ಬಿಗ್ ಬಾಸ್ ಸ್ಪರ್ಧಿ ಪವಿ ಪೂವಪ್ಪರವರು ಯಾರು? ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ಇವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಬೆರಗಾಗ್ತೀರಾ?!!

ಬಿಗ್ ಬಾಸ್ ಮನೆಯ (Bigg Boss Kannada 10) ಲ್ಲಿ ಆಟವು ಭರ್ಜರಿಯಾಗಿ ನಡೆಯುತ್ತಲೇ ಇದೆ. ಒಬ್ಬೊರೊಬ್ಬರಾಗಿ ಮನೆಯಿಂದ ಔಟ್ ಆಗುತ್ತಿದ್ದು ಬಿಗ್ ಬಾಸ್ ಸೀಸನ್ 10 ವಿನ್ನರ್ ಯಾರಾಗಬಹುದು ಎನ್ನುವ ಕುತೂಹಲ ಪ್ರೇಕ್ಷಕ ವರ್ಗಕ್ಕೆ ಇದೆ. ಇನ್ನು ಬಿಗ್ ಬಾಸ್ ಶೋ 50 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟಿದ್ದರು.

ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟ ಮೊದಲನೆಯವರು ಪ್ರೊಫೇಷನಲ್ ಮಾಡಲ್ ಪವಿ ಪೂವಪ್ಪ (Pavi Poovappa)ಅವರು. ಎರಡನೇ ಎಂಟ್ರಿಯೇ ನಟ, ಮಾಡಲ್ ಹಾಗೂ ಕ್ರಿಕೆಟರ್ ಆಸ್ತಿಕ್ ಅವಿನಾಶ್ ಶೆಟ್ಟಿ (Avinash Shetty). ಮೊದಲನೇಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಮಾಡೆಲ್ ಪವಿ ಪೂವಪ್ಪ ಅವರ ಹಿನ್ನೆಲೆಯೇನು ಎನ್ನುವ ಕುತೂಹಲವು ಸಹಜವಾಗಿ ಎಲ್ಲರಿಗೂ ಇದೆ.

ಕೊಡಗಿನವರಾದ ಪವಿ ಪೂವಪ್ಪ ಅವರು ಮಾಡೆಲ್ (Model) ಆಗಿ ಗುರುತಿಸಿಕೊಂಡಿದ್ದಾರೆ. ಉನ್ನತ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿರುವ ಇವರು ಅವರು ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ “ಸೊಪ್ಪನ ಸುಂದರಿ” (Soppana Sundari) ಯ ಸ್ಪರ್ಧಿಯಾಗಿ ಭಾಗವಹಿಸಿದ್ದರು.ಇವರ ನಿಜವಾದ ಹೆಸರು ಪವಿತ್ರ ಪೂವಪ್ಪ (Pavitra Poovappa). ಈ ಪವಿ ಪೂವಪ್ಪ ಅವರು ಬಿಕಾಂ ಪದವಿಯನ್ನು ಓದಿದ್ದಾರೆ.

2013ರಿಂದ ಫ್ರೊಫೆಶನಲ್ ರನ್‌ವೇ ಮಾಡೆಲ್ ಆಗಿ ವೃತ್ತಿ ಆಯ್ಕೆ ಮಾಡಿಕೊಂಡಿದ್ದು, ಪವಿ ಪೂವಪ್ಪ ಅವರು ಮಿಸ್ ಅವೇಸಮ್ ಬೆಂಗಳೂರು 2016 ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿ ಹೊರಹೊಮ್ಮಿದ್ದರು.ನೋಡುವುಕ್ಕೆ ಸ್ಟೈಲಿಶ್ ಆಗಿರುವ ಪವಿ ಪೂವಪ್ಪರವರು ಈಗಾಗಲೇ ಎಂಗೇಜ್ ಆಗಿದ್ದಾರೆ. ಇವರ ಮನಸ್ಸು ಕದ್ದ ಹುಡುಗನ ಹೆಸರು ಡಿಜೆ ಮ್ಯಾಡಿ (DJ Myadi). ಕಳೆದ ಮೂರು ವರ್ಷಗಳಿಂದ ಇವರಿಬ್ಬರೂ ರಿಲೇಷನ್ಶಿಪ್ ನಲ್ಲಿದ್ದಾರೆ ಎನ್ನಲಾಗಿದೆ.

ನೋಡೋಕೆ ಸ್ಟೈಲಿಶ್ ಆಗಿರುವ ಇವರು ಆಗಾಗಿ ತುಂಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿರುತ್ತಾರೆ. ಆಗಾಗ ಸೋಶಿಯಲ್ ಮೀಡಿಯಾ (Social Media)ದಲ್ಲಿ ಇವರ ಬೋ-ಲ್ಡ್ ಫೋಟೋಗಳು ವೈರಲ್ ಆಗುತ್ತಿರುತ್ತವೆ.ಹಾ-ಟ್ ಫೋಟೋಗಳಿಂದಲೇ ಮಿಲಿಯನ್‌ಗಟ್ಟಲೆ ಫ್ಯಾನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಇವರ ಇನ್ಸ್ಟಾಗ್ರಾಮ್ ಖಾತೆ (Instagram Account) ಯ ಫಾಲ್ಲೋರ್ಸ್ ಸಂಖ್ಯೆಯೂ 1 ಲಕ್ಷಕ್ಕೂ ಹೆಚ್ಚಿದೆ. ಕಳೆದ ಒಂದೆರಡು ವಾರದ ಹಿಂದೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಪವಿ ಪೂವಪ್ಪ ಮುಂಬರುವ ದಿನಗಳಲ್ಲಿ ಚೆನ್ನಾಗಿ ಟ್ರೋಫಿ ಗೆಲ್ಲುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *