ದಿನಬೆಳಗಾದರೆ ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸದ ವಾಹನಗಳು ವಾಹನ ಪ್ರಿಯರನ್ನು ಆಕರ್ಷಸುತ್ತದೆ. ಅದರಲ್ಲಿ ಇತ್ತೀಚೆಗಿನ ದಿನಗಳಲ್ಲಿ ಇಂಧನಚಾಲಿತ ವಾಹನ ಹಾಗೂ ಎಲೆಕ್ಟ್ರಿಕ್ ವಾಹನಗಳ ನಡುವೆ ಸಾಕಷ್ಟು ಪೈಪೋಟಿ ಇವೆ. ಅದರಲ್ಲಿ ವಾಹನ ಪ್ರಿಯರಂತೂ ಇಂಧನದ ದರವು ಹೆಚ್ಚಾಗುತ್ತಿದ್ದಂತೆ ಎಲೆಕ್ಟ್ರಿಕ್ (Electric) ವಾಹನಗಳ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ವಾಹನ ತಯಾರಕ ಕಂಪೆನಿಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವಾಹನಗಳಲ್ಲಿ ಹೋಂಡಾ ಆಕ್ಟಿವಾ (Honda Activa) ವಾಹನ ಕೂಡ ಒಂದು. ಆದರೆ ಹೆಚ್ಚಿನ ಜನರು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳನ್ನು ಖರೀದಿ ಮಾಡುತ್ತಿದ್ದಾರೆ. ವಾಹನ ಖರೀದಿಸಬೇಕೆಂದು ಕೊಂಡವರು ನಿಮ್ಮ ಬಜೆಟ್ ಗೆ ಹೊಂದುವಂತಹ ವಾಹನಗಳ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಹೋಂಡಾ ಆಕ್ಟಿವಾ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್, DLX, ಮತ್ತು H-Smart, ಬೆಲೆ ರೂ. 75,347 ಮತ್ತು 81,348. ಆನ್ ರೋಡ್ ಬೆಲೆಯು ಸರಿಸುಮಾರು ರೂ. 90,000. 1.2 ಲಕ್ಷ ಬಜೆಟ್‌ನಲ್ಲಿ ಆಕ್ಟಿವಾವನ್ನು ಆಯ್ಕೆ ಮಾಡಿಕೊಂಡರೆ, 30,000 ಹಣವನ್ನು ಉಳಿತಾಯ ಮಾಡಬಹುದು.
ಹಲವಾರು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಸುಮಾರು 1.2 ಲಕ್ಷ ರೂ ಬೆಲೆಗೆ ನಿಮ್ಮ ಕೈ ಸೇರುತ್ತದೆ. ಹೌದು, Ola S1, Ether 450X, TVS iCube, Bajaj Chetak, Hero Vida V1 Plus ಮತ್ತು V1 Pro ಈ ವ್ಯಾಪ್ತಿಯಲ್ಲಿ ಬರುತ್ತದೆ. Ola S1 ಏರ್ ರೂ. 84,999, ಈಥರ್ 450X ರೂ. 98,079, Vida V1 Plus 1.03 ಲಕ್ಷ ರೂ, ಟಿವಿಎಸ್ ಐಕ್ಯೂಬ್ ರೂ. 1.06 ಲಕ್ಷ, ಹಾಗೂ ಬಜಾಜ್ ಚೇತಕ್ ರೂ. 1.11 ಲಕ್ಷ ರೂ ಮೌಲ್ಯವನ್ನು ಹೊಂದಿದೆ.
ಇತ್ತ ಇಂಧನ ಬೆಲೆಯೂ ಹೆಚ್ಚಾಗುತ್ತಿರುವ ಕಾರಣ ವಾಹನದ ಮೈಲೇಜ್ ಅನ್ನು ಗಮನಿಸುವುದು ಬಹಳ ಮುಖ್ಯ. ಹೋಂಡಾ ಆಕ್ಟಿವಾ ಪ್ರತಿ ಲೀಟರ್‌ಗೆ 50 ಕಿಮೀ ಮೈಲೇಜ್ ನೀಡುತ್ತದೆ, ಹೀಗಾಗಿ ಪ್ರತಿ ಕಿಮೀ ವೆಚ್ಚವು ರೂ. 2. ಹೋಲಿಸಿದರೆ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ವೆಚ್ಚವನ್ನು ಹೊಂದಿದೆ. Ola S1 Pro ಪ್ರತಿ ಕಿ.ಮೀಗೆ ಕೇವಲ 17 ಪೈಸೆಯಾಗಿರುತ್ತದೆ. ಹೀಗಾಗಿ ವಾಹನಗಳ ಇಂಧನ ದಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಅದಲ್ಲದೇ ಆಕ್ಟಿವಾವನ್ನು ಸರ್ವಿಸ್ ಸೆಂಟರ್‌ನಲ್ಲಿ ಸರ್ವಿಸ್ ಮಾಡುವುದು ಮತ್ತು ಸಣ್ಣಪುಟ್ಟ ರಿಪೇರಿಗಳಾದ ಆಯಿಲ್ ಚೇಂಜ್ ಮತ್ತು ಸ್ಪೇರ್ ಪಾರ್ಟ್ ರಿಪ್ಲೇಸ್ ಮೆಂಟ್ ಗಳಿಗೆ ಸಾವಿರಾರು ರೂ ವೆಚ್ಚ ತಗಲುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಬ್ಯಾಟರಿ ಕೈ ಕೊಟ್ಟರೆ ಖರೀದಿಯ ವೆಚ್ಚ ಬಹಳ ದುಬಾರಿಯಾಗಿದೆ. ಹೀಗಾಗಿ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಹನಗಳನ್ನು ಖರೀದಿಸುವುದು ಒಳಿತು.