ಪತಿಗೆ ಡೈವೋರ್ಸ್ ನೀಡಿ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಮದುವೆ, ಆದರೆ ಕೊನೆಗೆ ಯುವತಿ ಮಾಡಿಕೊಂಡದ್ದೇನು ಗೊತ್ತಾ? ತಿಳಿದರೆ ಬೆಚ್ಚಿ ಬೀಳ್ತಿರಾ

ಭಾರತೀಯರು ಮದುವೆ ನಂತರದಲ್ಲಿ ಹುಟ್ಟಿಕೊಳ್ಳುವ ಗಂಡ ಹೆಂಡತಿ ಸಂಬಂಧಕ್ಕೆ ಬೇರೆಯದ್ದೇ ಮಹತ್ವವನ್ನು ನೀಡಿದ್ದಾರೆ. ಹೀಗಾಗಿ ಹೆಚ್ಚಿನವರು ಈ ಸಂಬಂಧವನ್ನು ಪವಿತ್ರ ಸಂಬಂಧವೆಂದೇ ಭಾವಿಸಿದ್ದಾರೆ. ಆದರೆ ಈ ನಡುವೆ ದಾಂಪತ್ಯ ಜೀವನದಲ್ಲಿ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಿದೆ. ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ಸಂಸಾರಗಳು ಬೀದಿಗೆ ಬೀಳುತ್ತಿದೆ.

ಅದಲ್ಲದೇ ಪತಿಗೆ ಗೊತ್ತಿಲ್ಲದಂತೆ ಪತ್ನಿಯು ಹಾಗೂ ಪತ್ನಿಗೆ ಗೊತ್ತಿಲ್ಲದ ಹಾಗೆ ಪತಿಯು ಬೇರೆ ವ್ಯಕ್ತಿಯ ಮೋ-ಹಕ್ಕೆ ಬೀಳುತ್ತಿದ್ದು ಇದು ದು-ರಂತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದರೆ ತಪ್ಪಾಗಲ್ಲ. ಇಂತಹದೊಂದು ಘಟನೆಯು ಬೆಂಗಳೂರಿನಲ್ಲಿಯೇ (Banglore) ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಅ-ಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದ ವಿವಾಹಿತ ಮಹಿಳೆಯೊಬ್ಬರು ಬೆಂಗಳೂರಿನ ಹೆಗ್ಗನಹಳ್ಳಿ (Hegganahalli) ಯಲ್ಲಿ ತಮ್ಮ ನಿವಾಸದಲ್ಲಿ ಜೀವ ಕಳೆದುಕೊಂಡ ಘಟನೆಯೊಂದು ನಡೆದಿತ್ತು.

ಮೃ-ತ ವ್ಯಕ್ತಿಯನ್ನು ಪವಿತ್ರಾ (Pavitra) ಎಂದು ಗುರುತಿಸಲಾಗಿತ್ತು.ಪವಿತ್ರಾ ಅವರ ಪತಿ ಚೇತನ್ ಗೌಡ (Chetan Gowda) ಅವರು ಸುಮುಖ್ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ (Sumukh Merchants Private Limited) ಮಾಲೀಕರಾಗಿದ್ದರು. ಪವಿತ್ರಾ ಕಂಪನಿಯಲ್ಲಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದು, ಚೇತನ್ ನನ್ನು ಪ್ರೀತಿಸಿದ್ದಳು. ಈಗಾಗಲೇ ಮದುವೆಯಾಗಿದ್ದ ಪವಿತ್ರಾಳು ಮೊದಲ ಪತಿಗೆ ವಿ-ಚ್ಛೇದನ ನೀಡಿ ಚೇತನ್ ನನ್ನು ಮದುವೆ ಮಾಡಿಕೊಂಡಿದ್ದಳು.

ಆದರೆ ಈ ಚೇತನ್ ಮಾತ್ರ ಬೇರೊಬ್ಬ ಮಹಿಳೆ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರವಾಗಿ ದಂಪತಿಗಳ ನಡುವೆ ಜಗಳವಾಗುತ್ತಿತ್ತು.ಕಳೆದ ಜುಲೈ 2 ರಂದು ಪವಿತ್ರಾ ತನ್ನ ಪತಿ ತನ್ನ ಮೇಲೆ ಹ-ಲ್ಲೆ ನಡೆಸಿದ ಕಿರು ಆಡಿಯೊ ಕ್ಲಿಪ್ ಮತ್ತು ಡೆ-ತ್ ನೋಟ್ ಅನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಪ್‌ಲೋಡ್ ಮಾಡಿದ್ದಳು. ಮಗಳ ವಾಟ್ಸಾಪ್ ಸ್ಟೇಟಸ್ ನೋಡಿದ ಪವಿತ್ರಾಳ ತಾಯಿ ಪದ್ಮಾ (Padma) ಅವರಿಗೆ ಕರೆ ಮಾಡಲು ಪ್ರಯತ್ನಿಸಿದ್ದು, ಆದರೆ ಪವಿತ್ರಾ ತಾಯಿ ಕರೆಯನ್ನು ಸ್ವೀಕರಿಸಿರಲಿಲ್ಲ.

ಮಗಳು ಕರೆ ಸ್ವೀಕರಿಸದ ಕಾರಣ ತಾಯಿಯು ಹೆಗ್ಗನಹಳ್ಳಿಯಲ್ಲಿರುವ ಪವಿತ್ರಾ ನಿವಾಸಕ್ಕೆ ಧಾವಿಸಿದ್ದು, ಆ ವೇಳೆಗಾಗಲೇ ಪವಿತ್ರಾ ಸೀಲಿಂಗ್ ಫ್ಯಾನ್‌ಗೆ ನೇ-ಣು ಬಿಗಿದ ಸ್ಥಿತಿಯಲ್ಲಿ ಪ-ತ್ತೆಯಾಗಿದ್ದರು. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಅವರು, ಮಗಳ ಸಾವಿಗೆ ಪವಿತ್ರಾಳ ಪತಿ ಮತ್ತು ಇನ್ನೊಬ್ಬ ಮಹಿಳೆ ಕಾರಣ ಎಂದು ಆ-ರೋಪ ಮಾಡಿದ್ದರು.ಪದ್ಮಾ ಅವರು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೂರು ನೀಡಿದ್ದರು.

ದೂರಿನ್ವಯ ಕೆಂಗೇರಿ ಪೊಲೀಸ (Kengeri Police) ರು ಚೇತನ್ ಮತ್ತು ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ದುಡುಕಿನ ನಿರ್ಧಾರಕ್ಕೆ ಬಾಳಿ ಬದುಕಬೇಕಾಗಿದ್ದ ಈ ಮಹಿಳೆಯು ಜೀವ ಕಳೆದುಕೊಂಡದ್ದು ವಿಪರ್ಯಾಸವಲ್ಲದೇ ಮತ್ತೇನು ಅಲ್ಲವೇ.

Leave a Reply

Your email address will not be published. Required fields are marked *