ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಎಷ್ಟು ಓದಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ! ನಿಜಕ್ಕೂ ಬೆರಗಾಗ್ತೀರಾ!!

ಬಿಗ್ ಬಾಸ್ ಸೀಸನ್ 10 (Big Boss Sisan 10) ಆರಂಭವಾಗಿ ಕೆಲವು ವಾರಗಳಾಗಿವೆ. ಇತ್ತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿಯು ಜೋರಾಗಿಯೇ ಇದೆ. ಹೌದು, ಮನೆಯಲ್ಲಿ ಸ್ಥಾನ ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಪೈಪೋಟಿ ನಡೆಸುತ್ತಿದ್ದು ಪ್ರೇಕ್ಷಕರಂತೂ ಈ ಕಾದಾಟವನ್ನು ಮಿಸ್ ಮಾಡದೇ ನೋಡುತ್ತಿದ್ದಾರೆ. ಇನ್ನೊಂದೆಡೆ ವಿನಯ್ ಗೌಡ (Vinay Gowda) ರವರ ವರ್ತನೆಯು ಅ-ತೀರೇಕಕ್ಕೆ ತಿರುಗಿದ್ದು, ವೀಕ್ಷಕರಿಗೆ ಅವರ ನಡವಳಿಕೆಯು ಇಷ್ಟವಾಗುತ್ತಿಲ್ಲ.

ಆರಂಭದಲ್ಲಿ ಟಾರ್ಗೆಟ್ ಆಗಿದ್ದ ಡ್ರೋನ್ ಪ್ರತಾಪ್ (Drone Prathap) ಅವರು ಇದೀಗ ಉಳಿದ ಸ್ಪರ್ಧಿಗಳು ಬಾಯಿಗೆ ಬೆರಳು ಇಡುವಂತೆ ಆಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಅವರು ಮುಗ್ಧತೆ ಹಾಗೂ ಸ್ಮಾರ್ಟ್ ನೆಸ್ (Inocence and Smart ness) ನಿಂದಲೇ ಆಟ ಆಡುತ್ತಿದ್ದು, ಟ್ರೋಲಿಗರ ಕೈಗೆ ಆಹಾರವಾಗಿದ್ದ ಈ ಡ್ರೋನ್ ಅವರ ಎಜುಕೇಶನ್ ಬಗ್ಗೆ ಎಲ್ಲರಿಗೂ ಕೂಡ ಕುತೂಹಲವಿರುವುದು ಸಹಜ. ಆ ಕುರಿತಾದ ಕಂಪ್ಲೀಟ್ ಮಾಹಿತಿ ಯನ್ನು ಈ ಲೇಖನದಲ್ಲಿ ನೋಡಬಹುದು.

ಟ್ರೋಲ್ (Troll) ಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಅವರು ಎಲ್ಲರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಹೌದು, ಬಿಗ್ ಬಾಸ್ (Bigg Boss) ಶೋನಲ್ಲಿ ಡ್ರೋನ್ ಪ್ರತಾಪ್ ಅವರು ಆರಂಭದಲ್ಲಿ ಡಲ್ ಆಗಿದ್ದರು. ಮನೆಯ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಕೂಡ ಮಾಡಿದ್ದರು. ಇದರಿಂದಾಗಿ ಡ್ರೋನ್ ಪ್ರತಾಪ್ ಅವರು ಬಹಳ ನೊಂದುಕೊಂಡಿದ್ದರು. ಹೀಗಾಗಿ ಬಾತ್ ರೂಮ್ ನಲ್ಲಿ ಗಳಗಳನೆ ಅತ್ತಿದ್ದರು ಕೂಡ.

ತದನಂತರದಲ್ಲಿ ಕಿಚ್ಚ ಸುದೀಪ್​ (Kiccha Sudeep) ಅವರ ಧೈರ್ಯ ತುಂಬಿದ್ದು, ಡಲ್ ಇದ್ದ ಪ್ರತಾಪ್ ಅವರು ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಬಿಟ್ಟಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಟ್ರೋಲಿಗರ ಕೈಗೆ ಸಿಕ್ಕಿದ್ದ ಈ ಡ್ರೋನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಇವರು ಎಂಟ್ರಿ ಕೊಟ್ಟ ನಂತರದಲ್ಲಿ ಟ್ರೋಲಿಗರಿಗೂ ಇವರ ನಿಜವಾದ ಮುಖದ ಪರಿಚಯವಾಗಿದೆ. ಹೀಗಾಗಿ ಟ್ರೋಲಿ ಗರು ಕೂಡ ಡ್ರೋನ್ ಪ್ರತಾಪ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ.

ಇನ್ನು ಈ ಡ್ರೋನ್ ಪ್ರತಾಪ್ ಅವರದ್ದು ರೈತಾಪಿ ಕುಟುಂಬ. ಭೂಮಿ ತಾಯಿಯನ್ನು ದೇವರೆಂದು ಕಾಣುವ ಕುಟುಂಬದಲ್ಲಿ ಹುಟ್ಟಿದ ಡ್ರೋನ್ ಪ್ರತಾಪ್’ಗೆ ತಾಂತ್ರಿಕ ಜ್ಞಾನವನ್ನು ಹೊಂದಿದ್ದು, ಏನಾದರೂ ಸಾಧಿಸಬೇಕು ಎಂದು ಛಲವಿದೆ. ಸದ್ಯಕ್ಕೆ ಸ್ಟಾರ್ಟಪ್ ಕಂಪನಿ (Start Up Company) ಪ್ರಾರಂಭಿಸಿರುವ ಪ್ರತಾಪ್ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್’ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರು.

ತದನಂತರದಲ್ಲಿ JSS ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿ (JSS College of Arts, Science and Commerce College) ನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಎನ್ನುವುದು ರಿವೀಲ್ ಆಗಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ತನ್ನ ಸ್ಮಾರ್ಟ್ ನೆಸ್ ನಿಂದಲೇ ಆಟ ಆಡುತ್ತಿರುವ ಡ್ರೋನ್ ಪ್ರತಾಪ್ ಅವರು ಗೆದ್ದು ಬರಲಿ ಎನ್ನುವ ಆಶಯ ಅವರ ಅಭಿಮಾನಿಗಳದ್ದು.

Leave a Reply

Your email address will not be published. Required fields are marked *