ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯವೇ ನಿಮ್ಮ ಅಂಗೈಯಲ್ಲಿರುವುದು ಪಕ್ಕಾ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಆರೋಗ್ಯವೇ ಭಾಗ್ಯ (Health is Wealth) ಎನ್ನುವ ಮಾತಿದೆ. ಹೀಗಾಗಿ ಮನುಷ್ಯನ ಅತಿ ಅಮೂಲ್ಯ ಸಂಪತ್ತು ಎಂದರೆ ಆತನ ದೇಹ ಹಾಗೂ ಉತ್ತಮವಾದ ಆರೋಗ್ಯ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರ. ಇತ್ತೀಚೆಗಿನ ದಿನಗಳಲ್ಲಿ ನಾನಾ ಕಾರಣಗಳಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಆರೋಗ್ಯವನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ.

ನಮ್ಮ ಆಹಾರ ಶೈಲಿ (Food Style) ಯು ಆರೋಗ್ಯವನ್ನು ನಿರ್ಧರಿಸುತ್ತದೆ. ಆದರೆ ಕೆಲವು ಆಹಾರ ಶೈಲಿಯಿಂದ ಆರೋಗ್ಯ ಲಾಭವು ಅಧಿಕವಾಗಿದೆ. ಕೆಲವರು ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ (Ghee) ತಿನ್ನುವ ಅಭ್ಯಾಸವನ್ನು ಮಾಡಿರುತ್ತಾರೆ. ಆದರೆ ಇದರಿಂದ ಹೆಚ್ಚಿನ ಆರೋಗ್ಯ ಲಾಭ (Health Benefits) ಗಳಿವೆ. ಸಾಮಾನ್ಯವಾಗಿ ನಾನಾ ರೀತಿಯ ಸಿಹಿ ತಿನಿಸುಗಳಲ್ಲಿ ಈ ತುಪ್ಪವನ್ನು ಹೆಚ್ಚಾಗಿ ಬಳಸುತ್ತಾರೆ.

ಆದರೆ ಈ ತುಪ್ಪದಲ್ಲಿ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿ ಜಾಂಶಗಳು ಹೇರಳವಾಗಿವೆ. ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ(Ghee)ವನ್ನು ತಿಂದರೆ ಅದು ಸಹ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗಿದೆ. ಹಾಗಾದ್ರೆ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

* ಬೆಳಗ್ಗಿನ ವೇಳೆಯಲ್ಲಿ ಖಾಲಿ ಹೊಟ್ಟೆಯಲ್ಲಿ ತುಪ್ಪ ವನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರ ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಮೂಲವ್ಯಾಧಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.

* ದಿನನಿತ್ಯ ಖಾಲಿ ಹೊಟ್ಟೆ ತುಪ್ಪ ಸೇವನೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡಲು ಸಾಧ್ಯ. ತುಪ್ಪವು ಹೊಳೆಯುವ ಚರ್ಮವನ್ನು ನೀಡುತ್ತದೆ. ಹೀಗಾಗಿ ಮುಖದ ಸುಕ್ಕುಗಳು ಮತ್ತು ಇತರ ಸಮಸ್ಯೆಗಳನ್ನು ಶಮನ ಮಾಡುತ್ತದೆ.

* ಈ ತುಪ್ಪವು ನಿಮ್ಮ ಹಸಿವನ್ನು ದೀರ್ಘಕಾಲದವರೆಗೆ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಈ ತುಪ್ಪ ಬೆಸ್ಟ್ ಎನ್ನಬಹುದು.

* ಅದರ ಜೊತೆಗೆ ಈ ತುಪ್ಪ ಸೇವನೆಯಿಂದಾಗಿ ಕರುಳಿನ ಆರೋಗ್ಯವನ್ನು ಉತ್ತಮವನ್ನಾಗಿಬಹುದು. ಅದರೊಂದಿಗೆ ದೇಹದಲ್ಲಿರುವ ಮೂಳೆಗಳನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ.

*ಖಾಲಿ ಹೊಟ್ಟೆ ಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ಎದೆ, ಗಂಟಲು ಹಾಗೂ ಮೂಗಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ.

* ತುಪ್ಪ ಸೇವಿಸುವ ಅಭ್ಯಾಸವು ಹೊಂದಿದ್ದರೆ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಹಾಗೂ ಮೆದುಳನ್ನು ಹಲವಾರು ಕಾಯಿಲೆಗಳನ್ನು ದೂರ ಮಾಡುತ್ತವೆ.

Leave a Reply

Your email address will not be published. Required fields are marked *