ಮದುವೆಯಾದ ಒಂದೇ ತಿಂಗಳಿಗೆ ಹೆಂಡತಿ ಪರಾರಿ. ತಿಳಿದ ಗಂಡ ಮಾಡಿದ್ದೆ ಬೇರೆ.

ಸ್ನೇಹಿತರೆ ಬೆಳಗಾವಿಯಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಎಲ್ಲಾ ಕಡೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸುದ್ದಿ ಮಾಧ್ಯಮಗಳಲ್ಲಿ ಕೂಡ ಇದರ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದ ಚರ್ಚೆ ಉಂಟಾಗಿದೆ. ಹೌದು ನಾವು ಮಾತನಾಡುತ್ತಿರುವುದು ಮದುವೆಯಾದ ಒಂದೇ ತಿಂಗಳಿಗೆ ತನ್ನ ಪ್ರಿಯಕರನ ಜೊತೆಗೆ ಓಡಿಹೋಗಿರುವಂತಹ ಮಹಿಳೆ ಈಗ ಮೃ-ತ ದೇಹದ ರೂಪದಲ್ಲಿ ಪತ್ತೆಯಾಗಿರುವ ಘಟನೆ ಯ ಬಗ್ಗೆ. ಹೌದು ಮದುವೆಯಾದ ಒಂದೇ ತಿಂಗಳಿಗೆ ಓಡಿ ಹೋಗಿರುವಂತಹ ಮಹಿಳೆ ಈಗ ತನ್ನದೇ ಗಂಡನಿಂದ ಕೊ- ಚ್ಚಿ ಕೊ-ಲೆಯಾಗಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ.

ಕೇವಲ ಆಕೆ ಮಾತ್ರವಲ್ಲದೆ ಆಕೆಯ ಪ್ರಿಯಕರನನ್ನು ಕೂಡ ಗಂಡ ಮುಗಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ತೌಫಿಕ್ ಕ್ಯಾಡಿ ಎನ್ನುವಾತ ತನ್ನ ಪತ್ನಿಯಾಗಿರುವಂತಹ ಹೀನಾ ಸುಧಾರಾಣೆ ಹಾಗೂ ಆಕೆಯ ಪ್ರಿಯಕರ ಯಾಸಿನ್ ನನ್ನು ಮುಗಿಸಿ ಈಗ ತಲೆಮರೆಸಿಕೊಂಡಿದ್ದಾನೆ ಎನ್ನುವಂತಹ ಮಾಹಿತಿ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ತಡೆಯಲು ಬಂದ ಇಬ್ಬರು ವ್ಯಕ್ತಿಗಳ ಮೇಲೆ ಕೂಡ ಮಾರ-ಣಾಂತಿಕ ಹ-ಲ್ಲೆ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದ್ದು ಅವರಿಬ್ಬರನ್ನು ಈಗಾಗಲೇ ತೀವ್ರ ನಿಗಾಘಟಕಕ್ಕೆ ಸೇರಿಸಲಾಗಿದೆ.

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ತೌಫಿಕ್ ಹಾಗೂ ಹೀನಾ ಇಬ್ಬರಿಗೂ ಕೂಡ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದು ಆದರೆ ಮದುವೆಯಾದ ಮೊದಲನೇ ತಿಂಗಳಿಗೆ ತನ್ನ ಪ್ರಿಯಕರ ಜೊತೆಗೆ ಹೀನ ಓಡಿ ಹೋಗಿದ್ದಳು. ಆದರೆ ಮತ್ತೆ ರಾಜಿ ಪಂಚಾಯಿತಿ ಮಾಡಿಸಿದ ಸಂದರ್ಭದಲ್ಲಿ ಇವರಿಬ್ಬರ ಮದುವೆಯನ್ನು ಮುರಿದು ಹಾಕಿ ಅವಳನ್ನು ಅವಳ ಪ್ರಿಯಕರನ ಜೊತೆಗೆ ಮದುವೆ ಮಾಡಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿತ್ತು.

ಇದು ತೌಫಿಕ್ ನಿಗೆ ಬಹಳಷ್ಟು ಕೋಪವನ್ನು ತರಿಸಿತು ಎಂಬುದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಅವಳ ಮನೆಗೆ ಹೋಗಿ ಇಬ್ಬರನ್ನು ಕೂಡ ಕೊ-ಚ್ಚಿ ಬಂದಿದ್ದಾನೆ ಎಂಬುದಾಗಿ ತಿಳಿದು ಬಂದಿದ್ದು ಈಗಾಗಲೇ ಈ ಪ್ರಕರಣದ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯಕ್ಕೆ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

Leave a Reply

Your email address will not be published. Required fields are marked *