ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೂಟ್ಯೂಬ್ ಮೂಲಕ ಇಂದು ಅದೆಷ್ಟೋ ಜನರು ತಮ್ಮೊಳಗಿರುವಂತಹ ಕಲೆಯ ಅನಾವರಣಗೊಳಿಸುತ್ತಾ ಸ್ಟಾರ್ ಸೆಲೆಬ್ರಿಟಿ(celerity) ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. 15 ಸೆಕೆಂಡ್ಗಳಿರುವ ರೀಲ್ಸ್ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಾ ತಮ್ಮ ಡ್ಯಾನ್ಸ್ ಲಿಪ್ಸಿಂಗ್ ಹಾಗೂ ಹಾಡುಗಾರಿಕೆಯ ಕಲೆಯನ್ನು ಜನರ ಮುಂದೆ ತೆರೆದಿಡುತ್ತಾರೆ.
ಹೀಗೆ ವಿಡಿಯೋ ಏನಾದರೂ ಚೆನ್ನಾಗಿ ಮೂಡಿ ಬಂದಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ಬಹುದೊಡ್ಡ ಮಟ್ಟದ ಪ್ರತಿಕ್ರಿಗೆ ದೊರಕುತ್ತದೆ. ಹೀಗೆ ಬಳಕುವ ಮೈಮಾಟದಿಂದಲೇ ಬೆಟ್ಟ ಗುಡ್ಡಗಳಂತಹ ಪ್ರದೇಶದಲ್ಲಿ ಸೀರೆಯುಟ್ಟು ಕನ್ನಡದ ಹಳೆ ಹಾಡುಗಳು ಸೊಂಟಬಳಕಿಸುತ್ತಾ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಜೊತೆಗೆ ಮಿಲಿಯನ್ಗೂ ಹೆಚ್ಚಿನ ಫಾಲೋವರ್ಸ್ಗಳನ್ನು ಪಡೆದು ಇಂದು ಸೋಶಿಯಲ್ ಮೀಡಿಯಾದ ಸ್ಟಾರ್ ಆಗಿರುವಂತಹ ಭೂಮಿಕ ಬಸವರಾಜ್ (Bhoomika Basavaraj) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ?
ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಇವರ ಅದ್ಭುತ ಡಾನ್ಸ್ ವಿಡಿಯೋಗಳು ಟ್ರೆಂಡಿಂಗ್ನಲ್ಲಿ ಬರುತ್ತಿರುತ್ತವೆ. ಮೂಲತಃ ಚಿಕ್ಕಮಗಳೂರಿನ(chikkamangaluru) ಬೆಡಗಿಯಾದ ಭೂಮಿಕಾ ಬಸವರಾಜ್ ತಮ್ಮ ಪ್ರತಿ ಚಲನವಲನಗಳ ಕುರಿತಾದ ಅಪ್ಡೇಟ್ಸ್ಗಳನ್ನು ಅಭಿಮಾನಿಗಳಿಗೆ ನೀಡುತ್ತಾ, ದಿನದಲ್ಲಿ ಒಂದೆರಡು ಹೊಸ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರನ್ನು ರಂಜಿಸುತ್ತಲೇ ಇರುತ್ತಾರೆ.
ಕಳೆದ ಕೆಲವು ದಿನಗಳ ಹಿಂದೆ ಇಂಟರ್ನ್ಯಾಷನಲ್ ಯೋಗ(International Yoga day) ದಿನವಾಗಿದ್ದು, ಅದರ ಅಂಗವಾಗಿ ಭೂಮಿಕಾ ಗುಲಾಬಿ ಬಣ್ಣದ ಟಾಪ್ ಹಾಗೂ ಪ್ಯಾಂಟ್ ಧರಿಸಿ ಚಿಕ್ಕಮಗಳೂರಿನ ಬಂಡೆಯೊಂದರ ಮೇಲೆ ಯೋಗ ಮ್ಯಾಟ್ ಹಾಕಿ ಅದ್ಭುತವಾಗಿ ಯೋಗವನ್ನು ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು ಭೂಮಿಕಾ ಬಸವರಾಜ್ (Bhoomika Basavaraj) ಫಿಟ್ನೆಸ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.