Beer health benefits : ಔಷಧೀಯ ಪ್ರಮಾಣದಲ್ಲಿ ಬಿಯರ್ ಅನ್ನು ಸೇವಿಸಿದರೆ ಹಲವಾರು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗಬಹುದು. ಕುಡಿಯುತ್ತಾರೆಂದರೆ ಸಾಕು ಹಳೆಯ ಜನರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ಸ್ವಲ್ಪ ಕುಡಿಯುವವನನ್ನು, ಅಧಿಕವಾಗಿ ಕುಡಿಯುತ್ತಲೇ ಇರುವವನನ್ನು ಒಂದೇ ರೀತಿ ಕಾಣುತ್ತಾರೆ.
ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎನ್ನದೆ ಉಳಿದ ಆಹಾರವನ್ನು ಸೇವಿಸದೆ ಕೇವಲ ಬಿಯರ್ ಒಂದನ್ನೇ ಕುಡಿದುಕೊಂಡು ತೇಲಾಡುತ್ತಿರುವವರು ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದರೆ ತಪ್ಪೇನಿಲ್ಲ. ಆದರೆ ನಿಯಮಿತ ಸೇವನೆ ಆರೋಗ್ಯದ ದೃಷ್ಟಿಯಿಂದ ಹಿತವಾಗಿದೆ. ಪಾನೀಯಗಳಲ್ಲಿ ಒಂದಾದ ಬಿಯರ್ ಅನ್ನು ಹುಡುಗ ಹುಡುಗಿ ಎಂಬ ಭೇದವಿಲ್ಲದೆ ಕುಡಿಯುತ್ತಾರೆ.
ನಿಯಮಿತವಾದ ಬಿಯರ್ ಕುಡಿತ ಆರೋಗ್ಯಕ್ಕೆ ಹಿತ…!! Beer benefits
ಬಿಯರ್ ಅನ್ನು ಹಣ್ಣುಗಳ ತಿರುಳನ್ನು ಮತ್ತು ಧಾನ್ಯದ ರಸವನ್ನು ಅಲ್ಪ ಪ್ರಮಾಣದ ಆಲ್ಕೋಹಾಲ್ ನೊಂದಿಗೆ ಸೇರಿಸಿ ಸಿದ್ಧಗೊಳಿಸುತ್ತಾರೆ. ಬಿಯರ್ ನ ಕುಡಿತದಿಂದ ಚೈತನ್ಯ ಲಭಿಸುವುದರೊಂದಿಗೆ ದೇಹಕ್ಕೆ ಶಕ್ತಿಯೂ ದೊರಕುತ್ತದೆ. ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರವನ್ನು ಸೇವಿಸುವ ಮುಂಚೆಯೇ ಸ್ವಲ್ಪ ಬಿಯರ್ ಅನ್ನು ಕುಡಿದರೆ ಸುಖ ನಿದ್ದೆಯನ್ನು ಪಡೆಯಬಹುದು.
ಸೀಮಿತವಾಗಿ ಬಿಯರ್ ಅನ್ನು ಕುಡಿದರೆ ಹೃದಯಘಾತದ ಪ್ರಮಾಣವನ್ನು ಕಡಿಮೆಗೊಳಿಸಬಹುದು ಅಲ್ಲದೆ ಮಧುಮೇಹದ ಬೆಳವಣಿಗೆಯನ್ನು ಕುಂಟಿತಗೊಳಿಸಬಹುದು. ಮೂಲೆಗಳ ಬಲವರ್ಧನೆಗೆ ಸಹಕಾರಿಯಾಗುವ ಸಿಲಿಕಾನ್ ಅನ್ನು ಬಿಯರ್ ಹೊಂದಿರುವುದರಿಂದ, ಮೂಳೆಗಳು ಶಕ್ತಿಯುತವಾಗಿರಲು ಸಹಕಾರಿಯಾಗುತ್ತವೆ.
Beer health benefits :
ಶೀತಲವಾಗಿರುವ ಬಿಯರ್ ಗಳು ಬಾಯಲ್ಲಿ ಕೊಳೆತ ಆಹಾರಗಳಿಂದ ಉಂಟಾಗುವ ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನು ತಡೆಯುವಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಹಲ್ಲುಗಳಲ್ಲಿನ ಕುಳಿಯನ್ನು ತಡೆಗಟ್ಟಬಹುದು.ಬಿಯರ್ ಕುಡಿಯುವುದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚಾಗುತ್ತದೆ.
ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ ತಕ್ಷಣ ಹೀಗೆ ಮಾಡಿ, ಮುಳ್ಳು ಸಲೀಸಾಗಿ ಹೊರಬರುತ್ತದೆ! ವಿಶೇಷ ಮಾಹಿತಿ ಇಲ್ಲಿದೆ!!
ಇದರಿಂದ ಮೂತ್ರಪಿಂಡಗಳಲ್ಲಿ ಕಾಣಿಸಿಕೊಳ್ಳುವ ಕಲ್ಲುಗಳ ಸಮಸ್ಯೆಯಿಂದ ದೂರವಿರಬಹುದು. ಸಣ್ಣ ಪುಟ್ಟ ಕಲ್ಲುಗಳು ಕಾಣಿಸಿಕೊಂಡರು ಮೂತ್ರನಾಳಗಳ ಮೂಲಕ ಸಲೀಸಾಗಿ ಹೊರ ಹೋಗುತ್ತವೆ. ಬಿಯರ್ ಕುಡಿತವು ಇಷ್ಟೊಂದು ಆರೋಗ್ಯಕರವಾಗಿದೆ ಎಂಬುದನ್ನು ತಿಳಿದುಕೊಂಡ ನೀವು ನೆನಪಿನಲ್ಲಿಡಬೇಕಾದ ವಿಷಯವೆಂದರೆ ಕುಡಿತವು ಚಟವಾಗದೆ ನಿಯಮಿತವಾಗಿರಬೇಕು ಎಂಬುದು.
ಇನ್ನೊಂದು ಪ್ರಮುಖ ಉಪಯೋಗ ಏನೆಂದರೆ ಬಿಯರ್‌ನಲ್ಲಿ ವಿಟಮಿನ್ B12 (vitamin) ಹಾಗೂ ಫಾಲಿಕ್ ಆಮ್ಲಗಳಿದ್ದು , ಇವು ಬಿಯರ್ ಅನ್ನು ಸೇವಿಸದವರ ದೇಹಕ್ಕಿಂತ , ಬಿಯರ್ ಅನ್ನು ಸೇವಿಸುವವರ ದೇಹದಲ್ಲಿ ಅತಿಯಾಗಿ ಕ೦ಡುಬರುತ್ತದೆ.

ವಿಟಮಿನ್ ಬಿ-12 (ಕೋಬಾಲಾಮಿನ್) ಕೆಂಪು ರ’ಕ್ತ ಕಣಗಳ ರಚನೆ, ಜೀವಕೋಶದ ಚಯಾಪಚಯ, ನರಗಳ ಕಾರ್ಯ ಮತ್ತು ಡಿಎನ್‌ಎ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಆನುವಂಶಿಕ ಮಾಹಿತಿಯನ್ನು ಸಾಗಿಸುವ ಜೀವಕೋಶಗಳೊಳಗಿನ ಅಣುಗಳು. Vitamin B-12 ನ ಆಹಾರ ಮೂಲಗಳಲ್ಲಿ ಕೋಳಿ,, ಮೀನು ಮತ್ತು ಡೈರಿ ಉತ್ಪನ್ನಗಳು ಜೋತೆ beer ಕೂಡ ಸೇರಿದೆ.
ಬಿಯರ್ ಕುಡಿಯುವುದರಿಂದ ದೇಹದ ಮೂಳೆಗಳ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ದೇಹಕ್ಕೆ ಟಾನಿಕ್ ಆಗಿಯೂ ಸಹ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಮೂಳೆಗಳನ್ನು ಸದೃಢ ಆಗಿರಸಲು ಸಿಲಿಕಾನ್ ಅಂಶ ಸಹಾಯ ಮಾಡುತ್ತದೆ. ಬಿಯರ್ ನಲ್ಲಿ ಸಿಲಿಕಾನ್ ಅಂಶ ಉತ್ತಮ ಪ್ರಮಾಣದಲ್ಲಿ ಹೊಂದಿರುತ್ತದೆ. ತಣ್ಣಗೆ ಇರುವ ಬಿಯರ್ ನಿಮ್ಮ ಹಲ್ಲುಗಳಲ್ಲಿ ಕೊಳೆಯುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ