ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್ ಆಗಿ ಹೊರ ಹೊಮ್ಮಿದ ಕಾರ್ತಿಕ್ ಮಹೇಶ್, ಬಿಗ್ ವಿನ್ನರ್ ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (Bigg Boss Sisan 10) ರ ಗ್ರ್ಯಾಂಡ್‌ ಫಿನಾಲೆ ಶುರುವಾಗಿದೆ. ಈಗಾಗಲೇ ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ನ ಗ್ರ್ಯಾಂಡ್ ಫಿನಾಲೆ ಸಂಭ್ರಮವು ಜೋರಾಗಿದೆ. ನಿನ್ನೆ ಹಾಗೂ ಇವತ್ತು ಎರಡೂ ದಿನ ಅದ್ದೂರಿ ವೇದಿಕೆಯಲ್ಲಿ ಈ ಬಾರಿಯ ವಿನ್ನರ್ ಯಾರು ಎಂದು ಅನೌನ್ಸ್ ಆಗಲಿದೆ. ಕಿಚ್ಚ ಸುದೀಪ್ ಕೂಡ ಈಗಾಗಲೇ ಫಿನಾಲೆ ರೆಡಿಯಾಗಿದ್ದು, ನಿನ್ನೆ ವೇದಿಕೆಗೆ ಎಂಟ್ರಿ ಕೊಟ್ಟು ಪ್ರೇಕ್ಷಕರನ್ನು ಮನೋರಂಜಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ 10 ರ ಎಲಿಮಿನೇಟ್‌ ಆದ ಎಲ್ಲ ಸ್ಪರ್ಧಿಗಳು ಒಟ್ಟಿಗೆ ಸೇರಿದ್ದಾರೆ. ಆದರೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಆರು ಜನರಷ್ಟೆ ಉಳಿದ್ದರು. ಹೌದು, ದೊಡ್ಮನೆಯಲ್ಲಿ ಸವಾಲುಗಳನ್ನು ಎದುರಿಸಿಕೊಂಡು 113 ದಿನಗಳವರೆಗೆ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ , ವಿನಯ್ ಹಾಗೂ ಪ್ರತಾಪ್ ಫಿನಾಲೆವರೆಗೆ ಬಂದಿದ್ದಾರೆ.

ಇತ್ತ ಆರು ಜನ ಫೈನಲಿಸ್ಟ್​ಗಳಲ್ಲಿ ಕಾಮಿಡಿ ನಟ ತುಕಾಲಿ ಸಂತೋಷ್ (Tukali Santhosh) ಮೊದಲು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಹೀಗೊಂದು ಸುದ್ದಿಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದಲ್ಲದೇ, ಬಿಗ್ ಬಾಸ್ ಟ್ರೋಫಿ ಗೆಲ್ಲೋದು ವಿನಯ್ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಆದರೆ ಇದೀಗ ವಿನಯ್ ಗೌಡ (Vinay Gowda) ಔಟ್ ಆಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಷ್ಟೇ ಅಲ್ಲದೆ ಈ ಬಾರಿಯ ವಿನ್ನರ್ ಆಗಿ ಕಾರ್ತಿಕ್ ಗೌಡ ಹೊರಹೊಮ್ಮಿದ್ದಾರೆ ಎನ್ನಲಾಗುತ್ತಿದೆ.ಕಾರ್ತಿಕ್​ ಮಹೇಶ್ (Karthik Mahesh) ಅವರು ಬಿಗ್​ ಬಾಸ್​ ಮನೆಯಲ್ಲಿ ಮೊದಲ ವಾರದಿಂದ ಈವರೆಗೆ ಸತತವಾಗಿ ಶ್ರಮಪಡುತ್ತಾ ಬಂದಿದ್ದಾರೆ.

ಆದರೆ ಕೊನೆಗೂ ವಿನ್ನರ್ ಅವರೇ ಆಗಿದ್ದಾರೆ ಎನ್ನಲಾಗಿದೆ. ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ ರವರಿಗೆ 50 ಲಕ್ಷ ಸಿಕ್ಕಿದೆ. ಆದರೆ ಆ ಮೊತ್ತದಲ್ಲಿ ಶೇಕಡಾ ಮೂವತ್ತರಷ್ಟು ಟ್ಯಾಕ್ಸ್ ಕಟ್ ಆಗಿ 35 ಲಕ್ಷ ಹಣ ಅವರ ಕೈಗೆ ಸಿಗಲಿದೆ. ಬಿಗ್ ಬಾಸ್ ಮನೆಯಿಂದ ಗೆದ್ದ ಹಣವನ್ನು ತಾಯಿ ಹಾಗೂ ಮುದ್ದಿನ ತಂಗಿ ನೀಡಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *