ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಡ್ರೋನ್ ಪ್ರತಾಪ್ ಅವರು ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಬಿಗ್ ಬಾಸ್ ಮನೆಯ (Bigg Boss Kannada) ಅಸಲಿ ಆಟವು ಆರಂಭವಾಗಿದ್ದು ಸ್ಪರ್ಧಿಗಳ ನಡುವೆ ಒಂದಲ್ಲ ಒಂದು ವಿಚಾರಕ್ಕಾಗಿ ಅಸಮಾಧಾನಗಳು ತಲೆದೂರುತ್ತಿವೆ. ಈಬಾರಿಯ ಬಿಗ್ ಬಾಸ್ ಸೀಸನ್ 10 (Big Boss Sisan 10) ರಲ್ಲಿ ದೊಡ್ಮನೆಯಲ್ಲಿ ಹದಿನೇಳು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಹದಿನೇಳು ಜನರಲ್ಲಿ ಒಬ್ಬರಾಗಿರುವವರು ಈ ಡ್ರೋನ್ ಪ್ರತಾಪ್ (Drone Prathap). ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್‌ಗೆ ಆದವರು. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಇವರ ಸಂಭಾವನೆಯ ವಿಚಾರವು ಭಾರಿ ಚರ್ಚೆಯಾಗುತ್ತಿದೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಡ್ರೋನ್ ಪ್ರತಾಪ್ ಅವರು ದಿನಕ್ಕೆ ಹದಿಮೂರು ಸಾವಿರ ರೂಪಾಯಿಯಷ್ಟು ಸಂಭಾವನೆ (Remuneration) ಯನ್ನು ಪಡೆಯುತ್ತಾರೆ. ಅದಲ್ಲದೇ ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಡ್ರೋನ್ ಪ್ರತಾಪ್‌ಗೆ (Drone Prathap) ಡೋಂಗಿ ಎಂದು ಸ್ಪರ್ಧಿಗಳು ಕಾಲೆಳೆದು ಅವರನ್ನು ಕೆಣಕಿದ್ದಾರೆ. ತುಕಾಲಿ ಸಂತೋಷ್ (Tukali Santhosh) ಅವರು ಪ್ರತಾಪ್‌ನ ಕೆಣಕಿದ್ದು, ಡ್ರೋನ್‌ನ ಇವರೇ ತಯಾರಿಸುವುದಲ್ಲ. ಬೇರೆ ಕಡೆಯಿಂದ ತಂದು ಇವರು ಬಾಡಿಗೆ ಕೊಡೋದು ಅಷ್ಟೇ ಎಂದು ಜೋರಾಗಿ ನಕ್ಕಿದ್ದಾರೆ.

ಇದನ್ನು ಕೇಳಿ ಪ್ರತಾಪ್‌ಗೆ ಸಿಟ್ಟೇ ಬಂತು. ಬಿಸ್ನೆಸ್ ಬಗ್ಗೆ ಮಾತನಾಡೋದಾದರೆ ಕಚೇರಿಗೆ ಬನ್ನಿ, ಇಲ್ಲಿ ಆ ಬಗ್ಗೆ ಮಾತನಾಡಬೇಡಿ ಎಂದು ಸಿಟ್ಟಿನಿಂದಲೇ ಹೇಳಿದ್ದಾರೆ. ಆದರೆ ಇತ್ತ ಸ್ನೇಹಿತ್ (Snehith) ಅವರು ಇದು ಜೆನ್ಯೂನ್ ಪ್ರಶ್ನೆ ಆಗಿತ್ತು ಎಂದಿದ್ದಾರೆ. ಅದಲ್ಲದೇ, ಈ ವೇಳೆ ನೀನು ಡೋಂಗಿ ಎಂದು ಸ್ನೇಹಿತ್ ಕೂಡ ಹೇಳಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ಕೆಲ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಅವರನ್ನು ಕೆಣಕಿದ್ದು ಕೆಂಗಣ್ಣಿಗೆ ಗುರಿಯಾಗಿರುವುದು ಮಾತ್ರ ಸುಳ್ಳಲ್ಲ.

Leave a Reply

Your email address will not be published. Required fields are marked *