ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರ ದುಬಾರಿ ಮನೆ ಹೇಗಿದೆ ಗೊತ್ತಾ? ನೋಡಿದ್ರೆ ಬಾಯಿ ಮೇಲೆ ಕೈ ಇಡುವುದು ಪಕ್ಕಾ!!

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಬಿಗ್ ಬಾಸ್ ಶೋಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರಂಭವಾಗಿರುವ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Sisan 10) ಮುಕ್ತಾಯ ಹಂತಕ್ಕೆ ಬಂದು ತಲುಪಿದೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ಸ್ಪರ್ಧೆಯು ಏರ್ಪಟ್ಟಿದ್ದು, ಸದ್ಯಕ್ಕೆ ಆಟವು ಜೋರಾಗಿದೆ.

ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ವರ್ತೂರು ಸಂತೋಷ್ (Varthuru Santhosh) ಕೂಡ ಒಬ್ಬರು. ಹಳ್ಳಿಕಾರ್ ಎಂದೇ ಖ್ಯಾತಿ ಗಳಿಸಿರುವ ವರ್ತೂರ್ ಸಂತೋಷ್ ಅವರು ಒಬ್ಬ ರೈತ. ಆದರೆ ಟೊಮ್ಯಾಟೋ ಬೆಳೆದು ಅವರು ಸಾಕಷ್ಟು ಲಾಭ (Profit) ಗಳಿಸಿದ್ದಾರೆ. ಅಷ್ಟೇ ಅಲ್ಲದೇ, ಕೋಟಿಗಟ್ಟಲೇ ಆಸ್ತಿಯನ್ನು ಹೊಂದಿದ್ದು, ದುಬಾರಿ ಬೆಲೆಯ ಮನೆಯಲ್ಲಿ ವಾಸವಾಗಿದ್ದಾರೆ.

ಸಹಜವಾಗಿಯೇ ಇವರ ಮನೆ ಹೇಗಿದೆ ಎನ್ನುವ ಕುತೂಹಲವಿರುತ್ತದೆ. ಹಾಗಾದ್ರೆ ಆ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಕಂಡುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ಹಿಂದೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್ (Varthur Santosh) ಅವರನ್ನು ಅರಣ್ಯಾಧಿಕಾರಿಗಳು ಉಗುರು ಹೊಂದಿರುವ ಆರೋಪ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಹೊರ ಬಂದು ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದು, ಇದೀಗ ಚೆನ್ನಾಗಿಯೇ ಆಟ ಆಡುತ್ತಿದ್ದಾರೆ.

ಅದಲ್ಲದೆ, ಈ ಹಿಂದೆ ಯೂಟ್ಯೂಬ್’ ಚಾನೆಲ್ (Youtube Chanel) ವೊಂದರ ಸಂದರ್ಶನದಲ್ಲಿ ತಮ್ಮ ಮನೆಯನ್ನು ತೋರಿಸಿದ್ದರು. ಈ ವೇಳೆಯಲ್ಲಿ ಮನೆ ಹಾಗೂ ಮನೆ ಕಟ್ಟಿಸಿದ ಶಿಲ್ಪಿಯ ಬಗ್ಗೆ ಮಾತನಾಡಿದ್ದು, “ಈ ಮನೆಯ ಪ್ರಮುಖ ಆಕರ್ಷಣೆ ದೇವರ ಕೋಣೆ ಇದನ್ನು ಸಂಪೂರ್ಣವಾಗಿ ಡಿಸೈನ್ ಮಾಡಿಸಿರೋದು ಕೇರಳ ಮೂಲದ ವ್ಯಕ್ತಿ.

ಆದರೆ ದುರಾದೃಷ್ಟ ಎಂಬಂತೆ, ಆ ವ್ಯಕ್ತಿ ಕೊರೊನಾ ಸಂದರ್ಭದಲ್ಲಿ ನಿಧನರಾದರು. ಈ ದೇವರ ಕೋಣೆ ನಿರ್ಮಾಣಕ್ಕೆ ಬಳಸಿರೋದು ಕೇವಲ ಮರ ಮಾತ್ರ. ಗಮ್ ಆಗಲಿ, ಮೊಳೆ ಆಗಲಿ ಇದಕ್ಕೆ ಬಳಸಿಲ್ಲ. ಆದರೂ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಇದು ಕೇರಳ ಶೈಲಿಯಲ್ಲಿದೆ” ಎಂದು ವರ್ತೂರ್ ಸಂತೋಷ್ ಹೇಳಿದ್ದರು.

Leave a Reply

Your email address will not be published. Required fields are marked *