ಫಸ್ಟ್ ನೈಟ್ ದಿನವೇ ಮೊದಲ ಹೆಂಡತಿಗೆ ಶಾಕ್ ಕೊಟ್ಟ ಪ್ರಥಮ್!! ನಿಜಕ್ಕೂ ಆಗಿದ್ದೇನು ನೋಡಿ!!

ಒಳ್ಳೆ ಹುಡುಗ ಪ್ರಥಮ ಇದೀಗ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುಶ್ರೀ ಎಂಬ ಮಂಡ್ಯದ ಹಳ್ಳಿ ಹುಡುಗಿಯನ್ನ ಪ್ರಥಮ್ ಅವರು ಮದುವೆಯಾಗಿದ್ದಾರೆ. ಪ್ರಥಮ್ ಅವರು ಮದುವೆಯಾಗಿರುವ ಭಾನುಶ್ರೀ ಇನ್ನೂ ಕೂಡ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಂ ಎಸ್ ಸಿ ಪದವಿ ಪಡೆಯುತ್ತಿದ್ದಾರೆ.

ಯಾವುದೇ ಆಡಂಬರವಿಲ್ಲದೆ ತುಂಬಾ ಸರಳ ವಿವಾಹವನ್ನು ಪ್ರಥಮ್ ಅವರು ಆಚರಿಸಿಕೊಂಡಿದ್ದಾರೆ. ಪ್ರಥಮ್ ಅವರು ಮುಂಚೆಯಿಂದಲೂ ಕೂಡ ತುಂಬಾ ಹ್ಯೂಮರಸ್ ಮತ್ತು ಡೋಂಟ್ ಕೇರ್ ಆಟಿಟ್ಯೂಡ್ ಹೊಂದಿರುವ ವ್ಯಕ್ತಿ. ಬಿಗ್ ಬಾಸ್ ನಲ್ಲಿ ಪ್ರಥಮ್ ಅವರ ನಡವಳಿಕೆ ಹೇಗಿತ್ತೋ.. ಇದೀಗ ಹೊರಬಂದ ಮೇಲೆ ನಿಜ ಜೀವನದಲ್ಲೂ ಕೂಡ ಅವರು ಹಾಗೆ ಇದ್ದಾರೆ.

ಪ್ರಥಮ್ ಅವರು ಮದುವೆಯಾದ ಮೊದಲ ದಿನವೇ ಮೊದಲ ರಾತ್ರಿಯ ಫೋಟೋ ಒಂದು ಹಂಚಿಕೊಂಡು ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಟಬಲ್ ಸುತ್ತಿಕೊಂಡು ಕುಳಿತಿರುವ ಹುಡುಗಿಯ ಪಕ್ಕ ಅಂಗಿ ಬಿಚ್ಚಿ ಕೊಂಡು ಕುಳಿತುಕೊಂಡು.. ಇದು ನನ್ನ ಮೊದಲ ರಾತ್ರಿ ಎಂದು ಪ್ರಥಮ ಅವರು ಬರೆದುಕೊಂಡಿದ್ದಾರೆ.. ಪ್ರಥಮ ಅವರು ಮದುವೆಯಾಗಿರುವ ಭಾನುಶ್ರೀ ಅವರು ಈ ಫೋಟೋದಲ್ಲಿ ಇಲ್ಲ ಬದಲಾಗಿ ಬೇರೆ ಯಾವುದೋ ಹುಡುಗಿ ಇದ್ದದ್ದನ್ನು ಕಂಡು ವೀಕ್ಷಕರಿಗೆಲ್ಲ ಆಶ್ಚರ್ಯವಾಯಿತು..

ಆದರೆ ಆ ಸಾಲುಗಳ ಹಿಂದೆ ಇದ್ದದ್ದು ಬೇರೇನೇ ಅರ್ಥ. ಪ್ರಥಮ್ ಅವರು ಫೋಟೋ ಹಂಚಿಕೊಂಡು ಬರೆದಿರುವ ಸಾಲುಗಳಲ್ಲಿ ಹೀಗಿತ್ತು ಅದು ಏನೆಂದರೆ, “ಇದು ನನ್ನ ಫಸ್ಟ್ ನೈಟ್ ವಿಥ್ ದೆವ್ವ” ಎಂದು.. ಅಂದರೆ ಪ್ರಥಮ ಅವರು ಇದೀಗ ನಟಿಸುತ್ತಿರುವ ಮೂವಿ ಅಂದರೆ ಫಸ್ಟ್ ನೈಟ್ ವಿಥ್ ದೆವ್ವ ಈ ಮೂವಿಯಲ್ಲಿ ಬರುವ ಒಂದು ದೃಶ್ಯದ ಫೋಟೋ ಒಂದನ್ನು ಪ್ರಥಮ ಅವರು ಹಂಚಿಕೊಂಡು “ಇದು ನನ್ನ ಫಸ್ಟ್ ನೈಟ್ ವಿಥ್ ದೆವ್ವ” ಎಂದು ಬರೆದುಕೊಂಡಿದ್ದಾರೆ.. ಪ್ರಥಮ್ ಅವರು ಬರೆದಿರುವ ಈ ಸಾಲುಗಳನ್ನು ಅರ್ಥ ಮಾಡಿಕೊಳ್ಳಲು ವೀಕ್ಷಕರಿಗೆ ಸ್ವಲ್ಪ ಸಮಯಾವಕಾಶ ಬೇಕಾಯಿತು.

Leave a Reply

Your email address will not be published. Required fields are marked *