ದಾಯಾದಿಗಳು ಅಂದಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಅದನ್ನೇ ಹಿಡಿದುಕೊಂಡು ದ್ವೇಷ ಸಾಧಿಸುವುದು ಸರಿಯಲ್ಲ. ಒಮ್ಮೆ ನೀವು ಹಾಗೆ ಮಾಡಿದರೆ ಇಬ್ಬರ ಸಂಸಾರದ ನೆಮ್ಮದಿಯೂ ಹಾಳಾಗುತ್ತೆ. ಆದ್ದರಿಂದ ನೀವು ಯಾರೆಲ್ಲಾ ದಾಯಾದಿಗಳು ಇದ್ದೀರಿ ಜಗಳ ಮನಸ್ತಾಪಗಳನ್ನ ಸಯ್ಯಮದಿಂದ ಬಗೆಹರಿಸಿಕೊಳ್ಳಬೇಕು. ಇಲ್ಲಿ ಒಂದು ಅದೇ ರೀತಿಯ ಕುತೂಹಲಕಾರಿ ಘಟನೆ ನಡೆದಿದೆ. ಅದರ ಬಗ್ಗೆ ನಾವು ಇವತ್ತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಇಲ್ಲೊಂದು ದಾಯಾದಿಗಳ ಕುಟುಂಬ. ದಾಯಾದಿಗಳು ಅಂದರೆ ಇದ್ದೇ ಇರುತ್ತೆ ಒಂದು ಮಾತು. ಇಲ್ಲೂ ಕೂಡ ಹಾಗೆ ಇತ್ತು. ಜಮೀನಿನ ಸಲುವಾಗಿ ಯಾವಾಗಲೂ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಆ ದಾಯಾದಿಗಳ ಜಗಳ ಕೊ’ಲೆಯಲ್ಲಿ ಅಂತ್ಯವಾಗಿದೆ. ಹೌದು ಮಾಡು ಯಮಗಾರ 35 ವರ್ಷ ಎಂಬುವರು ಕೊ-ಲೆಯಾದ ವ್ಯಕ್ತಿಯಾಗಿದ್ದಾರೆ.

ದಾಯಾದಿಗಳಾದ ಶಿವಾಜಿ ಯಮಗಾರ 50 ವರ್ಷ ಹಾಗೂ ಶಿವಾಜಿ ಪುತ್ರ ಸಂಜು ಯಮಗಾರ 24 ವರ್ಷ ಕೂಡಿ ಕಲ್ಲಿನಿಂದ ಜಜ್ಜಿ ಮಾಳು ಯಮಗಾರನನ್ನ ಕಲ್ಲಿನಿಂದ ತಲೆಗೆ ಹೊ-ಡೆದು, ಅತಿಯಾದ ತೆಲೆಯಿಂದ ರ-ಕ್ತ ಸ್ರಾ-ವ ಆದ ಪರಿಣಾಮ ಮಾಳು ಯಮಗಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಗಾಯಾಳು ಮಾಳು ಯಮಗಾರನನ್ನು ಆಗಿಂದಾಗಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮಾಳು ಯಮಗಾರ ಸಾ-ವನ್ನಪ್ಪಿದ್ದಾನೆ.ಮಾಳು ಯಮಗಾರ ತನ್ನ ಜಮೀನಿನಲ್ಲಿ ಆಕಳು ಮೇಯಿಸುತ್ತಿದ್ದ. ಅದು ಶಿವಾಜಿ ಯಮಗಾರನ ಜಮೀನಿಗೆ ಹೋಗುತ್ತಿತ್ತು. ಅಲ್ಲಿನಿಂದ ಶುರುವಾದ ಮಾತು ಕಥೆ ವಿಕೋಪಕ್ಕೆ ಹೋಗಿ ಕೊ-ಲೆಯಲ್ಲಿ ಅಂತ್ಯವಾಗಿದೆ.
ಸ್ನೇಹಿತರೆ,ಇದರಿಂದ ನಾವು ತಿಳಿಯುವುದು ಏನೆಂದರೆ ಬುದ್ಧಿಯನ್ನ ಕೈಗೆ ಕೊಡಬಾರದು. ಏನೇ ಕೆಲಸ ಮಾಡುವ ಮೊದಲು ಸ್ವಲ್ಪ ಯೋಚಿಸಬೇಕು. ಬುದ್ಧಿ ಕೊಟ್ಟ ಸೂಚನೆಯನ್ನು ಒಮ್ಮೆ ಯೋಚಿಸಿ ತೀರ್ಮಾನಿಸುವುದು ಒಳ್ಳೆಯದು. ಹಾಗಾದರೆ ಇವರಿಬ್ಬರೂ ಮಾಡಿದ್ದಾದರೂ ಏನು? ಒಬ್ಬರ ಜೀವನ ಕೊ-ಲೆಯಲ್ಲಿ ಅಂತ್ಯವಾಯಿತು, ಇನ್ನೊಬ್ಬರ ಜೀವನ ಕಂಬಿಯನ್ನು ಎಣಿಸುವಂತೆ ಆಯಿತು. ಒಂದು ನಿಮಿಷ ಯೋಚಿಸಿದ್ದರೆ ಇಬ್ಬರೂ ಪಾರಾಗುತ್ತಿದ್ದರು. ಇದರಿಂದ ನಾವು ತಿಳಿಯುವುದು ಏನೆಂದರೆ ಕೆಲಸ ಮಾಡುವ ಮುಂಚೆ ಮಾತನಾಡುವ ಮುಂಚೆ ಹಲವಾರು ಬಾರಿ ಯೋಚಿಸಬೇಕು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.