ಸುಪ್ರೀಂ ಕೋರ್ಟ್ ಆದೇಶ ಕೊಟ್ಟರೂ ಸಹ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡದ ಏಕೈಕ ಕರ್ನಾಟಕದ ನಾಯಕ ಯಾರು ಗೊತ್ತಾ? ಎಲ್ಲರನ್ನೂ ಎದುರು ಹಾಕಿ ಈತ ಗೆದ್ದಿದ್ದು ಹೇಗೆ?

ಕಾವೇರಿ ವಿವಾದದ ಕಿಚ್ಚು ಮತ್ತೆ ಉದ್ಭವವಾಗಿದೆ. ಜನರಲ್ಲಿ ಆಕ್ರೋಶವನ್ನು ಮೂಡಿಸುತ್ತಿದೆ. ರಾಜ್ಯದ ರೈತರನ್ನು ಕಂಗಡಿಸುವಂತೆ ಮಾಡಿದೆ. ಸುಪ್ರೀಂ ಕೋರ್ಟ್ ನ ತೀರ್ಪನ್ನ ಧಿಕ್ಕರಿಸಲಾಗದೆ ರಾಜ್ಯ ಸರ್ಕಾರವೂ ಕೈ ಕಟ್ಟಿ ಕೂತಿದೆ. ಹಾಗಾದ್ರೆ ನಡೆದದ್ದು ಏನು? ತಮಿಳುನಾಡಿಗೆ 5000 ಕ್ಯೂ ಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆಜ್ಞೆಯನ್ನು ನೀಡಿದೆ. ಇದರಿಂದ ಮೈಸೂರು ಹಾಗೂ ಮಂಡ್ಯ ಭಾಗದ ಜನರು ತುಂಬಾ ರೊಚ್ಚಿಗೆದ್ದಿದ್ದಾರೆ. ಬಂಗಾರಪ್ಪನಂತಹ ನಾಯಕ ನಮಗೆ ಇನ್ನೂ ಬೇಕು ಅಂತ ಹೇಳುತ್ತಿದ್ದಾರೆ. ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಹಾಗಾದ್ರೆ ಆ ಬಂಗಾರಪ್ಪನವರ ಸ್ಟೋರಿ ಏನು ಅಂತ ತಿಳಿದುಕೊಳ್ಳೋಣ.

ಅಂದು 1991ನೇ ಇಸ್ವಿ. ಕಾವೇರಿ ವಿವಾದ ಎಲ್ಲರನ್ನ ತಲ್ಲಣಗೊಳಿಸಿತ್ತು. ಆಗ ತಮಿಳುನಾಡಿನಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಆಗಿದ್ದರು. ತಮಿಳುನಾಡಿನ ಸರ್ಕಾರ ಕರ್ನಾಟಕದಿಂದ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿತ್ತು. ಆಗ ಪ್ರಾಧಿಕಾರವು ಎರಡು ಕಡೆಯ ವಾದ ವಿವಾದಗಳನ್ನು ನೋಡಿಕೊಂಡು ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್ ನ ಆದೇಶವನ್ನು ಧಿಕ್ಕರಿಸಿ ತಮಿಳುನಾಡಿಗೆ ನೀರು ಬಿಡದ ಬಂಗಾರಪ್ಪ, ಅಂತಹ ಸಿಎಂ ನಮಗೆ ಮತ್ತೆ ಬೇಕು ಎಂದು ಹಠ ಹಿಡಿದ ಕರುನಾಡ ಜನತೆ.

ಆದರೆ ಬಂಗಾರಪ್ಪನವರು ಇದಕ್ಕೆ ಒಪ್ಪಿಕೊಳ್ಳಲಿಲ್ಲ ಸದನದಲ್ಲಿ ಚರ್ಚೆಯನ್ನ ನಡೆಸಿದರು. ಆಗ ಸದನದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ರಕ್ತವನ್ನಾದರೂ ಕೊಡುತ್ತೇವೆ ಆದರೆ ನೀರನ್ನು ಕೊಡುವುದಿಲ್ಲ ಅಂತ ಭಾಷಣವನ್ನು ಕೂಡ ಮಾಡಿದರು. ಸದಾ ಬಂಗಾರಪ್ಪನವರು ಯಾರಿಂದ ಏನೇ ಒತ್ತಡ ಬಂದರೂ ನಾವು ಕಾವೇರಿ ನೀರನ್ನು ಬಿಡುವುದಿಲ್ಲ ಎಂದು ಹಠ ಹಿಡಿದು ಕೂತರು.ಆದರೆ, ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ನ ಮೊರೆ ಹೋಯಿತು.

ಆಗ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಪ್ರಾಧಿಕಾರವು ತಮಿಳುನಾಡಿಗೆ 205 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ನೀಡಿದ ಆದೇಶವನ್ನೇ ಪಕ್ಕಕ್ಕಿಟ್ಟುಕೊಂಡು, ಕರ್ನಾಟಕದ ಮೇಲೆ ಒತ್ತಡವನ್ನ ಹೇರಲು ಪ್ರಯತ್ನಿಸಿತು. ಆದರೆ ಬಂಗಾರಪ್ಪನವರು ಇದು ಯಾವುದಕ್ಕೂ ಬಗ್ಗಲಿಲ್ಲ. ಸುಪ್ರೀಂ ಕೋರ್ಟಿನಲ್ಲಿ ತಮಿಳುನಾಡು ಸಲ್ಲಿಸಿದ ಆಕ್ಷೇಪಕ್ಕೆ ರಾಜ್ಯ ಸರ್ಕಾರದಿಂದಲೂ ಕೂಡ ತಡೆಯನ್ನು ಹಾಕಿದರು. ಹೀಗೆ ಬಂಗಾರಪ್ಪನವರು ಯಾವುದೇ ಒತ್ತಡಕ್ಕೆ ಜಗ್ಗಲಿಲ್ಲ ಬಗ್ಗಲಿಲ್ಲ.

ನೀರು ನಮ್ಮದು ಅವರು ಕೇಳಿದಷ್ಟು ನೀರನ್ನು ಕೊಡುವುದು ಸಾಧ್ಯವಿಲ್ಲ. ನೀವು ಪಟ್ಟು ಬಿಡಬೇಡಿ ಎಂದು ಪ್ರತಿಭಟನಾಕಾರರಿಗೆ ಹುರಿದುಂಬಿಸಿದರು. ಅದಕ್ಕಾಗಿ ಜನ ಇವತ್ತು ಬಂಗಾರಪ್ಪನವರನ್ನ ಹಾಗೂ ಆ ದಿನಗಳನ್ನು ನೆನೆಸಿಕೊಳ್ಳುತ್ತಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *