ಫ್ಯಾಮಿಲಿಯ ಮದುವೆ ಸಮಾರಂಭದಲ್ಲಿ ಸ್ನೇಹಿತೆಯ ಜೋತೆ ಕುಣಿದು ಕುಪ್ಪಳಿಸಿ ಆನಂದಿಸಿದ ಕಿನ್ನರಿ ಧಾರಾವಾಹಿ ಖ್ಯಾತಿಯ ಭೂಮಿ ಶೆಟ್ಟಿ!! ಇಲ್ಲಿದೆ ನೋಡಿ ಭೂಮಿ ಸಂಭ್ರಮದ ಕ್ಷಣ!!

ಕನ್ನಡ ಕಿರುತೆರೆ ಹಾಗೂ ಕನ್ನಡ ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಸಕ್ರಿಯರಾಗುವ ಮೂಲಕ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬಣ್ಣ ಬಣ್ಣದ ಕನಸು ಹೊತ್ತು ಸಿನಿ ಲೋಕಕ್ಕೆ ಬಂದವರ ಕನಸುಗಳೆಲ್ಲವೂ ನನಸು ಆಗದು. ಇಲ್ಲಿ ಅದೃಷ್ಟದ ಜೊತೆಗೆ ಅವಕಾಶವು ಈ ಲೋಕದಲ್ಲಿಯೂ ಸೋಲು ಗೆಲುವು ಎರಡು ಇದೆ.

ಸಿನಿಮಾಗಳು ಗೆದ್ದರೆ ಪ್ರೇಕ್ಷಕರು ಗುರುತು ಹಿಡಿಯುತ್ತಾರೆ. ಸೋತರೆ, ಯಾರು ಕೂಡ ಸನಿಹ ಬರುವುದಿಲ್ಲ. ಆದರೆ ಕೆಲವು ನಟಿಯರು ಬಣ್ಣದ ಲೋಕದಲ್ಲಿ ಸಕ್ರಿಯರಾಗುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈ ವಿಚಾರದಲ್ಲಿ ಕಿನ್ನರಿ ಧಾರಾವಾಹಿ ಖ್ಯಾತಿಯ ಭೂಮಿ ಶೆಟ್ಟಿ (Bhoomi Shetty) ಕೂಡ ಒಬ್ಬರು.

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​​​ ಸೀಸನ್​​ 7 ( Big Boss Sisan 7) ರ ಫೈನಲಿಸ್ಟ್ ಆಗಿ ಮಿಂಚಿದವರು ಭೂಮಿ ಶೆಟ್ಟಿ. ಕಿನ್ನರಿ ಧಾರಾವಾಹಿ ಖ್ಯಾತಿಯ ಭೂಮಿ ಶೆಟ್ಟಿ ಕುಂದಾಪುರ (Kundapura)ದ ಹುಡುಗಿ. ಕಲರ್ಸ್​​​ ಕನ್ನಡ (Colours Kannada) ದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿ ಹಾಗೂ ಬಿಗ್​​ಬಾಸ್​​ ಶೋ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ನಟಿ ಭೂಮಿ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಫ್ಯಾಮಿಲಿಯ ಸಮಾರಂಭದಲ್ಲಿ ಭಾಗಿಯಾಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ನಟಿ ಭೂಮಿ ಶೆಟ್ಟಿ ಥೈಲ್ಯಾಂಡ್​​ (Thailand) ಗೆ ಹೋಗಿ ಬಂದಿದ್ದರು. ಆಗಾಗ ಜಾಲಿ ರೈಡ್ ಗೆ ಹೋಗುವ ಬೆಡಗಿಯೂ, ಇತ್ತೀಚೆಗಷ್ಟೇ ಗೆಳೆಯರೊಂದಿಗೆ ಬುಲೆಟ್​ ಹತ್ತಿ ಭೀಮೇಶ್ವರಿ ನೇಚರ್ ಕ್ಯಾಂಪ್​ಗೆ ಹೋಗಿದ್ದರು. ಭೀಮೇಶ್ವರಿ ನೇಚರ್ ಕ್ಯಾಂಪ್​ಗೆ ಹೋಗಿದ್ದ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿಕೊಂಡಿದ್ದರು. ಬುಲೆಟ್ ಹತ್ತಿ ಕುಳಿತಿರುವ ನಟಿ ಭೂಮಿ ಶೆಟ್ಟಿಯವರ ಫೋಟೋಗಳು ವೈರಲ್ ಆಗಿದ್ದವು. ಮತ್ತೆ ನಟಿ ಭೂಮಿ ಶೆಟ್ಟಿಯನ್ನು ತೆರೆ ಮೇಲೆ ನೋಡುವ ಕಾತುರ ಅಭಿಮಾನಿಗಳಿಗಿದ್ದು, ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

 

View this post on Instagram

 

A post shared by Nandu (@nandu_ofl)

Leave a Reply

Your email address will not be published. Required fields are marked *