ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಗಳು ಮೊಬೈಲ್ ಬಳಸುತ್ತಿದ್ದಾರಾ? ಫೋಟೋವೊಂದು ವೈರಲ್ ಅಸಲಿ ಸತ್ಯ ಏನು..!

ಕನ್ನಡ ಬಿಗ್ ಬಾಸ್ ಸೀಸನ್ 10 (Kannada Bigg Boss Sisan 10) ಈ ಬಾರಿಯ ಬಿಗ್ ಬಾಸ್ ಹ್ಯಾಪಿ ಬಿಗ್ ಬಾಸ್. ಆದರೆ ಈ ಹ್ಯಾಪಿ ಬಿಗ್ ಬಾಸ್ (Happy Bigg Boss) ನಂತೆ ಬಿಗ್ ಬಾಸ್ ಮನೆಯಿಲ್ಲ. ಬದಲಾಗಿ ಪ್ರಾರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆಗಳ ಕಿತ್ತಾಟ, ಜಗಳ, ಮ-ನಸ್ತಾಪಗಳು ಜೋರಾಗಿಯೇ ಇತ್ತು. ಆದರೆ ಅದು ಈ ಸೀಸನ್ 10 ಮುಗಿಯುವವರೆಗೂ ಮುಂದುವರೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಬಿಗ್ ಬಾಸ್ ಮನೆಯಲ್ಲಿ ಇನ್ನು ಕೆಲವೇ ದಿನಗಳ ಆಟ ಮುಂದುವರೆಯಲಿದೆ. ಈಗಾಗಲೇ 70 ದಿನಗಳು ಮುಗಿದಿದ್ದು, ಇನ್ನು 30 ದಿನಗಳಿದ್ದು, ಈ ಬಿಗ್ ಬಾಸ್ ಶೋ ಮುಗಿಯಲಿದೆ. ಹೀಗಾಗಿ ಸ್ಪರ್ಧಿಗಳ ನಡುವಿನ ಸ್ಪರ್ಧೆಯು ಕಠಿಣವಾಗುತ್ತಿದ್ದು, ಎಲ್ಲಾ ಸ್ಪರ್ಧಿಗಳ ನಡುವಿನ ಕಾಂಪಿಟೇಷನ್ ಜೋರಾಗಿದೆ.

ಹೀಗಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮೊಬೈಲ್ ಚಾರ್ಜರ್ (Mobile Charger) ಬಳಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಿಗ್ ಬಾಸ್ ಮನೆ ಎಂದ ಮೇಲೆ ಅಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ ಸ್ಪರ್ಧಿಗಳಿಗೆ ಹೊರ ಜಗತ್ತಿನ ಯಾವುದೇ ವಿಷಯಗಳು ತಿಳಿಯುವಂತಿಲ್ಲ. ನಾಲ್ಕು ಗೋಡೆಗಳ ನಡುವೆ ಒಂದಷ್ಟು ದಿನಗಳ ಕಾಲ ಇರಲೇಬೇಕು ಇದೇ ಬಿಗ್ ಬಾಸ್.

ಆದರೆ ಇದೀಗ ಮೊಬೈಲ್ ಚಾರ್ಜರ್ ಫೋಟೋ (Mobile Charger Photo) ವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯಕ್ಕೆ ಈ ಫೋಟೋ ನೋಡಿದ ನೆಟ್ಟಿಗರು ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಗೆ ಗೊತ್ತಾದಾಗ ಹಾಗೇ ಮೊಬೈಲ್ ಬಳಸುತ್ತಿದ್ದಾರಾ ಎನ್ನುವ ಅ-ನುಮಾನವೊಂದು ಮೂಡಿದೆ. ವೈರಲ್ ಆಗಿರುವ ಫೋಟೋದಲ್ಲಿ ಸಂಗೀತಾ ಶೃಂಗೇರಿ ಬೆಡ್ ಮೇಲೆ ಕುಳಿತುಕೊಂಡಿದ್ದು, ಅಲ್ಲೇ ಪ್ಲಗ್‌ನಲ್ಲಿ ಚಾರ್ಜ್‌ ಕಾಣುತ್ತಿದೆ.

ಈ ಫೋಟೋವೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದ್ದು, ಇದು ಮೊಬೈಲ್ ಚಾರ್ಜರ್ ನಂತೆ ಕಾಣಿಸುತ್ತಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಕೆಲವರು ಮೊಬೈಲ್‌ ಚಾರ್ಜರ್‌ ಎಂದು ಹೇಳಿದರೆ, ಮತ್ತೆ ಕೆಲವರು ಟ್ರಿಮ್ಮರ್‌ ಚಾರ್ಜರ್‌ (Trimmer Charger) ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಬಳಸಲು ಇಲ್ಲದ ಕಾರಣ ಇದು ಟ್ರಿಮ್ಮರ್‌ ಚಾರ್ಜರ್‌ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *