ಬಿಗ್ ಬಾಸ್ ಮನೆಯ ಖಳನಾಯಕ ವಿನಯ್ ಗೌಡರವರ ಒಂದು ವಾರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಅತಿ ಹೆಚ್ಚು ಅಂದರೆ ಇವರದೇ ನೋಡಿ!!!

ಬಿಗ್ ಬಾಸ್ ಕನ್ನಡ ಹತ್ತನೇ ಆವೃತ್ತಿಯ (Bigg boss Sisan 10) ಶೋ ಚೆನ್ನಾಗಿಯೇ ನಡೆಯುತ್ತಿದ್ದು, ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂಡ ತಮ್ಮ ಕರಾಮತ್ತನ್ನು ತೋರಿಸುತ್ತಿದ್ದಾರೆ. ಅದರಲ್ಲಿಯೂ ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಜ-ಗಳಗಳು , ಕಿ-ತ್ತಾಟದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಒಂದಲ್ಲ ಒಂದು ರೀತಿಯಿಂದಲೇ ಶಕ್ತಿಶಾಲಿಗಳು.

ಆದರೆ ಈ ಬಿಗ್​ಬಾಸ್ (Bigg Boss) ಮನೆಯ ಶಕ್ತಿಶಾಲಿ ಸ್ಪರ್ಧಿ ಎನಿಸಿಕೊಂಡ ಸ್ಪರ್ಧಿಗಳಲ್ಲಿ ವಿನಯ್ ಗೌಡ (Vinay Gowda) ಕೂಡ ಒಬ್ಬರು. ಸುದೀಪ್ ಕೈಯಲ್ಲಿ ಆನೆ ಎಂದು ಸಹ ಕರೆಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆನೆಯ ರೀತಿಯೇ ಇದ್ದಾರೆ. ಮೊದಲ ಕೆಲವು ವಾರಗಳಂತೂ ವಿನಯ್​ ಅವರ ಆ-ಕ್ರಮಣಕಾರಿ ಪ್ರವೃತ್ತಿಯೂ ಅ-ತಿರೇಕಕ್ಕೆ ಹೋಗಿತ್ತು.

ವೀಕೆಂಡ್ ಪಂಚಾಯತ್ ನಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರು ವಿನಯ್ ಅವರಿಗೆ ಬೆಂಡೆತ್ತಿದ ಪರಿಣಾಮವಾಗಿ ಶಾಂತವಾದರು. ಆದರೆ ಈ ವಾರ ವಿನಯ್ ಅವರು ತಮ್ಮ ಹಳೆಯ ವರಸೆಯನ್ನು ಮುಂದಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅಸಲಿ ಆಟಗಳು ಶುರುವಾಗಿದೆ.

ಹರ ಹರ ಮಹಾದೇವ (Harahara Mahadeva) ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಎಲ್ಲರಿಗೂ ಕೂಡ ಹತ್ತಿರವಾಗಿದ್ದ ವಿನಯ್ ಅವರು ಕನ್ನಡ ಕಿರುತೆರೆ ಲೋಕದಲ್ಲಿ ಛಾಪು ಮೂಡಿಸಿದವರು. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟಆಡುತ್ತಿರುವ ವಿನಯ್ ಗೌಡರವರ ವಾರ್ಷಿಕ ಆದಾಯ ಐದು ಕೋಟಿ ರೂಪಾಯಿ ಎನ್ನಲಾಗಿದೆ. ತಿಂಗಳಿಗೆ ಬರೋಬ್ಬರಿ ಒಂದು ಲಕ್ಷದವರೆಗೆ ಹಣ ಸಂಪಾದಿಸುತ್ತಾರಂತೆ.

ಆದರೆ ಬಿಗ್ ಬಾಸ್ ಮನೆಯಲ್ಲಿಯೂ ದೊಡ್ಡಮೊತ್ತದಲ್ಲಿ ಸಂಭಾವನೆ (Remuneration) ಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತೀ ವಾರಕ್ಕೆ ವಿನಯ್ ಗೌಡರವರು 2-3 ಲಕ್ಷ ರೂ, ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದ್ದು, ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *