ಬಿಗ್‌ಬಾಸ್ ಸೀಸನ್ 10 ಸ್ಪರ್ಧಿ ನೀತು ವನಜಾಕ್ಷಿಯವರು ಬಾಲ್ಯದಲ್ಲಿ ಹೇಗಿದ್ದರು ಗೊತ್ತಾ? ನಂತರ ಆಗಿದ್ದೇನು.. ಫೋಟೋ ವೈರಲ್!!!

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ಸೀಸನ್- 10 (Bigg Boss Sisan 10) ಶೋ ಆರಂಭವಾಗಿ ಒಂದು ವಾರ ಕಳೆದಿದ್ದು ಇದೀಗ ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಈ ಬಾರಿ 17 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದರು.

ಆದರೆ ಮೊದಲ ವಾರವೇ ಈ ಬಾರಿ ಬಿಗ್ ಬಾಸ್ ಮನೆಯ ಹಿರಿಯ ಸ್ಪರ್ಧಿ ಸ್ನೇಕ್ ಶ್ಯಾಮ್ (Snake Shyam)ಅವರು ಎಲಿಮಿನೆಟ್ ಆಗಿ ಹೊರ ಹೋಗಿದ್ದಾರೆ. ಎರಡನೇ ವಾರಕ್ಕೆ ಬಿಗ್ ಮನೆಯು ರಣರಂಗವಾಗಿದೆ. ಈಗಾಗಲೇ ಸ್ಪರ್ಧಿಗಳ ನಡುವೆ ಗಲಾಟೆ, ಕಿತ್ತಾಟ, ಸ್ನೇಹ, ಟಾಸ್ಕ್ ಎಲ್ಲವೂ ಶುರುವಾಗಿದ್ದು, ಟಾಸ್ಕ್ ನಲ್ಲಿ ಪೈಪೋಟಿ ಜೊತೆಗೆ ಪರ್ಸನಲ್ ಆಗಿ ಅ-ಟ್ಯಾಕ್ ಮಾಡುತ್ತಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಸ್ಪರ್ಧಿಗಳಲ್ಲಿ ನೀತು ವನಜಾಕ್ಷಿ (Neethu Vanajakshi) ಕೂಡ ಒಬ್ಬರು. ಹುಟ್ಟುವಾಗ ಹುಡುಗನಂತೆ ಇದ್ದ ಈ ನೀತು ವನಜಾಕ್ಷಿಯವರು ಬೆಳೆಯುತ್ತ ಹೋದಂತೆ ಹೆಣ್ಣಾಗಿ ಬದಲಾಗಿದ್ದು, ಇದೀಗ ಸಮಾಜದಲ್ಲಿ ಹೆಣ್ಣಿನಂತೆ ಬದುಕುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ನೀತು ವನಜಾಕ್ಷಿ ತೃತೀಯ ಲಿಂಗಿಯಾಗಿದ್ದು ತನ್ನ ಆಟ ಹಾಗೂ ನಡೆನುಡಿಯ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಆದರೆ ಇದೀಗ ನೀತು ವನಜಾಕ್ಷಿಯವರು ಗಂಡಾಗಿದ್ದ ವೇಳೆಯಲ್ಲಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕುಟುಂಬದವರು ನೀತು ವನಜಾಕ್ಷಿಯವರ ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದರೆ ಇದು ನೀತು ವನಜಾಕ್ಷಿಯವರ ಎನ್ನುವ ಅ-ನುಮಾನವು ಬರುತ್ತದೆ.

ನೀತು ವನಜಾಕ್ಷಿಯವರ ಈ ಫೋಟೋ ವೈರಲ್ (Photo Viral) ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ನೀತು ಅವರ ಮೂಲ ಹೆಸರು ಮಂಜುನಾಥ್ (Manjunath) . ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಈ ಮಂಜುನಾಥ್ ಅವರು ಇದೀಗ ನೀತು ವನಜಾಕ್ಷಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ.

7ನೇ ತರಗತಿಯಲ್ಲಿರುವಾಗ ನೀತು ಅವರಿಗೆ ತನ್ನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಅರಿವಿಗೆ ಬಂದಿತ್ತು. ಈ ವಿಚಾರವು ತಾಯಿಗೂ ತಿಳಿಯುತ್ತಿದ್ದಂತೆ ಮಗನನ್ನು ಮಗಳಾಗಿ ಸ್ವೀಕರಿಸಿದರು. ತಾಯಿಯ ಬೆಂಬಲವು ಇಂದು ನೀತು ವನಜಾಕ್ಷಿಯವರು ಸ್ವಂತ ಉದ್ಯಮವನ್ನು ಶುರು ಮಾಡಲು ಕಾರಣವಾಗಿದೆ.

ಹೌದು, ತಮ್ಮದೇ ಟ್ಯಾಟೂ ಸ್ಟುಡಿಯೋ (Tatto Studio) ಹೊಂದಿರುವ ನೀತು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ನೀತು ವನಜಾಕ್ಷಿಯವರ ಬದುಕನ್ನು ಈ ಬಿಗ್ ಬಾಸ್ ಜರ್ನಿ ಬದಲಾಯಿಸುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *