Bannerghatta National park savitramma story : ಪ್ರಾಣಿಪಕ್ಷಿಗಳು ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು, ಬಹಳ ಪ್ರೀತಿ ಕೂಡ. ಹೀಗಾಗಿ ಕೆಲವರು ಶ್ವಾನ ಹಾಗೂ ಬೆಕ್ಕು ಗಳನ್ನು ಸಾಕುವುದನ್ನು ಸಹಜವಾಗಿಯೇ ನೋಡಿರುತ್ತೇವೆ. ಕೆಲವರು ಮನುಷ್ಯರಿಗಿಂತ ಪ್ರಾಣಿಗಳ ಮೇಲೆಯೇ ಹೆಚ್ಚು ಪ್ರೀತಿ ತೋರಿಸುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸೋಶಿಯಲ್ಆ ಮೀಡಿಯಾದಲ್ಲಿ ವೈರಲ್ದ ಆಗುತ್ತಿರುತ್ತದೆ. ಪ್ರಾಣಿಗಳಿಗೆ ತಾಯಿ ಪ್ರೀತಿ ನೀಡುತ್ತಿರುವ ಈಕೆಯ ಹೆಸರು ಚಿರತೆತಾಯಿ ಸಾವಿತ್ರಮ್ಮ (Savitramma). ಇದೇನಪ್ಪಾ ಇವರ ಹೆಸರು ಚಿರತೆ ತಾಯಿ ಸಾವಿತ್ರಮ್ಮ ಇದೇ ಎಂದು ಶಾಕ್ ಆಗಬಹುದು. ಆದರೆ ಚಿರತೆ ತಾಯಿ ಸಾವಿತ್ರಮ್ಮ ಎಂದು ಕರೆಯಲು ಕಾರಣ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಸಲಿ ವಿಚಾರವಿದೆ.
ಗಂಡನ ಸಾವಿನ ನಂತರದಲ್ಲಿ ಬದುಕು ಸಾಗಿಸಲು ಸಾವಿತ್ರಮ್ಮನವರಿಗೆ 2002ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerughatta National Park) ದಲ್ಲಿ ಕೆಲಸ ಸಿಕ್ಕಿತು. ಅಲ್ಲಿನ ಆಸ್ಪತ್ರೆಯಲ್ಲಿ ತಾಯಿಯನ್ನು ಕಳೆದುಕೊಂಡ ಅಥವಾ ರೋಗಗ್ರಸ್ಥ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದರು. ಸಾವಿತ್ರಮ್ಮನವರ ಈ ಕೆಲಸದ ಬಗ್ಗೆ ‘ಡೆಕ್ಕನ್ ಹೆರಾಲ್ಡ್’ (Deccan Herald) ವರದಿ ಮಾಡಿದ್ದು, ಈ ವಿಚಾರವೂ ಎಲ್ಲರೂ ಶಾಕ್ ಆಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ The Elephant Whisperers ನ ಸಾವಿತ್ರಮ್ಮರವರು ಚಿರತೆಯ ಮರಿಯೊಂದನ್ನು ಸ್ವಂತ ಮಗುವಿನಂತೆ ಎತ್ತಿಕೊಂಡು ಮುದ್ದಿಸುತ್ತಿದ್ದಾರೆ. ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಅವೂ ಮಕ್ಕಳಿದ್ದಂತೆ. ಮುದ್ದಿನಿಂದ ಮಾತಾಡಿಸಿದರಷ್ಟೇ ಸರಿಯಾಗಿ ಉಣ್ಣುತ್ತವೆ, ಕಕ್ಕ ಮಾಡುತ್ತವೆ ಎನ್ನುವುದು ಅವರ ಮನದಾಳದ ಮಾತು. ಹೀಗಾಗಿ ಬನ್ನೇರು ಘಟ್ಟದಲ್ಲಿರುವ ಅನೇಕ ಪ್ರಾಣಿಗಳಿಗೆ ಸಾವಿತ್ರಮ್ಮ ತಾಯಿ ಪ್ರೀತಿಯನ್ನು ನೀಡುತ್ತಿದ್ದಾರೆ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆನೀಡಿದ್ದಾರೆ. ‘ಇಂಥ ಹೃದಯಸ್ಪರ್ಶೀ ಸುದ್ದಿ ಕೊಟ್ಟದ್ದಕ್ಕೆ ವಂದನೆಗಳು. ಇದು ನಮ್ಮಲ್ಲಿ ಭರವಸೆ ಮೂಡಿಸುತ್ತದೆ. ಎಂಥಾ ಸೊಗಸಿದು! ಸಾವಿತ್ರಮ್ಮ ಅಸಾಧಾರಣ ಮನುಷ್ಯಳು’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, “ಅವರು ಸಹಾನುಭೂತಿ ಹಾಗೂ ಪ್ರೀತಿಯಿಂದ ಪ್ರಾಣಿಗಳ ಕಾಳಜಿ ಮಾಡುವುದು ಸ್ಪಷ್ಟ.
ಆದರೆ ಅವರು ಹೇಳುವ ಕೆಲವು ವಿಧಾನಗಳು ವೈಜ್ಞಾನಿಕವಾಗಿ ಅಸಮರ್ಪಕ ಮತ್ತು ಅವುಗಳು ಚಿರತೆಗಳಿಗೆ ಜೀವಕ್ಕೆ ಮಾರಕವಾಗಬಹುದು’ ಎಂದಿದ್ದಾರೆ. ಸಾವಿತ್ರಮ್ಮನವರು ಚಿರತೆ ಮರಿಗಳಿಗೆ ನೀಡುತ್ತಿರುವ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಾವಿತ್ರಮ್ಮನವರ ಕೆಲಸವನ್ನು ಶ್ಲಾಘೀಸಿದ್ದಾರೆ.