Bhavana bold look jamaligudda : ಕನ್ನಡದಲ್ಲಿ ವಿಭಿನ್ನ ಕಥೆ ಹಾಗೂ ಟೈಟಲ್ ಇರುವ ಸಿನಿಮಾಗಳು ತೆರೆಗೆ ಬರುವುದು ಸರ್ವೇ ಸಾಮಾನ್ಯ. ಇದೀಗ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ. ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಹೌದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ಈ ಚಿತ್ರದಲ್ಲಿ ಡಾಲಿ ಧನಂಜಯ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 90ರ ದಶಕದಲ್ಲಿ ನಡೆಯುವ ಕಥೆ ಇದು. ಬಾರ್ ಸಪ್ಲೈಯರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾ ನಿರ್ದೇಶಕ ಕುಶಾಲ್ ಗೌಡ ಆಕ್ಷನ್ ಕಟ್ ಹೇಳಿದ್ದಾರೆ. ಭಾವನಾರವರು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಅದಿತಿ ಪ್ರಭುದೇವ ,ಭಾವನ, ಪ್ರಕಾಶ್, ಬೆಳವಾಡಿ, ಕಾನ್ಸ್ಟೇಬಲ್ ಸರೋಜಾ, ಸತ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. ಭಾವನಾ ರಾಮಣ್ಣ ಈ ಸಿನಿಮಾದಲ್ಲಿ ಖಳನಾಯಕಿಯಾಗಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಬಹು ನಿರೀಕ್ಷೆ ಇದ್ದು ಡಿಸೆಂಬರ್ 30 ಕ್ಕೆ ಜಮಾಲಿ ಗುಡ್ಡ ಸಿನಿಮಾ ತೆರೆ ಕಾಣುತ್ತಿದೆ.
ನಟಿ ಭಾವನಾ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಪರಭಾಷಾ ಸಿನಿಮಾಗಳಲ್ಲಿಯೂ ಸಕ್ರಿಯರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಒಬ್ಬ ಅದ್ಭುತ ಡ್ಯಾನ್ಸರ್ ಆಗಿ ಗುರುತಿಸಿಕೊಂಡವರು. ಇವರು ಹತ್ತು ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿದ್ದಾರೆ. ಭಾವನಾ ಅವರನ್ನು ಒಂದು ಮದುವೆಯಲ್ಲಿ ತುಳು ಸಿನಿಮಾ ನಿರ್ದೇಶಕ ಕೃಷ್ಣಪ್ಪ ಉಪ್ಪುರ್ ಅವರ ಕಣ್ಣಿಗೆ ಬಿದ್ದರು. ಈ ಮೂಲಕ ಭಾವನಾರವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶವು ಸಿಕ್ಕಿತು. ಈ ಅವಕಾಶವನ್ನು ಬಳಸಿಕೊಂಡು ಭಾವನಾ ಸಿನಿಮಾರಂಗದಲ್ಲಿ ನಟಿಯಾಗಿ ಖ್ಯಾತಿ ಗಳಿಸಿಕೊಂಡರು.
ಹುಡುಗಿಯರು ಹುಡುಗರನ್ನು ನೋಡಿದ ತಕ್ಷಣ ಮೊದಲು ಹುಡುಗರ ಯಾವ ಭಾಗವನ್ನು ಗಮನಿಸುತ್ತಾರೆ ಗೊತ್ತಾ? ಇದು ನೀವು ಊಹಿಸಿಯೂ ಇರಲ್ಲ ನೋಡಿ!!
ಅಂದಹಾಗೆ, 1996 ರಲ್ಲಿ ಮರಿಬಲೇ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. 1997 ರಲ್ಲಿ ನೀ ಮುಡಿದ ಮಲ್ಲಿಗೆ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕ ಮನಸ್ಸು ಗೆದ್ದಿದ್ದ ನಟಿ ಭಾವನಾನವರ ಶಾಂತಿ ಸಿನಿಮಾ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿತ್ತು.
Bhavana bold look jamaligudda video :
2016 ರಲ್ಲಿ ನಿರುತ್ತರ ಸಿನಿಮಾದಲ್ಲಿ ನಟಿಸಿದ್ದರು. ಆದಾದ ಬಳಿಕ ಸಿನಿಮಾ ಲೋಕದಿಂದ ದೂರ ಉಳಿದು ಬಿಟ್ಟರು. ಹೌದು ಕೆಲವು ತಿಂಗಳ ಹಿಂದೆ, ಭಾವನಾನವರು ರಾಮಾಚಾರಿ ಧಾರಾವಾಹಿಯಲ್ಲಿ ನಟಿಸುವ ಕಿರುತೆರೆ ಮೇಲೆ ಕಾಣಿಸಿಕೊಂಡಿದ್ದರು. ಆದರೆ ಕೆಲವು ದಿನಗಳ ಹಿಂದೆ, ರಾಮಾಚಾರಿಯಿಂದ ಹೊರ ನಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ರಾಮಾಚಾರಿಯಲ್ಲಿ ಚಾರು ತಾಯಿ ಮಾನ್ಯತಾ ಪಾತ್ರದಲ್ಲಿ ಭಾವನಾ ಅವರು ಅಭಿನಯಿಸುತ್ತಿದ್ದರು. ಆದರೆ, ಹೆಚ್ಚಿನ ಸಿನಿಮಾ ಅವಕಾಶದಿಂದ ಹೊರಬಂದಿದ್ದಾರೋ ಅಥವಾ ರಾಜಕೀಯದಲ್ಲಿ ಇನ್ನು ಹೆಚ್ಚು ಸಕ್ರಿಯರಾಗಬೇಕು ಎನ್ನುವ ಕಾರಣಕ್ಕೆ ಹೊರಬಂದಿದ್ದಾರೋ ಎನ್ನುವುದು ಇನ್ನು ತಿಳಿದುಬಂದಿರಲಿಲ್ಲ . ಆದರೆ ಇದೀಗ ಜಮಾಲಿ ಗುಡ್ಡ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಕಮಲ್ ಮಾಡಲು ಸಜ್ಜಾಗಿದ್ದಾರೆ.