ಭವಾನಿ ರೇವಣ್ಣ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ, ನಡುರಸ್ತೆಯಲ್ಲಿ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ವಿಡಿಯೋ ವೈರಲ್!!

ಕೆಲವೊಮ್ಮೆ ಸಿನಿಮಾರಂಗದವರು, ರಾಜಕಾರಣಿಯವರು ತಮ್ಮ ದ-ರ್ಪವನ್ನು ಜನಸಾಮಾನ್ಯರ ಮೇಲೆ ತೋರಿಸುವ ಘಟನೆಗಳು ನಡೆಯುತ್ತವೆ. ಹೌದು, ಮಾಜಿ ಸಚಿವ ಹೆಚ್‌ಡಿ ರೇವಣ್ಣ ಪತ್ನಿ ಹಾಗೂ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ (Bhavani Revanna) ಅವರ ಕಾರಿಗೆ (Car) ಬೈಕ್‌ (Bike) ಡಿ-ಕ್ಕಿ ಹೊ-ಡೆದಿರುವ ಘಟನೆಯೊಂದು ಮೈಸೂರು (Mysuru) ಜಿಲ್ಲೆಯ ಸಾಲಿಗ್ರಾಮ ಬಳಿ ನಡೆದಿದೆ.

ಈ ವೇಳೆಯಲ್ಲಿ ಬೈಕ್‌ನಲ್ಲಿ ಬಂದು ಕಾರಿಗೆ ಡಿ-ಕ್ಕಿ ಹೊಡೆದ ವ್ಯಕ್ತಿಗೆ ಭವಾನಿ ರೇವಣ್ಣ ತೀ-ವ್ರ ತ-ರಾಟೆಗೆ ತೆಗೆದುಕೊಂಡಿದ್ದಾರೆ. ಆ ವ್ಯಕ್ತಿಗೆ ಅ-ವ್ಯಾಚ ಶಬ್ಧಗಳಲ್ಲಿ ಬೈದಿದ್ದು, ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ತಮ್ಮ ಕಾರಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಕ್ಕೆ ಸವಾರನ ಮೇಲೆ ಭವಾನಿ ರೇವಣ್ಣರವರು ತಮ್ಮ ಅ-ಕ್ರೋಶವನ್ನು ಹೊರಹಾಕಿದ್ದು ಮಾನವೀಯತೆಯನ್ನು ಕೂಡ ಮರೆತಿದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

ಬೈಕ್ ಸವಾರನು ಭವಾನಿ ರೇವಣ್ಣನವರ ಕಾರಿಗೆ ಡಿ-ಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಮುಂಭಾಗ ಕೊಂಚ ಜಖಂಗೊಂಡಿದೆ. ಈ ವೇಳೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಆರೋಗ್ಯದ ಬಗ್ಗೆ ವಿಚಾರಿಸದೆಯೇ ತ-ರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಭವಾನಿ ರೇವಣ್ಣನವರು ಕಾರಿನಿಂದ ಇಳಿದು ಸಾಯೋಕೆ 1.5 ಕೋಟಿ ಕಾರೇ ಆಗಬೇಕಿತ್ತಾ, ಸು-ಟ್ಟು ಹಾಕ್ರೋ ಈ ಗಾಡಿನ ಎಂದು ಖಾ-ರವಾಗಿಯೇ ಕೇಳಿದ್ದಾರೆ.

ಕಾರಿನ ಡ್ಯಾಮೇಜ್‌ ಆಗಿರುವುದನ್ನು ನೋಡಿದ ಅವರು ಬೈಕ್‌ ಸವಾರನ ಮೊಬೈಲ್‌ ಕಸಿದುಕೊಂಡು ಬೈಕ್‌ ಕೀ ಕಿತ್ತುಕೊಂಡಿದ್ದು, ” ನಿನಗೆ ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ?’ ಎಂದಿದ್ದಾರೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಸ್ಥಳೀಯರು ‘ಬಿಟ್‌ಬಿಡಿ ಅಕ್ಕ’ ಎಂದಾಗ ‘ಕೊಡ್ತಿಯಾ ₹ 50 ಲಕ್ಷ ರಿಪೇರಿ ಮಾಡಿಸೋಕೆ? ಸ್ಥಳದಲ್ಲಿರುವವರು ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ’ ಅಲ್ಲಿದ್ದವರಿಗೂ ಬಾಯಿಗೆ ಬಂದಂತೆ ಬೈದಿದ್ದಾರೆ.

ಅವನು ಸ-ತ್ತೋಯ್ತಾನೆ ಅಂತ ಅವನ ಬಗ್ಗೆ ಯೋಚೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?. ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ, ಒಂದೂವರೆ ಕೋಟಿ ಗಾಡಿ ಇದು. ಡ್ಯಾಮೇಜ್ ಮಾಡಿದ್ದೀಯಲ್ಲ, ಸಾ-ಯಂಗಿದ್ರೆ ಬಸ್‌ಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರ್ ಡ್ಯಾಮೇಜ್ ಮಾಡೋಕೆ ನೀನ್ಯಾವನು?’ ಎಂದು ಅ-ವ್ಯಾಚವಾಗಿ ಬೈ-ದಿದ್ದಾರೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಭವಾನಿ ರೇವಣ್ಣ ಕಾರು ಚಾಲಕ ಮಂಜುನಾಥ್‌ (Car Driver Manjunath) ಅವರು ಬೈಕ್​ ಸವಾರ ಶಿವಣ್ಣನವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆ (Saligram Police Station) ಯಲ್ಲಿ ಐಪಿಸಿ ಸೆಕ್ಷನ್ 279 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಭವಾನಿ ರೇವಣ್ಣನವರ ವಿರುದ್ಧ ಅ-ಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್​ನಿಂದ ಸವಾರ ಕೆಳಗೆ ಬಿದ್ದಿದ್ದರೂ ಅದನ್ನು ಗಮನಿಸದೇ ತಮ್ಮ ಕಾರಿನ ಬಗ್ಗೆ ಮಾತನಾಡುತ್ತಿದ್ದಾರೆ, ದೊಡ್ಡಗೌಡರ ಸೊಸೆಯಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮಾನವೀಯತೆಗಿಂತ ದುಡ್ಡು ಮುಖ್ಯವಲ್ಲ ಎಂದು ಸೇರಿದಂತೆ ಹಲವು ಕಾಮೆಂಟ್ ಗಳು ಬಂದಿವೆ.

Leave a Reply

Your email address will not be published. Required fields are marked *