Bengaluru goripalya nitesh : ಪ್ರೀತಿ ಯಾವತ್ತಿದ್ದರೂ ಕುರುಡು, ಈ ಪ್ರೀತಿಗೆ ಕಣ್ಣಿಲ್ಲ. ಅಷ್ಟೇ ಅಲ್ಲದೇ ಪ್ರೀತಿಗೆ ಹಣ ಅಂತಸ್ತು, ಜಾತಿ, ವಯಸ್ಸು ಇದು ಯಾವುದು ಬೇಕಾಗಿಲ್ಲ. ಪರಿಶುದ್ಧ ಮನಸ್ಸಿದರೆ ಸಾಕು, ಒಂದು ಮನಸ್ಸು ಇನ್ನೊಂದು ಮನಸ್ಸಿಗೆ ಮಿಡಿದರೆ ಸಾಕು, ಅಲ್ಲಿಂದ ಪ್ರೀತಿ ತಾನಾಗಿ ಹುಟ್ಟಿಕೊಳ್ಳುತ್ತದೆ. ಆದರೆ ಎಲ್ಲಾ ಪ್ರೀತಿಗಳು ಮದುವೆ ಎಂಬ ಸುಖಾಂತ್ಯ ಕಾಣಬೇಕಾಗಿಲ್ಲ. ಕೆಲವೊಮ್ಮೆ ಪ್ರೀತಿಯೂ ಮುರಿದು ಬೀಳಬೇಕು.
ಇಲ್ಲವಾದರೆ ಮನೆಯವರ ಒತ್ತಾಯಕ್ಕೆ ಮಣಿದು ಗಂಡು ಹೆಣ್ಣು ಇಬ್ಬರೂ ಪ್ರೀತಿಯನ್ನು ತ್ಯಾಗ ಕೂಡ ಮಾಡಬಹುದು. ಆದರೆ ಇಲ್ಲೊಬ್ಬ ಪ್ರೇಮಿಯೂ ತನ್ನ ಪ್ರಿಯತಮೆ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆಂದು ತಿಳಿದು ಮದುವೆ ಮಂಟಪಕ್ಕೆ ನುಗ್ಗಿದ್ದಾನೆ. ಪ್ರೇಮಿಯೊಬ್ಬ ಎಲ್ಲರ ಮುಂದೆ ದೊಡ್ಡ ರಂ-ಪಾಟ ಮಾಡಿ ಕ-ತ್ತು ಕೊ-ಯ್ದುಕೊಂಡು ಆ-ತ್ಮಹತ್ಯೆಗೂ ಯತ್ನಿಸಿದ್ದಾನೆ. ಇಂತಹದೊಂದು ಘಟನೆಯೂ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಹೌದು, ನಿತೇಶ್ ಎಂಬಾತ ಮದುವೆ ಮಂಟಪದಲ್ಲಿ ಗ-ಲಾಟೆ ಮಾಡಿ ಆ-ತ್ಮಹತ್ಯೆಗೆ ಯತ್ನ ಮಾಡಿದವನು. ಈ ನಿತೇಶ್ ಮೂಲತಃ ಬೆಂಗಳೂರಿನ ಗೋರಿಪಾಳ್ಯದವನಾಗಿದ್ದು, ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬಂದಿದ್ದು, ಅಲ್ಲಿಂದ ನೇರವಾಗಿ ದೇವಸ್ಥಾನದ ಪಕ್ಕದಲಿರುವ ಖಾಸಗಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾನೆ. ಕೊನೆಗೆ ಯುವತಿಯ ವಿ-ರುದ್ದ ಕೂಗಾಡಿದ ಪ್ರೇಮಿಯೊಬ್ಬ ನನ್ನ ಪ್ರೀತಿಸಿ ಬೇರೊಬ್ಬನನ್ನು ಮದುವೆಯಾಗ್ತಿದ್ದಿಯಾ ಎಂದು ಗ-ಲಾಟೆ ಮಾಡಿದ್ದಾನೆ.
ಅಷ್ಟೇ ಅಲ್ಲದೇ ಈತನು ರಂ-ಪಾಟ ಮಾಡಿದ್ದಕ್ಕೆ ಯುವತಿಯ ಸಂಬಂಧಿಕರು ಯುವಕನನ್ನ ಥ-ಳಿಸಿದ್ದಾರೆ. ನಿತೇಶ್ ನನ್ನು ಮದುವೆ ಮಂಟಪದಿಂದ ಹೊರಗೆ ಹಾಕಿದ್ದಾರೆ. ಮತ್ತೆ ಈ ಯುವಕ ಹಾಗೂ ಯುವತಿಯ ಕುಟುಂಬದವರ ನಡುವೆ ಗ-ಲಾಟೆ ನಡೆದಿದ್ದು, ಈ ಗ-ಲಾಟೆಯೂ ಜೋರಾಗುತ್ತಿದ್ದಂತೆ, ತನ್ನ ಪ್ರೇಮಿಗಾಗಿಯೇ ಈ ಯುವಕನು ಬ್ಲೇ-ಡ್‌ನಿಂದ ಕು-ತ್ತಿಗೆ ಕೊ-ಯ್ದುಕೊಂಡಿದ್ದಾನೆ.
ಇನ್ನು ಈ ಪ್ರೇಮಿ ನಿತೇಶ್ ಮತ್ತು ಮದುವೆಯಾಗಲು ಹಸೆಮಣೆ ಏರಿರುವ ಯುವತಿ ಈ ಇಬ್ಬರೂ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದಾಗ ಸ್ನೇಹಿತರಾಗಿದ್ದರು. ಈ ಹಳೆ ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಮಾಡಿದಾಗ ಮತ್ತೆ ಇವರಿಬ್ಬರ ಸ್ನೇಹವು ಗಟ್ಟಿಯಾಗಿದೆ, ಇವರಿಬ್ಬರೂ ಸ್ನೇಹಿತರಾಗಿ ಜೊತೆಯಲ್ಲಿ ಸುತ್ತಾಡಿದ್ದಾರೆ. ಈ ಸ್ನೇಹವು ಪ್ರೀತಿಗೆ ತಿರುಗಿದೆ. ಆದರೆ ನಿತೇಶ್ ನನ್ನು ಮದುವೆಯಾಗಲು ಯುವತಿ ನಿರಾಕರಿಸಿದ್ದಳಂತೆ. ಈಗಾಗಲೇ ಅನೇಕ ಬಾರಿ ಮನೆ ಹತ್ತಿರ ಹೋಗಿ ನಿತೇಶ್ ಗ-ಲಾಟೆ ಮಾಡಿದ್ದನು.
ಈತನ ಕಾ-ಟ ತಾಳಲಾಗದೇ ಯುವತಿ ಹಾಗೂ ಆಕೆಯ ಪೋಷಕರು ಗೋರಿಪಾಳ್ಯ ಠಾಣೆಗೆ ದೂ-ರು ನೀಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಕೂಡ ಬೆಂಬಿಡದ ಬೇ-ತಾಳನಂತೆ ಈ ಪಾಗಲ್ ಪ್ರೇಮಿಯೂ ಮದುವೆ ಮಂಟಪಕ್ಕೆ ನುಗ್ಗಿದ್ದು ದೊಡ್ಡ ರಂ-ಪಾಟ ಮಾಡಿದ್ದಾನೆ. ಮದುವೆ ಮಂಟಪದಲ್ಲಿ ಆದ ರಂ-ಪಾಟವನ್ನು ನೋಡಿದ ವರನ ಮನೆಯವರು ಮದುವೆ ಬೇಡ ಎಂದು ಹೋಗಿದ್ದಾರೆ. ಇನ್ನೊಂದೆಡೆ ಮದುವೆ ಮನೆ ಬಳಿ ಬಂದಿದ್ದ ನಿತೇಶ್ ಮೇಲೆ ಯುವತಿಯ ಕಡೆಯವರು ಹ-ಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತಾಗಿ ಯುವಕನು ಹೇಳಿಕೆ ನೀಡಿದ್ದು, ದೊಡ್ಡಬಳ್ಳಾಪುರ ಪೊಲೀಸರು ಯುವತಿಯ ಸಂಬಂಧಿಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ತನಿಖೆ ನಡೆಸುತ್ತಿದ್ದು, ಇತ್ತ ಕ-ತ್ತು ಕೊ-ಯ್ದುಕೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟಿನಲ್ಲಿ ಈ ಪ್ರೇಮಿಯ ರಂಪಾಟವು ಎಲ್ಲರಿಗೂ ತಲೆ ನೋ-ವಾಗಿದ್ದು ಮಾತ್ರ ಸುಳ್ಳಲ್ಲ.