ನನ್ನನ್ನು ಮದುವೆ ಆಗಿ ಅಂತ ಹಠ ಮಾಡುತ್ತೀನಿ ಆಗ ಏನು ಮಾಡುತ್ತಿರಾ ಎಂದು ಕೇಳಿದ ನಮ್ರತಾ ಕಕ್ಕಾಬಿಕ್ಕಿಯಾದ ಕಾರ್ತಿಕ್ ಹೇಳಿದ್ದೇನು? ಇಲ್ಲಿದೆ ನೋಡಿ!

ಬಿಗ್ ಬಾಸ್ ಸೀಸನ್ 10 (Bigg Boss Sisan 10) ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು ಇನ್ನು ಕೆಲವು ದಿನಗಳಿದ್ದು ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲವು ಸಹಜವಾಗಿ ಅಭಿಮಾನಿಗಳಿಗಿದೆ. ಬಿಗ್ ಬಾಸ್ ಮುಗಿಯುತ್ತ ಬರುತ್ತಿದ್ದಂತೆ ಮನೆ ಮಂದಿಯೆಲ್ಲಾ ಆಟದ ಕಡೆಗೆ ಗಮನ ನೀಡುತ್ತಿದ್ದು ಸದ್ಯಕ್ಕೆ ಎಲ್ಲಾ ಸ್ಪರ್ಧಿಗಳ ನಡುವೆ ಟಫ್ ಕಾಂಪಿಟೇಷನ್ ಏರ್ಪಟ್ಟಿದೆ.

ಮನೆಯವರಿಂದ ದೂರ ಇದ್ದು, ಡಲ್ ಆಗಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಗೆ ಮನೆ ಮಂದಿಗೆ ಎಂಟ್ರಿ ಕೊಟ್ಟು ಪ್ರೀತಿಯ ಮಾತುಗಳು ಕೈ ತುತ್ತು ನೀಡಿದ್ದಾರೆ. ಹೀಗೆ ಮನೆಯವರು ಬಂದು ಹೋದ ಖುಷಿಯಲ್ಲಿಯೇ ಬಿಗ್ ಬಾಸ್ ಮನೆಯ ಮಂದಿಯಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ (Karthik) ಅವರು ನಮ್ರತಾ (Namratha) ಜೊತೆಗೆ ಸ್ವಲ್ಪ ಫ್ರೆಂಡ್ಲಿಯಾಗಿಯೇ ಇದ್ದಾರೆ.

ಪ್ರಾರಂಭದಲ್ಲಿ ಕಾರ್ತಿಕ್ ಅವರು ನಮ್ರತಾರವರ ಜೊತೆಗೆ ತುಂಬಾ ಕ್ಲೋಸ್ ಆಗಿ ಮೂವ್ ಮಾಡಲು ಪ್ರಯತ್ನ ಮಾಡಿದ್ದರು. ಆದರೆ ಆ ವೇಳೆಗೆ ನಮ್ರತಾ ಹಾಗೂ ಸ್ನೇಹಿತ್ ತುಂಬಾನೇ ಕ್ಲೋಸ್ ಆಗಿದ್ದರು..ಆದರೆ ಕಳೆದ ಕೆಲ ವಾರಗಳ ಹಿಂದೆ ಸ್ನೇಹಿತ್ ಗೌಡ (Snehith Gowda) ರವರು ಔಟ್ ಆಗಿ ಮನೆಗೆ ಹೋದ ಬಳಿಕ ನಮ್ರತಾ ಹಾಗೂ ಕಾರ್ತಿಕ್ ಅವರು ಕ್ಲೋಸ್ ಆಗುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಔಟ್ ಆಗಿ ಮನೆಗೆ ಹೋದ ಬಳಿಕ ನಮ್ರತಾ ಹಾಗೂ ಕಾರ್ತಿಕ್ ಅವರು ಕ್ಲೋಸ್ ಆಗುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನಮ್ರತಾ ಜೊತೆ ಡೇಟ್​ಗೆ ಹೋಗಬೇಕು ಎಂಬುದು ಕಾರ್ತಿಕ್ ಎನ್ನುವ ಕನಸನ್ನು ಹೊಂದಿದ್ದು, ಈ ಬಗ್ಗೆ ಚರ್ಚೆಯಾಗುತ್ತಲೇ ಇದೆ.ಕಾರ್ತಿಕ್ ಗೌಡರವರು ತಮ್ಮ ತಾಯಿ ಮನೆಗೆ ಬಂದಾಗ ‘ನಾನು ನಮ್ರತಾ ಜೊತೆ ಡೇಟ್​ಗೆ ಹೋಗಲೇ’ ಎಂದು ಕೇಳಿದ್ದರು. ಅದಕ್ಕೆ ಕಾರ್ತಿಕ್ ತಾಯಿಯವರು ನಗುತ್ತಲೇ ಉತ್ತರಿಸಿದ್ದರು.

ಆದರೆ ಇದೀಗ ಈಗ ಕಾರ್ತಿಕ್ ಹಾಗೂ ನಮ್ರತಾ ಅವರ ಮಾತುಕಥೆಯು ಪ್ರೇಕ್ಷಕರ ಮನಸ್ಸನ್ನು ಗೆದ್ದುಕೊಂಡಿದೆ. ಕಾರ್ತಿಕ್ ಅವರು ಅಡುಗೆ ಮನೆಗೆ ಹೊರಟಿದ್ದು, ಈ ವೇಳೆ ಕಾರ್ತಿಕ್​ ಅವರನ್ನು ನಮ್ರತಾ ಕರೆದು, ‘ಐದು ನಿಮಿಷ ಇಲ್ಲಿ ಬನ್ನಿ. ಕುಳಿತು ನನ್ನನ್ನು ನೋಡಿ’ ಎಂದಿದ್ದಾರೆ. ಕಾರ್ತಿಕ್ ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡು, ನಮ್ರತಾ ಇದ್ದಲ್ಲಿ ಹೋಗಿ ಕುಳಿತಿದ್ದಾರೆ. ‘ನಾನು ಜೋಕ್ ಮಾಡಿದ್ದು. ನೀವು ಗಂಭೀರವಾಗಿ ಸ್ವೀಕರಿಸಿದ್ರಲ್ಲ’ ಎಂದಿದ್ದಾರೆ ನಮ್ರತಾ ಗೌಡ.

ಹೌದು, ‘ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದೂ ಅದೇ. ಸುಮ್ನೆ ಹೋಗ್ತಾ ಇದ್ದವನ್ನ ಕರೆದ್ರೆ ಏನು ಮಾಡೋದು’ ಎಂದು ಕಾರ್ತಿಕ್ ಹೇಳಿದ್ದು, ’15 ದಿನದಲ್ಲಿ ಲವ್ ಆಗಿ, ಕಾರ್ತಿಕ್​ನೇ ಬೇಕು ಅಂತ ಅತ್ತು ಕರೆದರೆ ಏನು ಮಾಡ್ತೀರಿ? ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. ನಮ್ರತಾ ಗೌಡರವರ ಮಾತಿಗೆ ಏನು ಉತ್ತರಿಸಬೇಕೆಂದು ಗೊತ್ತಾಗದೇ ಸೈಲೆಂಟ್ ಆಗಿದ್ದಾರೆ.

Leave a Reply

Your email address will not be published. Required fields are marked *