ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಪ್ರೆಗ್ನೆಂಟ್ ಆದ ಸ್ಪರ್ಧಿ ಅಂಕಿತಾ. ನಿಜಕ್ಕೂ ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದು ಏನು? ಇಲ್ಲಿದೆ ನೋಡಿ!!

ಜನಪ್ರಿಯ ಶೋಗಳ ಪಟ್ಟಿಗೆ ಸೇರಿರುವ ಬಿಗ್ ಬಾಸ್ (Bigg Boss) ಶೋ ಕನ್ನಡ ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಶೋ ಪ್ರಸಾರವಾಗುತ್ತಿದೆ. ಇತ್ತ ನಟ ಸಲ್ಮಾನ್​ ಖಾನ್​ (Salman Khan) ನಡೆಸಿಕೊಡುವ ಈ ಬಾರಿಯ ಹಿಂದಿ ಬಿಗ್​ಬಾಸ್​ ಶೋಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಹಿಂದಿ ಪ್ರೇಕ್ಷಕರು ಬಿಗ್ ಬಾಸ್ ಶೋವನ್ನು ಬಹಳ ಕುತೂಹಲದಿಂದ ನೋಡುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಸ್ಪರ್ಧಿ ಯಾಗಿರುವ ನಟಿ ಅಂಕಿತಾ ಲೋಖಂಡೆ (Ankitha Lokhande) ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರ.ಈ ಬಾರಿಯ ಬಿಗ್ ಬಾಸ್ 17 ಶೋಗೆ ಅಂಕಿತಾ ಹಾಗೂ ಅವರ ಪತಿ ವಿಕ್ಕಿ ಜೈನ್ ಸಲ್ಮಾನ್ ಖಾನ್ (Vikki Jain Salman Khan) ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಆದರೆ ಪ್ರಾರಂಭದಲ್ಲಿ ಈ ಜೋಡಿಯ ಜಗಳವು ಸಿಕ್ಕಾಪಟ್ಟೆ ಸುದ್ದಿ ಯಾಗಿತ್ತು.

ಹೌದು, ರಿಯಲ್ ಲೈಫ್ ನಲ್ಲಿ ಮುದ್ದಾದ ಜೋಡಿ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ಕಚ್ಚಾಟದ ಮೂಲಕವೇ ಸುದ್ದಿಯಾಗುತ್ತಿದ್ದರು. ಅದಲ್ಲದೆ ಈ ಜೋಡಿಯನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಇತ್ತ ಬಿಗ್​ಬಾಸ್​ ಮನೆಯಲ್ಲಿ ಪತಿ ಹತ್ತಿರವೇ ಇದ್ದರೂ ಅಂಕಿತಾರವರು, ನಾನು ಯಾಕೆ ಇಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆ ಇದ್ದಿಯ. ಆದರೆ ನನ್ನ ಜೊತೆ ಮಾತ್ರ ಇಲ್ಲ. ಅದನ್ನು ನಾನು ಫೀಲ್ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದರು. ಆದರೆ ಆದಾದ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಲ್ಲಿ ಅಂಕಿತಾರವರಿಂದ ಒಂದೊಳ್ಳೆ ಗುಡ್ ನ್ಯೂಸ್ (Good news) ವೊಂದು ಹೊರ ಬಿದ್ದಿತ್ತು.

ಪ್ರೊಮೋದಲ್ಲಿ ಅಂಕಿತಾ ಅವರು, ನಾನು ಸುಳ್ಳು ಹೇಳುತ್ತಿಲ್ಲ. ಏನೋ ಸಮಸ್ಯೆ ಆಗುತ್ತಿದೆ ಎನ್ನಿಸ್ತಿದೆ. ಹುಳಿ ತಿನ್ಬೇಕು ಅನಿಷ್ತಿದೆ. ನನಗೆ ತುಂಬಾ ಭಯವಾಗ್ತಿದೆ ಎಂದಿದ್ದರು. ಅದಲ್ಲದೇ, ತಾವು ಗ-ರ್ಭಿಣಿ ಹೌದೋ ಅಲ್ಲವೋ ಎಂದು ತಿಳಿಯಲು ಮೂತ್ರ ಪರೀಕ್ಷೆ ಮಾಡಿಸುವ ಬಗ್ಗೆ ಹೇಳಿದ್ದರು. ಒಟ್ಟಿನಲ್ಲಿ ಏನೋ ಗೊಂದಲ ಆಗ್ತಿದೆ ಎಂದಿದ್ದರು.

ವೈದ್ಯಕೀಯ ಪರೀಕ್ಷೆಯೂ ನಡೆದಿದ್ದು ಅದರ ವರದಿಯೂ ಬಂದಿದೆ ಎನ್ನಲಾಗುತ್ತಿದೆ. ಹೌದು, ಇದೀಗ ಈ ವರದಿಯಲ್ಲಿ ನೆಗೆಟಿವ್​ ರಿಪೋರ್ಟ್​ ಬಂದಿದ್ದು ಅಂಕಿತಾರವರು ಗರ್ಭಿಣಿಯಲ್ಲ ಎನ್ನುವುದು ಪಕ್ಕಾ ಆಗಿದೆ. ಇತ್ತ ಫ್ಯಾನ್ಸ್ ಗಳು ತಮ್ಮ ನೆಚ್ಚಿನ ಸ್ಪರ್ಧಿ ಗರ್ಭಿಣಿಯಲ್ಲ, ಆಕೆಯನ್ನು ಮತ್ತೊಂದಷ್ಟು ದಿನ ಬಿಗ್ ಮನೆಯಲ್ಲಿ ನೋಡಬಹುದು ಎಂದು ಖುಷಿಯಾಗಿದ್ದಾರೆ. ಕೆಲವರು ಇದೆಲ್ಲವು ಪ್ರಚಾರದ ಗಿಮಿಕ್ ಎನ್ನುತ್ತಿದ್ದೂ ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಶೋ ಭಾರಿ ಕುತೂಹಲವನ್ನು ಮೂಡಿಸಿದ್ದು ಮಿಸ್ ಮಾಡದೇ ಪ್ರೇಕ್ಷಕರು ಶೋವನ್ನು ವೀಕ್ಷಿಸುತ್ತಿದ್ದಾರೆ.

Leave a Reply

Your email address will not be published. Required fields are marked *