಡುಗ(Divya) ಬಿಗ್ ಬಾಸ್ ಸೀಸನ್ 8ರಲ್ಲಿ ಉತ್ತಮ ಸ್ಪರ್ಧಿಯಾಗಿದ್ದು, ಬಿಗ್ ಬಾಸ್ ಸೀಸನ್ 9ರಲ್ಲಿ ಕಳೆದ ಬಾರಿಯಷ್ಟು ಉತ್ತಮ ಪ್ರದರ್ಶನವನ್ನು ತೋರಿಸಿಲ್ಲ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ದಿವ್ಯಾ ಅವರು ಔಟ್ ಆಗಿದ್ದಾರೆ. ಬಿಗ್ ಬಾಸ್ ವೇದಿಕೆಗೆ ಅವಕಾಶಕ್ಕಾಗಿ ಧನ್ಯವಾದ ಅರ್ಪಿಸಿ, ಗೆಲುವಿಗೆ ಹತ್ತಿರವಿದ್ದು ಹೊರಬಿದ್ದಿದ್ದರ ಬಗೆಗೆ ಬೇಸರ ಹೊರ ಸೂಚಿಸಿ ದಿವ್ಯಾ eliminate ಆಗಿದ್ದಾರೆ.

ದಿವ್ಯ ಹುಡುಗ ಎಲಿಮಿನೇಟ್ ಆದಮೇಲೆ ಉಳಿದ ನಾಲ್ಕು ಸ್ಪರ್ಧಿಗಳಲ್ಲಿ ದೀಪಿಕಾ ದಾಸ್ ದಿವ್ಯ ಉರುಡು ಗ ಬೆನ್ನಿಗೆ ಬಿಗ್ ಬಾಸ್ ಮನೆಯಿಂದ ಹೊರ ನಡೆದರು ಈ ಸಲ ಕೂಡ ಮಹಿಳಾಸ್ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಲಿಲ್ಲ. ಇನ್ನು ಉಳಿದ ಸ್ಪರ್ಧಿ ಗಳಾಗಿದ್ದ ರೂಪೇಶ್ ರಾಜಣ್ಣ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಈ ಮೂರಲ್ಲಿ ಯಾರು ಟ್ರೋಪಿ ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು.
ಈ ಮೂರು ಸ್ಪರ್ಧಿಗಳಲ್ಲಿ ರೂಪೇಶ್ ರಾಜಣ್ಣ ಅವರು ಮೊದಲು ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದರು. ಅದಾದ ನಂತರ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಈ ಇಬ್ಬರು ಸ್ಟೇಜ್ ಮೇಲೆ ಬಂದು ಸುದೀಪ್ ಅವರ ಪಕ್ಕ ನಿಂತರು. ಕೊನೆಗೆ ಬಿಗ್ ಬಾಸ್ ಅಂತ್ಯದಲ್ಲಿ ಸುದೀಪ್ ಅವರು ಗ್ರೂಪಿಗ್ ಶೆಟ್ಟಿ ಅವರ ಕೈ ಎತ್ತಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಘೋಷಣೆ ಮಾಡಿದರು. ರೂಪೇಶ್ ಶೆಟ್ಟಿ ವಿನ್ನರ್ ಆಗಿರುವುದು ರಾಕೇಶಲಿಗ ಅಭಿಮಾನಿಗಳಿಗೆ ಕೊಂಚಮಟ್ಟದ ಬೇಸರ ಉಂಟು ಮಾಡಿದೆ.
ಓಟಿಟಿಯಿಂದ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ ರೂಪೇಶ್ ಶೆಟ್ಟಿ (Roopesh Shetty) ಅವರು ಬಿಗ್ ಬಾಸ್ ಸೀಸನ್ 9ರ winner ಆಗಿದ್ದಾರೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿರುವ ರೂಪೇಶ್ ಶೆಟ್ಟಿ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇದೆ. ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಕೂಡ ವಿನ್ನರ್ ಆಗಿದ್ದ ರೂಪೇಶ್ ಶೆಟ್ಟಿ ಗೆ 5 ಲಕ್ಷ ರೂಪಾಯಿ ಮೌಲ್ಯದ ಬಹುಮಾನ ಸಿಕ್ಕಿತ್ತು.
ಬಿಗ್ ಬಾಸ್ ott season ನಲ್ಲೂ ಕೂಡ ರೂಪೇಶ್ ಶೆಟ್ಟಿಗೆ ಪ್ರತಿ ವಾರಕ್ಕೆ 50,000 ರೂಪಾಯಿಯ ಸಂಭಾವನೆ ಸಿಗುತ್ತಿತ್ತು. ಕೇವಲ ಓ ಟಿ ಟಿ ಸೀಸನ್ ನಲ್ಲಿ ರೂಪೇಶ್ ಶೆಟ್ಟಿ ಸುಮಾರು 30 ಲಕ್ಷ ರೂಪಾಯಿಗಳನ್ನು ಬಾಚಿಕೊಂಡಿದ್ದರು ಇದೀಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಕೂಡ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿರುವ ರೂಪೇಶ್ ಶೆಟ್ಟಿಗೆ ಬಹುಮಾನವಾಗಿ 50 ಲಕ್ಷ ರೂಪಾಯಿಯ ನಗದು ಬಹುಮಾನ ಸಿಕ್ಕಿದೆ.
ಇಷ್ಟೇ ಅಲ್ಲದೆ ರೂಪೇಶ್ ಶೆಟ್ಟಿ ಅವರಿಗೆ ಪ್ರತಿವಾರಕ್ಕೆ 3 ಲಕ್ಷ ರೂಪಾಯಿಯ ಸಂಭಾವನೆಯಂತೆ ಸುಮಾರು 40 ರಿಂದ 50 ಲಕ್ಷ ರೂಪಾಯಿಗಳ ಸಂಭಾವನೆ ಕೂಡ ಇವರಿಗೆ ಸಿಕ್ಕಿದೆ. ಒಟ್ಟಾರೆ ಬಿಗ್ ಬಾಸ್ ಓಟಿಪಿ ಸೀಸನ್ ಮತ್ತು ಬಿಗ್ ಬಾಸ್ ಸೀಸನ್ ೯ ಎರಡನ್ನು ಪರಿಗಣಿಸಿದರೆ ಸರಾಸರಿಒಂದರಿಂದ ಒಂದೂವರೆ ಕೋಟಿ ರೂಪಾಯಿ ಹಣವನ್ನು ರೂಪೇಶ್ ಶೆಟ್ಟಿ ತಮ್ಮದಾಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದ ಮಧ್ಯಮ ವರ್ಗದ ಹುಡುಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದು ವಿನ್ನರಾಗಿ ಒಂದು ಕೋಟಿ ರೂಪಾಯಿಗಳನ್ನು ಗೆದ್ದಿರುವುದು ನಿಜಕ್ಕೂ ಸಾಧನೆಯೆಸರಿ ರೂಪೇಶ್ ಶೆಟ್ಟಿ ಅವರ ಈ ಒಂದು ಹಾರ್ಡ್ ವರ್ಕ್ ಗೆ ಇಂದು ಪ್ರತಿಫಲ ಸಿಕ್ಕಿದೆ
