ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಸ್ನೇಹ ಮುಂದುವರೆಯುತ್ತಾ? ಕೊನೆಗೂ ಸಿಕ್ತು ಉತ್ತರ!

ಬಿಗ್​ ಬಾಸ್​ ಕನ್ನಡ ಸೀಸನ್​ 10′ (BBK 10) ಶೋನಲ್ಲಿ ಅಂತ್ಯವಾಗಿದ್ದು ಈ ಶೋ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಸದ್ಯಕ್ಕೆ ಕಾರ್ತಿಕ್ ಮಹೇಶ್ ಅವರು ವಿಜೇತರಾದ ಖುಷಿಯಲ್ಲಿಯೇ ಇದ್ದು, ಬಿಗ್ ಬಾಸ್ ಮನೆಯ ಅನುಭವ ಹಾಗೂ ತನ್ನ ಮುಂದಿನ ಪ್ಲಾನ್ ಏನು ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ.

ಈಗಾಗಲೇ ಖಾಸಗಿ ಸುದ್ದಿ ವಾಹಿನಿಗಳ ಸಂದರ್ಶನಗಳಲ್ಲಿ ಭಾಗಿಯಾಗಿ ತಮ್ಮ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ಇದೇ ವೇಳೆ ಸಂಗೀತಾ ಶೃಂಗೇರಿಯವರ ಬಗ್ಗೆ ಮಾತಾನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರಾರಂಭದ ದಿನಗಳಲ್ಲಿ ಸ್ನೇಹಿತರಾಗಿದ್ದ ಸಂಗೀತಾ ಶೃಂಗೇರಿ (Sangeetha Shrungeri) ಹಾಗೂ ಕಾರ್ತಿಕ್ ಮಹೇಶ್ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು.

ಆದರೆ ಬರು ಬರುತ್ತಾ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪಗಳಾಗಿ ಇಬ್ಬರೂ ದೂರವಾದರು. ತದನಂತರದಲ್ಲಿ ಕಾರ್ತಿಕ್​ ಮಹೇಶ್ ಅವರು ಸಂಗೀತಾ ಶೃಂಗೇರಿಯವರ ಜೊತೆಗಿನ ಸ್ನೇಹವನ್ನು ಮುಂದುವರೆಸಲು ಪ್ರಯತ್ನಿಸಿದರೂ ಅವರು ಮಾತ್ರ ಮನಸ್ಸು ಮಾಡಲೇ ಇಲ್ಲ. ಆದರೆ ಇದೀಗ ಬಿಗ್ ಬಾಸ್ ಮುಕ್ತಾಯವಾಗಿದ್ದು ಇಬ್ಬರೂ ಕೂಡ ಅವರವರ ಮನೆ ಸೇರಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಕಾರ್ತಿಕ್​ ಅವರು ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್​ಅಪ್​ ಆಗಿದ್ದಾರೆ. ಬಿಗ್​ ಬಾಸ್​ ಗೆದ್ದ ಬಳಿಕ ಕಾರ್ತಿಕ್​ಗೆ ಸಂಗೀತಾರವರು ಏನು ಹೇಳಿದ್ರು ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಈ ವೇಳೆಯಲ್ಲಿ ಕಾರ್ತಿಕ್​ ಮಹೇಶ್​ ಉತ್ತರಿಸಿದ್ದು, ‘ಅವರು ಏನೂ ಹೇಳಲಿಲ್ಲ. ವಿಶ್​ ಮಾಡಿದರು ಅಷ್ಟೇ’ ಎಂದಿದ್ದಾರೆ.

ಅದಲ್ಲದೇ ‘ಸಂಗೀತಾ ಜೊತೆ ನಿಮ್ಮ ಸ್ನೇಹ ಮುಂದುವರಿಯುತ್ತಾ’ ಎಂದು ಕೇಳಿದ್ದಕ್ಕೆ ಕಾರ್ತಿಕ್ ಮಹೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ‘ನಾನು ಬಿಗ್​ ಬಾಸ್​ ಮನೆಯೊಳಗೆ ಇದ್ದಾಗಲೇ ಇದನ್ನು ಹೇಳಿದ್ದೆ. ಸ್ನೇಹಕ್ಕಾಗಿ ನಾನು ಈಗಲೂ ಸೋಲೋಕೆ ಸಿದ್ಧ ಎಂದು ಲೆಟರ್​ ಬರೆದು ಹೇಳಿದ್ದೆ. ನಿಮ್ಮ ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ. ಮುಖದಲ್ಲಿ ಒಂದು ನಗು ಮತ್ತು ನಾಲ್ಕು ಒಳ್ಳೆಯ ಮಾತು ಸಾಕು.

ಯಾಕೆಂದರೆ, ಇರುವುದು ಒಂದು ವಾರ ಮಾತ್ರ ಅಂತ ನಾನು ಹೇಳಿದ್ದೆ. ಆದರೆ ಮರುದಿನ ತುಂಬ ಸಣ್ಣ ವಿಷಯಕ್ಕೆ ಮತ್ತೆ ಜಗಳ ಆಯಿತು. ಹಾಗಾಗಿ ಅದು ಹಂಗೆ ಇದ್ದರೇನೇ ಒಳ್ಳೆಯದು’ ಎಂದಿದ್ದಾರೆ. ‘ನಾನು ಕಪ್​ ಹಿಡಿದುಕೊಂಡ ಬಂದಾಗ ಎಲ್ಲರೂ ಖುಷಿಪಟ್ಟರು. ವಿನಯ್​ (Vinay) ಔಟ್​ ಆಗಿದ್ದರೂ ಕೂಡ ಕಪ್​ ಹೊಡೆದುಕೊಂಡು ಬಾ ಅಂತ ನನಗೆ ಹೇಳಿದ್ದ.

ಅದೆಲ್ಲ ಅವರ ಪ್ರೀತಿ. ತನಿಷಾ (Tanisha) ಕೂಡ ಹೊರಗಡೆ ಹೋದ ನಂತರವೂ ಬೆಂಬಲ ನೀಡಿದರು. ಆಟಕ್ಕಾಗಿ ನಾನು ಅವಳನ್ನು ಬಿಟ್ಟುಕೊಟ್ಟರೂ ಅವಳು ನನ್ನನ್ನು ಬಿಟ್ಟುಕೊಡಲಿಲ್ಲ. ಅದಕ್ಕೆ ನಾನು ಅವಳಿಗೆ ಋಣಿ ಆಗಿರುತ್ತೇನೆ. ನನ್ನ ಗೆಲುವನ್ನು ಅವರ ಗೆಲುವು ಎಂಬ ರೀತಿಯಲ್ಲಿ ಖುಷಿಪಟ್ಟರು’ ಎಂದಿದ್ದಾರೆ.

Leave a Reply

Your email address will not be published. Required fields are marked *