ಹುಲಿ ಉಗುರು ಖರೀದಿ ಮಾಡಲು ವರ್ತೂರ್ ಸಂತೋಷ್ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಸಂತೋಷ್ ಮಾಡಿದ ಮಾಸ್ಟರ್ ಪ್ಲಾನ್ ಹೇಗಿತ್ತು ನೋಡಿ!!

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದು ಈ ಬಿಗ್ ಬಾಸ್. ಇದೀಗ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ವರ್ತೂರ್ ಸಂತೋಷ್ (Varthuru Santhosh) ಅವರನ್ನು ಬಿಗ್ ಮನೆಯಿಂದಲ್ಲಿ ಪೊಲೀಸರು ಬಂಧಿಸಿದ್ದಾರೆ. ಹುಲಿ ಉಗುರಿನ ಡಾಲರ್​ (Dollar) ಧರಿಸಿದ್ದರು ಎನ್ನುವ ಆರೋಪದ ಮೇಲೆ ಅವರನ್ನು ಅರಣ್ಯಾಧಿಕಾರಿಗಳು ತಡರಾತ್ರಿ ಅರೆಸ್ಟ್​ ಮಾಡಿದ್ದು, ಕಳೆದ ಭಾನುವಾರ ರಾತ್ರಿಯಿಂದಲೇ ಸಂತೋಷ್​ ಅವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ವರ್ತೂರ್ ಸಂತೋಷ್ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ‘ಹುಲಿಯ ಎರಡು ಉಗುರು ಒಳಗೊಂಡಿದ್ದ ಚಿನ್ನದ ಲಾಕೆಟ್‌ನ್ನು ಸಂತೋಷ್ ಧರಿಸಿದ್ದರು. ಹುಲಿಯನ್ನು ಕೊಂ-ದು ಅದರಿಂದ ಉಗುರು ತೆಗೆದು ಮಾರಾಟ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನಲೆಯಲ್ಲಿ ಬಿಗ್ ಬಾಸ್ ಶೋನಿಂದಲೇ ಡೈರೆಕ್ಟ್ ಆಗಿ ಪೊಲೀಸ್ ಕಸ್ಟಡಿಗೆ ಒಳಪಟ್ಟಿದ್ದಾರೆ.

ಆರೋಪಿಯಿಂದ ಹುಲಿ ಉಗುರುಗಳನ್ನು ವ-ಶ ಪಡಿಸಿಕೊಳ್ಳಲಾಗಿದ್ದು,. ಈ ಉಗುರುಗಳನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಸಂತೋಷ್ ಹೇಳಿಕೆ ಪಡೆಯಲಾಗಿದೆ. ಇತ್ತ ಜಾಮೀನು ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಂತೋಷ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಪ್ರಕರಣವು ಜಮೀನು ರಹಿತ ಪ್ರಕರಣವಾಗಿರುವ ಕಾರಣ 7 ವರ್ಷಗಳ ಜೈಲು ಹಾಗೂ ₹5 ಲಕ್ಷದಿಂದ ₹10 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆಯಿದೆ.

ಮೂರು ವರ್ಷಗಳ ಹಿಂದೆ ತಮಿಳುನಾಡು ಹೊಸೂರು ಬಳಿಯ ಗ್ರಾಮವೊಂದರ ವ್ಯಕ್ತಿಯೊಬ್ಬರಿಂದ 20 ಸಾವಿರಕ್ಕೆ ಎರಡು ಉಗುರುಗಳನ್ನು ಖರೀದಿಸಿದ್ದೆ. ವರ್ತೂರಿನ ಚಿನ್ನ ವ್ಯಾಪಾರಿಯೊಬ್ಬರು ಉಗುರಿಗೆ ತಕ್ಕಂತೆ ಲಾಕೆಟ್ ಮಾಡಿಕೊಟ್ಟಿದ್ದರು. ಹುಲಿ ಉಗುರು ಧರಿಸುವುದು ಅಪರಾಧವೆಂಬುದು ನನಗೆ ಗೊತ್ತಿರಲಿಲ್ಲ’ ಎಂದಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಇತ್ತ ‘ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಸ್ನೇಹಿತ (Santhosh Friend) ಹಾಗೂ ಚಿನ್ನದ ವ್ಯಾಪಾರಿಗೆ ನೋಟಿಸ್ ನೀಡಲಾಗಿದೆ’ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಹತ್ತು ವರ್ಷದ ಹಿಂದೆ ನಾನು ಚೈನ್ ಮಾಡಿಕೊಟ್ಟಿದ್ದೆ ಅವನು ಚೈನ್‌ಗೆ ಲಾಕೆಟ್ ಮಾಡಿಸಿಕೊಂಡಿದ್ದ. ನಾವು ಕೂಡ ಪ್ರಾಣಿ ಸಾಕುತ್ತೇವೆ ಅದರ ಬಗ್ಗೆ ಮಾಹಿತಿ ಇದ್ದರೆ ಹಾಕಿಕೊಳ್ಳುತ್ತಿರಲಿಲ್ಲ.

ಯಾರೋ ದ್ವೇಷದಿಂದ ಹೀಗೆ ಮಾಡಿದ್ದಾರೆ. ನನ್ನ ಮಗ ಬಿಗ್ ಬಾಸ್ ನಿಂದ ಗೆದ್ದು ಬರುತ್ತೇನೆ ಅಂತ ಹೇಳಿ ಹೋಗಿದ್ದ ಬೆಳೆಯೋರನ್ನ ತುಳಿಯೋರು ಜಾಸ್ತಿಯಾಗಿದ್ದಾರೆ.ಲಾಕೆಟ್ ಅನ್ನ ನನ್ನ ಮಗನೇ ತೆಗೆದುಕೊಂಡಿದ್ದ. ಅದರೆ ಎಲ್ಲಿ ತೆಗೆದುಕೊಂಡಿದ್ದಾನೆ ಎನ್ನುವ ಮಾಹಿತಿ ಇಲ್ಲ. ಅವನಿಗೆ ಯಾರು ದ್ವೇಷಿಗಳಿದ್ದಾರೆ ಅಂತ ಗೊತ್ತಿಲ್ಲ. ನನ್ನ ಮಗನ ರೀತಿ ಬೇರೆಯವರು ಇದನ್ನು ಹಾಕಿಕೊಳ್ಳುತ್ತಿದ್ದಾರೆ.

ಅವರ ಮೇಲೂ ಕೂಡ ಕ್ರಮ ಆಗಬೇಕು, ಅವನು ಇದನ್ನು ಹಿಂದಿನಿಂದಲೂ ಕೂಡ ಹಾಕಿಕೊಳ್ಳುತ್ತಿದ್ದ, ಈಗ ಯಾರೋ ಅವನ ಮೇಲೆ ಪಿ-ತೂರಿ ಮಾಡಿದ್ದಾರೆ. ನನ್ನ ಮಗನನ್ನು ನೀವ ಕಾಪಾಡಬೇಕು ಎಂದು ಸಂತೋಷ್ ತಾಯಿ ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *