ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಆ-ತ್ಮಹತ್ಯೆಗೆ ಪ್ರಯತ್ನಿಸಿದ್ದು ನಿಜಾನಾ, ವೈದ್ಯರು ಬಿಚ್ಚಿಟ್ಟ ಸತ್ಯವೇನು ಗೊತ್ತಾ?

ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ (Bigg Boss Kannada Sisan 10) ಯಶಸ್ವಿಯಾಗಿ ನಡೆಯುತ್ತಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ವಿನ್ನರ್ ಪಟ್ಟ ಯಾರು ಅಲಂಕಾರಿಸುತ್ತಾರೆ ಎನ್ನುವ ಕುತೂಹಲವಿರುವಾಗಲೇ ಇದೀಗ ಬಿಗ್ ಬಾಸ್ ಮನೆಯಿಂದ ಬೇರೊಂದು ಸುದ್ದಿಯು ಕೇಳಿ ಬಂದಿದೆ. ಅದುವೇ ಸ್ಪರ್ಧಿ ಡ್ರೋನ್ ಪ್ರತಾಪ್‌(Drone Prathap) ಆ-ತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಯೊಂದು ಹರಿದಾದುತ್ತಿದ್ದಂತೆ ಕೊನೆಗೂ ಈ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ತೀರಾ ಒಂಟಿಯಾಗಿಯೇ ಇರುತ್ತಿದ್ದ ಡ್ರೋನ್ ಪ್ರತಾಪ್ ಅವರು ಇತ್ತೀಚೆಗಷ್ಟೇ ಸಂಗೀತಾ (Sangeetha) ರವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ತೀರಾ ಮೌನವಾಗಿದ್ದ ಡ್ರೋನ್ ಪ್ರತಾಪ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಹೀಗಾಗಿ ಮಧ್ಯರಾತ್ರಿ 1.30 ರ ವೇಳೆಗೆ ಕುಂಬಳಗೋಡು ಠಾಣಾ ವ್ಯಾಪ್ತಿಯ ರಾಮೋಹಳ್ಳಿಯಲ್ಲಿರುವ ಸಂಜೀವಿನಿ ಆಸ್ಪತ್ರೆ (Sanjeevini Hospital) ಗೆ ದಾಖಲು ಮಾಡಿ ICU ಟ್ರೀಟ್‌ಮೆಂಟ್‌ ಕೊಡಲಾಗಿದೆ.ಆದರೆ ಸೋಶಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಅವರು ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದಂತೆ ಪೊಲೀಸರು ಕೂಡ ಆಸ್ಪತ್ರೆಗೆ ಬಂದು ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇನ್ನೊಂದೆಡೆ ಡ್ರೋನ್ ಪ್ರತಾಪ್ ಅವರು ಆ-ತ್ಮಹತ್ಯೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಈ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಡ್ರೋನ್ ಪ್ರತಾಪ್‌ ಆರೋಗ್ಯದ ಕುರಿತು ಮಾತನಾಡಿರುವ ವೈದ್ಯರು, “ನಮ್ಮ ಆಸ್ಪತ್ರೆಗೆ ಪ್ರತಾಪ್ ಅಡ್ಮಿಟ್ ಆಗಿದ್ರು, ಅವರು 3ನೇ ತಾರೀಖು ಲೂಸ್ ಮೋಶನ್ ವಾಮಿಟಿಂಗ್ ನಿಂದಾಗಿ ದಾಖಲಾಗಿದ್ದರು.

ಇಂದು 1 ಘಂಟೆಗೆ ಡಿಸ್ಚಾರ್ಜ ಆಗಿದಾರೆ. ಫುಡ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಪ್ರತಾಪ್ ಆಗ್ಲಿ ಬಿಗ್ ಬಾಸ್ ಆಗ್ಲಿ ವಿಟಮಿನ್ ಟ್ಯಾಬಲೇಟ್ ತಗೊಂಡಿರೋ ಬಗ್ಗೆ ಮಾಹಿತಿ ನೀಡಿಲ್ಲ. ಊಟ ಮಾಡದೇ ಇರೋದು ಇದಕ್ಕೆ ಕಾರಣ ಆಗಿರುತ್ತೆ” ಎಂದು ಹೇಳುವ ಮೂಲಕ ಎಲ್ಲಾ ಗಾಳಿ ಸುದ್ದಿಗೂ ತೆರೆ ಎಳೆದಿದ್ದಾರೆ.

Leave a Reply

Your email address will not be published. Required fields are marked *